NDTV survey: ನರೇಂದ್ರ ಮೋದಿ ಸರ್ಕಾರದ ಕೆಲಸಗಳು ತೃಪ್ತಿ ನೀಡಿವೆ ಎಂದ 55% ಜನರು

ನವದೆಹಲಿ, ಮೇ. 24: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿವಿಧ ರಂಗಗಳಲ್ಲಿನ ಕೆಲಸದಿಂದ ಅರ್ಧಕ್ಕಿಂತ ಹೆಚ್ಚು ಜನರು ತೃಪ್ತರಾಗಿದ್ದಾರೆ ಎಂದು 'ಪಬ್ಲಿಕ್ ಒಪಿನಿಯನ್' ಎಂಬ ವಿಶಿಷ್ಟ ಎನ್‌ಡಿಟಿವಿ ಸಮೀಕ್ಷೆಯು ತಿಳಿಸಿದೆ. ಪ್ರಧಾನಿ ಮೋದಿಯವರ ಒಂಬತ್ತು ವರ್ಷಗಳ ಆಡಳಿತದ ಪರಿಶೀಲನೆಯನ್ನು ಸಮೀಕ್ಷೆ ನಡೆಸಿದೆ.

ಕರ್ನಾಟಕದ ಸೋಲಿನ ಹೊರತಾಗಿಯೂ, ಪ್ರಧಾನಿಯವರ ಜನಪ್ರಿಯತೆ ಹಾಗೆ ಉಳಿದಿದೆ ಮತ್ತು ಬಿಜೆಪಿಯ ಮತ ಹಂಚಿಕೆ ಸ್ಥಿರವಾಗಿದೆ ಎಂದು ಸಮೀಕ್ಷೆ ಕಂಡು ಹಿಡಿದಿದೆ. 19 ರಾಜ್ಯಗಳು ಮತ್ತು 71 ಲೋಕಸಭಾ ಕ್ಷೇತ್ರಗಳಾದ್ಯಂತ 7,000 ಕ್ಕೂ ಹೆಚ್ಚು ಜನರನ್ನು ಸಮೀಕ್ಷೆಯಲ್ಲಿ ಒಳಗೊಳ್ಳಲಾಗಿದೆ. ಇದರಲ್ಲಿ ಶೇಕಡಾ 55 ಕ್ಕಿಂತ ಹೆಚ್ಚು ಜನರು ಕಳೆದ ಒಂಬತ್ತು ವರ್ಷಗಳಲ್ಲಿ ಸರ್ಕಾರದ ಕೆಲಸದಿಂದ ಸಂಪೂರ್ಣವಾಗಿ ಅಥವಾ ಭಾಗಶಃ ತೃಪ್ತರಾಗಿರುವುದಾಗಿ ಹೇಳಿದ್ದಾರೆ.

NDTV survey: Over 55% People satisfied with PM Modi-led governments work

ಸಮೀಕ್ಷೆಗೆ ಪ್ರತಿಕ್ರಿಯಿಸಿದವರಲ್ಲಿ ಶೇಕಡಾ 17 ರಷ್ಟು ಜನರು ಮೋದಿ ಸರ್ಕಾರದ ಕೆಲಸಗಳಿಂದ ಸಂಪೂರ್ಣವಾಗಿ ತೃಪ್ತಿ ಹೊಂದಿರುವುದಾಗಿ ಹೇಳಿದ್ದಾರೆ. ಶೇಕಡಾ 38 ರಷ್ಟು ಜನರು ಭಾಗಶಃ ತೃಪ್ತರಾಗಿರುವುದಾಗಿ, ಶೇಕಡಾ 19 ರಷ್ಟು ಜನರು ಸ್ವಲ್ಪ ನಿರಾಶೆಗೊಂಡಿದ್ದಾರೆ ಎಂದು ಹೇಳಿದ್ದಾರೆ. ಇನ್ನು, ಶೇಕಡಾ 21 ರಷ್ಟು ಜನರು ಪ್ರಧಾನಿ ಮೋದಿ ನೇತೃತ್ವದ ಕೆಲಸದ ಬಗ್ಗೆ ಸಂಪೂರ್ಣವಾಗಿ ನಿರಾಶೆಗೊಂಡಿರುವುದಾಗಿ ಆಸಮಾಧಾನ ಹೊರಹಾಕಿದ್ದಾರೆ. ಶೇಕಡಾ 5 ರಷ್ಟು ಜನರು ಈ ಬಗ್ಗೆ ತಮಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.

ಲೋಕನೀತಿ-ಸೆಂಟರ್ ಫಾರ್ ದಿ ಸ್ಟಡಿ ಆಫ್ ಡೆವಲಪಿಂಗ್ ಸೊಸೈಟೀಸ್ (ಸಿಎಸ್‌ಡಿಎಸ್) ಸಹಭಾಗಿತ್ವದಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆಯ ನಂತರ ರಾಹುಲ್ ಗಾಂಧಿಯವರ ಜನಪ್ರಿಯತೆಯಲ್ಲಿ ಶೇಕಡಾ 15 ಎಷ್ಟು ಹೆಚ್ಚಿದೆ ಎಂದು ತಿಳಿಸಿದೆ. ಆದರೆ ಜನಪ್ರಿಯತೆಯಲ್ಲಿ ರಾಹುಲ್ ಗಾಂಧಿ ಪ್ರಧಾನಿ ಮೋದಿಗಿಂತ ಹಿಂದೆ ಉಳಿದಿದ್ದಾರೆ.

NDTV survey: Over 55% People satisfied with PM Modi-led governments work

ಕೇಂದ್ರೀಯ ತನಿಖಾ ಸಂಸ್ಥೆ ಜಾರಿ ನಿರ್ದೇಶನಾಲಯ ಮತ್ತು ಕೇಂದ್ರೀಯ ತನಿಖಾ ದಳದ ಪಾತ್ರದ ಮೇಲೆ ಜನರು ಭಿನ್ನಾಭಿಪ್ರಾಯ ಹೊಂದಿದ್ದಾರೆ. ಶೇಕಡಾ 37 ರಷ್ಟು ಜನರು ಏಜೆನ್ಸಿಗಳು ಕಾನೂನಿನ ಪ್ರಕಾರ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದ್ದಾರೆ. ಶೇಕಡಾ 32 ರಷ್ಟು ಮಂದಿ ತನಿಖಾ ಸಂಸ್ಥೆಗಳನ್ನು ವಿರೋಧ ಪಕ್ಷಗಳು ಆರೋಪಿಸುತ್ತಿರುವಂತೆಯೇ ರಾಜಕೀಯ ಸೇಡಿಗಾಗಿ ಬಳಸಿಕೊಳ್ಳುತ್ತಿದ್ದಾರೆ ಎಂಬ ಆರೋಪವನ್ನು ಒಪ್ಪಿಕೊಂಡಿದ್ದಾರೆ. 31 ರಷ್ಟು ಜನರು ಈ ಬಗ್ಗೆ ಯಾವುದೇ ಅಭಿಪ್ರಾಯವಿಲ್ಲ ಎಂದು ಹೇಳಿದ್ದಾರೆ.

ಎಲ್ಲಾ ಸಾಮಾಜಿಕ ವರ್ಗದ ಜನರನ್ನು ಒಳಗೊಂಡ ಸಮೀಕ್ಷೆಯನ್ನು ಮೇ 10 ರಿಂದ ಮೇ 19 ರ ನಡುವೆ ನಡೆಸಲಾಗಿದೆ. ಮತದಾನದಲ್ಲಿ ಭಾಗವಹಿಸಿದವರಲ್ಲಿ 43 ಪ್ರತಿಶತದಷ್ಟು ಜನರು, ಇಂದು ಚುನಾವಣೆ ನಡೆದರೆ ಯಾರನ್ನು ಪ್ರಧಾನ ಮಂತ್ರಿಯಾಗಿ ಆಯ್ಕೆ ಮಾಡುತ್ತಾರೆ ಎಂದು ಕೇಳಿದಾಗ, ಪ್ರಧಾನಿ ಮೋದಿಯನ್ನು ಆಯ್ಕೆ ಮಾಡಿದ್ದಾರೆ. ಶೇಕಡಾ 27 ರಷ್ಟು ಜನರು ರಾಹುಲ್ ಗಾಂಧಿಗೆ ಮತ ಹಾಕಿದ್ದಾರೆ. ಇನ್ನು, 39 % ಜನರು ಬಿಜೆಪಿಯನ್ನು ಆಯ್ಕೆ ಮಾಡಿದ್ದು, 29% ಜನ ಕಾಂಗ್ರೆಸ್‌ಗೆ ಮತ್ತು 28 % ಜನ ಇತರ ಪಕ್ಷಗಳನ್ನು ಆಯ್ಕೆ ಮಾಡಿದ್ದಾರೆ.

ಮುಂದಿನ ವರ್ಷದ ಸಾರ್ವತ್ರಿಕ ಚುನಾವಣೆಯಲ್ಲಿ ಪಿಎಂ ಮೋದಿಗೆ ಸವಾಲಾಗಿ ಯಾರನ್ನು ನೋಡುತ್ತಾರೆ ಎಂಬುದರ ಕುರಿತು, 34% ಜನರು ರಾಹುಲ್ ಗಾಂಧಿ ಅವರನ್ನು ಪ್ರಧಾನ ಮಂತ್ರಿ ಹುದ್ದೆಗೆ ಏಕೈಕ ಸವಾಲು ಎಂದು ಪರಿಗಣಿಸಿದ್ದಾರೆ. ವಿರೋಧ ಪಕ್ಷಗಳ ಇತರ ಸ್ಪರ್ಧಿಗಳಾದ ಅರವಿಂದ್ ಕೇಜ್ರಿವಾಲ್ ಮತ್ತು ಮಮತಾ ಬ್ಯಾನರ್ಜಿಗಿಂತ ರಾಹುಲ್ ಗಾಂಧಿ ಹೆಚ್ಚು ಜನರ ಆಯ್ಕೆಯಾಗಿದ್ದಾರೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಶೇಕಡಾ 11 ರಷ್ಟು, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೇವಲ 4% ಮತಗಳನ್ನು ಪಡೆದರೇ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ 5% ಜನರ ಆಯ್ಕೆಯಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+