NDTV ಸಮೀಕ್ಷೆ: ರಾಜ್ಯದಲ್ಲಿ ಭಾರೀ ಮುನ್ನಡೆಯತ್ತ ಬಿಜೆಪಿ
ನವದೆಹಲಿ, ಮಾ 14: ಮತ್ತೊಂದು ಚುನಾವಣಾಪೂರ್ವ ಸಮೀಕ್ಷೆ ಹೊರಬಿದ್ದಿದೆ. ಎನ್ಡಿಟಿವಿ ಮತ್ತು ಹನ್ಸ್ ರಿಸರ್ಚ್ ಜಂಟಿಯಾಗಿ ನಡೆಸಿದ ಸಮೀಕ್ಷೆಯ ಪ್ರಕಾರ ಬಿಜೆಪಿ ನೇತೃತ್ವದ NDA ಮೈತ್ರಿಕೂಟ ದಿನದಿಂದ ದಿನಕ್ಕೆ ಮತದಾರರ ಸನಿಹಕ್ಕೆ ಬರುತ್ತಿದೆ.
ಹಾಗೆಯೇ, ಪ್ರಧಾನಿ ಹುದ್ದೆಗೆ ಯಾರು ಸೂಕ್ತ ಎನ್ನುವ ಪ್ರಶ್ನೆಗೆ ಮತದಾರ ನರೇಂದ್ರ ಮೋದಿಯೇ ಸೂಕ್ತ ಎಂದಿದ್ದಾರೆ. ಮೋದಿಗೆ ಶೇ. 42, ರಾಹುಲ್ ಗಾಂಧಿಗೆ ಶೇ. 27, ಅರವಿಂದ್ ಕೇಜ್ರಿವಾಲ್ ಅವರಿಗೆ ಶೇ. 6, ಮನಮೋಹನ್ ಸಿಂಗ್ ಅವರಿಗೆ ಶೇ. 5, ಮಾಯಾವತಿಗೆ ಶೇ. 4, ಮಮತಾ ಬ್ಯಾನರ್ಜಿ ಮತ್ತು ಜಯಲಲಿತಾಗೆ ಶೇ. 3 ರಷ್ಟು ಜನ ಪ್ರಧಾನಿ ಹುದ್ದೆಗೆ ಸೂಕ್ತ ಎಂದಿದ್ದಾರೆ.
ಸಮೀಕ್ಷೆಯ ಪ್ರಕಾರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ತನ್ನ ಮುನ್ನಡೆಯನ್ನು ಕಾಯ್ದು ಕೊಂಡಿದೆ. ಇನ್ನು ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನಲ್ಲಿ ಪ್ರಾದೇಶಿಕ ಪಕ್ಷಗಳದ್ದೇ ಕಾರುಬಾರು. ಇಲ್ಲಿ NDA ಮತ್ತು UPA ಮೈತ್ರಿಕೂಟಕ್ಕೆ ನೆಲೆಯೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಲಿದೆ ಎನ್ನುತ್ತದೆ ಸಮೀಕ್ಷೆ. (ಉತ್ತರಪ್ರದೇಶದಲ್ಲಿ ಏನನ್ನುತ್ತೆ ಸಮೀಕ್ಷೆ)
ಈ ಜಂಟಿ ಸಮೀಕ್ಷೆಯ ಪ್ರಕಾರ ಕರ್ನಾಟಕದಲ್ಲಿ ಬಿಜೆಪಿ ಹಿಂದಿನ ಲೋಕಸಭಾ ಚುನಾವಣೆಗಿಂತಲೂ ಉತ್ತಮ ಸಾಧನೆ ಮಾಡಲಿದೆ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದರೂ ಪಕ್ಷಕ್ಕೆ ಲಾಭವಾಗುವುದಿಲ್ಲ ಮತ್ತು ಜೆಡಿಎಸ್ ಮತ್ತಷ್ಟು ಸೀಟು ಕಳೆದು ಕೊಳ್ಳಲಿದೆ.
ಹನ್ನೆರಡು ರಾಜ್ಯಗಳ 319 ಕ್ಷೇತ್ರಗಳಲ್ಲಿ ನಡೆಸಿದ ಸಮೀಕ್ಷೆ ಪ್ರಕಾರ ಕರ್ನಾಟಕ, ಬಿಹಾರ, ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್ ಮುಂತಾದಡೆ ಯಾವ ಪಕ್ಷಕ್ಕೆ ಎಷ್ಟು ಸ್ಥಾನ ಸಿಗಲಿದೆ? ಸ್ಲೈಡ್ ನೋಡಿ..

ಬಿಹಾರ ಮತ್ತು ಜಾರ್ಖಂಡ್
ಬಿಹಾರ (40)
NDA - 23
UPA - 11
JDU - 05
Others - 01
ಜಾರ್ಖಂಡ್ (14)
BJP - 06
Cong - 04
JMM - 02
Others - 02

ಗುಜರಾತ್ ಮತ್ತು ಛತ್ತೀಸಗಢ
ಗುಜರಾತ್ (26)
BJP - 23
Cong - 03
ಛತ್ತೀಸಗಢ (11)
BJP - 09
Cong - 02

ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ
ಮಧ್ಯಪ್ರದೇಶ (29)
ಬಿಜೆಪಿ - 24
ಕಾಂಗ್ರೆಸ್ - 04
ಬಿಎಸ್ಪಿ - 01
ಮಹಾರಾಷ್ಟ್ರ (48)
ಬಿಜೆಪಿ/ಶಿವಸೇನೆ - 33
ಕಾಂಗ್ರೆಸ್/ ಎನ್ಸಿಪಿ - 12
ಎಂಎನ್ಎಸ್ - 01
Others - 02

ಹರ್ಯಾಣ ಮತ್ತು ದೆಹಲಿ
ಹರ್ಯಾಣ (10)
NDA - 07
UPA - 03
ದೆಹಲಿ (07)
ಆಮ್ ಆದ್ಮಿ - 04
ಬಿಜೆಪಿ - 02
ಕಾಂಗ್ರೆಸ್ - 01

ರಾಜಸ್ಥಾನ ಮತ್ತು ಪಶ್ಚಿಮ ಬಂಗಾಳ
ರಾಜಸ್ಥಾನ (25)
ಬಿಜೆಪಿ - 19
ಕಾಂಗ್ರೆಸ್ - 05
Others - 01
ಪಶ್ಚಿಮ ಬಂಗಾಳ ( 42)
TMC - 32
Left - 09
Cong - 01

ಕರ್ನಾಟಕ ಮತ್ತು ತಮಿಳುನಾಡು
ಕರ್ನಾಟಕ (28)
BJP - 20
Cong - 06
JDS -02
ತಮಿಳುನಾಡು (39+1=40)
AIADMK - 27
DMK - 10
Others - 02












Click it and Unblock the Notifications