ಕೇಂದ್ರದಿಂದ ಸೋಲಾರ್ ಶಕ್ತಿಗೆ ಭರಪೂರ ಅನುದಾನ
ನವದೆಹಲಿ, ಜೂ. 17: ಭಾರತ ವಿಶ್ವದ ಶಕ್ತಿಶಾಲಿ ರಾಷ್ಟ್ರಗಳ ಪಟ್ಟಿಗೆ ಸೇರುವುದರೊಂದಿಗೆ ಇನ್ನು ಕೆಲವೇ ವರ್ಷದಲ್ಲಿ ಅತಿಹೆಚ್ಚಿ ಸೋಲಾರ್ ಶಕ್ತಿ ಉತ್ಪಾದಕ ದೇಶ ಎಂಬ ಹಿರಿಮೆಯನ್ನು ಪಡೆದಿಕೊಳ್ಳಲಿದೆ.
ಕೇಂದ್ರ ಸರ್ಕಾರ ಸೋಲಾರ್ ಸೋಲಾರ್ ಪವರ ಜನರೇಶನ್ ಗುರಿಯನ್ನು 1 ಲಕ್ಚ ಮೆಗಾ ವ್ಯಾಟ್ ಗೆ ಹೆಚ್ಚಳ ಮಾಡಿದೆ. 2022 ರ ವೇಳೆಗೆ ಈ ಗುರಿಯನ್ನು ಸಾಧನೆ ಮಾಡಬೇಕು ಎಂದು ಉದ್ದೇಶ ಹೊಂದಲಾಗಿದೆ. [ಪಾವಗಡಕ್ಕೆ ಬಂತು ಏಷ್ಯಾದ ದೊಡ್ಡ ಸೋಲಾರ್ ಪಾರ್ಕ್]

ಜವಾಹರಲಾಲ್ ನೆಹರು ರಾಷ್ಟ್ರೀಯ ಸೋಲಾರ್ ಮಿಷನ್ ಯೋಜನೆಯಡಿ ಗುರಿ ಸಾಧನೆ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕ್ಯಾಬಿನೆಟ್ ತೀರ್ಮಾನ ತೆಗೆದುಕೊಂಡಿದೆ ಎಂದು ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.
ಯೋಜನೆಯನ್ನು ದೇಶದ ಎಲ್ಲೆಡೆ ಹಮ್ಮಿಕೊಳ್ಳಲಾಗುವುದು. ಇದಕ್ಕೆ ಸುಮಾರು 6 ಲಕ್ಷ ಕೋಟಿ ರು. ಮೀಸಲಿಡಲು ನಿರ್ಧಾರ ಮಾಡಲಾಗಿದೆ. ಮೊದಲಿಗೆ 15 ಕೋಟಿ ರು. ಆರಂಭಿಕ ಬಂಡವಾಳ ಹೂಡಿಕೆ ಮಾಡಲಾಗುವುದು ಎಂದು ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.[ಸೌರ ವಿದ್ಯುತ್ ತಯಾರಿಸಿ, ಸರ್ಕಾರಕ್ಕೆ ಮಾರಿ!]
ಸೋಲಾರ್ ಎನರ್ಜಿ ಕಾರ್ಪೋರೇಶನ್ ಆಫ್ ಇಂಡಿಯಾದ ಮಾರ್ಗದರ್ಶನದಲ್ಲಿ ಕಾರ್ಯ ಚಟುವಟಿಕೆಗಳು ನಡೆಯಲಿವೆ. ಇದಕ್ಕೆ ಎಲ್ಲ ರಾಜ್ಯ ಸರ್ಕಾರಗಳ ಸಹಕಾರ ಕೋರಲಾಗಿದೆ ಎಂದು ಹೇಳಿದ್ದಾರೆ.












Click it and Unblock the Notifications