NEET-PG 2025 Exam: ವೈದ್ಯಕೀಯ ಕೋರ್ಸ್‌ಗಳ ಆಕಾಂಕ್ಷಿಗಳು ಗಮನಿಸಿ, ವೇಳಾಪಟ್ಟಿ ಪ್ರಕಟ
ನವದೆಹಲಿ, ಡಿಸೆಂಬರ್ 08: ವೈದ್ಯಕೀಯ ವೃತ್ತಿ ಕೋರ್ಸ್ ಪಡೆಯುವ ಹಂಬಲ ಹೊಂದಿರುವ ಅಭ್ಯರ್ಥಿಗಳಿಗೆ ವೈದ್ಯಕೀಯ ವಿಜ್ಞಾನಗಳ ರಾಷ್ಟ್ರೀಯ ಪರೀಕ್ಷಾ ಮಂಡಳಿ (NBEMS) ಸಿಹಿ ಸುದ್ದಿಯೊಂದನ್ನು ನೀಡಿದೆ. MBBS ಇಂಟರ್ನ್‌ಶಿಪ್ ಪೂರ್ಣಗೊಳಿಸಲು ಗುಡುವು ನೀಡುವ ಜೊತೆಗೆ ಮಂಡಳಿಯ NEET-PG 2025ರ ಪರೀಕ್ಷೆ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಅಭ್ಯರ್ಥಿಗಳು ಗಮನಿಸಬೇಕು.
2025ರ ಜೂನ್ 15 ರಂದು ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ- ಸ್ನಾತಕೋತ್ತರ (NEET-PG) ಪರೀಕ್ಷೆ ನಡೆಸಲು ವೈದ್ಯಕೀಯ ವಿಜ್ಞಾನಗಳ ರಾಷ್ಟ್ರೀಯ ಪರೀಕ್ಷಾ ಮಂಡಳಿ ನಿರ್ಧರಿಸಿದೆ. ಈ ಕಾರಣದಿಂದಲೇ ಸದ್ಯ ತಾತ್ಕಾಲಿಕ ಅಂಕಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದೇ ದಿನಾಂಕದಂದು ಪರೀಕ್ಷೆಗಳು ನಡೆಸುವ ಸಾಧ್ಯತೆ ಇವೆ.

ವೇಳಾಪಟ್ಟಿ ಜೊತೆಗೆ ಎಂಬಿಬಿಎಸ್ ಇಂಟರ್ನ್‌ಶಿಪ್ ಅನ್ನು ಮುಂದಿನ ವರ್ಷ 2025ರ ಜುಲೈ 31ರಂದು ಪೂರ್ಣಗೊಳಿಸುವಂತೆ ಗಡುವು ನೀಡಿ ಸೂಚನೆ ಕೊಟ್ಟಿದೆ. ಇದೇ ವಿಚಾರವಾಗಿ ಮಂಡಳಿಯು ಸಂಬಂಧಿಸಿದ ವೈದ್ಯಕೀಯ ಸಂಸ್ಥೆಗಳ ಡೀನ್‌ಗಳು ಮತ್ತು ಪ್ರಾಂಶುಪಾಲರಿಗೆ ಪತ್ರ ಮುಖೇನ್ ಸಂಭಾಷಣೆ ಮಾಡಿದೆ ಎಂದು ವರದಿ ಆಗಿದೆ.
ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಹಾಗೂ ಮಂಡಳಿಯಿಂದ ಈ ಬಗ್ಗೆ ಯಾವುದೇ ಅಧಿಸೂಚನೆ ನೀಡಲಾಗಿಲ್ಲ. ಸದ್ಯ ಇದು ತಾತ್ಕಾಲಿಕ ಪಟ್ಟಿ, ಇದೇ ದಿನಾಂಕದಲ್ಲಿ ನೀಟ್ ಪಿಜಿ ಪರೀಕ್ಷೆ ನಡೆಸಲು ಚಿಂತನೆ ನಡೆದಿದೆ ಎಂಬ ಮಾಹಿತಿಇದಾಗಿದೆ. ಶೀಘ್ರವೇ ಎನ್‌ಎಂಸಿ ಕಾರ್ಯದರ್ಶಿ ಪ್ರೊಫೆಸರ್ ಬಿ.ಶ್ರೀನಿವಾಸ್ ಅವರು ಅಧಿಕೃತವಾಗಿ ವೇಳಾಪಟ್ಟಿ ಪ್ರಕಟಿಸಲಿದ್ದಾರೆ. ಅದನ್ನು ನೀವು ಎನ್‌ಎಂಸಿ ಅಧಿಕೃತ ಜಾಲತಾಣದಲ್ಲಿ ಪರಿಶೀಲಿಸಬಹುದು.
ವೈದ್ಯಕೀಯ ವಿಜ್ಞಾನಗಳ ರಾಷ್ಟ್ರೀಯ ಪರೀಕ್ಷಾ ಮಂಡಳಿಯು 2025ರಲ್ಲಿ ತನ್ನ ವ್ಯಾಪ್ತಿಯಲ್ಲಿ ನಡೆಯಲಿರುವ ಎಲ್ಲ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ದಿನಾಂಕ, ಮಹತ್ವ ಮಾಹಿತಿ ಒಳಗೊಂಡ ಶೈಕ್ಷಣಿಕ ಕ್ಯಾಲೆಂಡರ್ ಲೋಕಾರ್ಪಣೆ ಮಾಡಿದೆ. ಆದರೆದಲ್ಲಿ ನೀಟ್ ಪಿಜಿ ಅಥವಾ ನೀಟ್ ಯುಜಿ ಮಾಹಿತಿ ಇಲ್ಲ ಎಂಬುದನ್ನು ಗಮನಿಸಬೇಕು.
ಯಾವ ಕೋರ್ಸ್‌ಗಳಿಗೆ ನೀಟ್ ಪಿಜಿ ಪರೀಕ್ಷೆ, ಪಟ್ಟಿ
ಈ ನೀಟ್ ಪಿಜಿ ಅಥವಾ ಸ್ನಾತಕೋತ್ತರ ವೈದ್ಯಕೀಯ ಪ್ರವೇಶ ಪರೀಕ್ಷೆಯು ಏಕ ಗವಾಕ್ಷಿ ಪ್ರವೇಶ ಪರೀಕ್ಷೆಯಾಗಿದೆ. ಈ ಕೆಳಗಿನ ಕೋರ್ಸ್‌ಗಳಿಗೆ ನಡೆಯಲಿದೆ.
* MD/MS/PG ಡಿಪ್ಲೊಮಾ
* ಪೋಸ್ಟ್ ಎಂಬಿಬಿಎಸ್ ಡಿಎನ್‌ಬಿ ಕೋರ್ಸ್‌ಗಳು
* ಡಾ.ಎನ್‌ಬಿ ಕೋರ್ಸ್‌ಗಳು
* NBEMS ಡಿಪ್ಲೊಮಾ ಕೋರ್ಸ್‌ಗಳ
NEET UG 2025 ಪರೀಕ್ಷೆ ಯಾವಾಗ
ಪದವಿಪೂರ್ವ ವೈದ್ಯಕೀಯ ಪ್ರವೇಶ ಪರೀಕ್ಷೆ (NEET UG) 2025ರಲ್ಲಿ ಜರುಗಲಿವೆ. ಈ ಕುರಿತು ವೇಳಾಪಟ್ಟಿ, ಅಧಿಸೂಚನೆ ಪ್ರಕಟವಾಗಿಲ್ಲ. ಶೀಘ್ರವೇ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು (NTA) 2025 ಶೈಕ್ಷಣಿಕ ವರ್ಷಕ್ಕೆ ಪದವಿಪೂರ್ವ ವೈದ್ಯಕೀಯ ಪ್ರವೇಶ ಪರೀಕ್ಷೆ (NEET UG) ದಿನಾಂಕ ಪ್ರಕಟಿಸುವ ಸಾಧ್ಯತೆ ಇದೆ.
ಈ ನೀಟ್ ಯುಜಿ ಪರೀಕ್ಷೆಗಳು ಎಂಬಿಬಿಎಸ್ ಹಾಗೂ ಬಿಡಿಎಸ್ ಕೋರ್ಸ್ ಪಡೆಯುವವರಿಗೆ ಪ್ರವೇಶ ಪರೀಕ್ಷೆಯಾಗಿ ನಡೆಸಲಾಗುತ್ತದೆ. ಕೋರ್ಸ್ ಅರ್ಹ ಆಕಾಂಕ್ಷಿಗಳಿಗೆ ಮುಂದಿನ ಕೆಲವೇ ದಿನಗಳಲ್ಲಿ ಏಜೆನ್ಸಿಯು ಸಿಹಿ ಸುದ್ದಿ ಘೋಷಿಸಲಿದೆ.












Click it and Unblock the Notifications