ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ತಂಡದ ಪಟ್ಟಿ ಪ್ರಕಟ

ನವದೆಹಲಿ, ಜುಲೈ 14: ಸಂಸದ ತೇಜಸ್ವಿ ಸೂರ್ಯ ಅಧ್ಯಕ್ಷತೆಯ ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ತಂಡದ ಪಟ್ಟಿಯನ್ನು ಬುಧವಾರ ಬಿಡುಗಡೆ ಮಾಡಲಾಗಿದೆ.

ನೇಹಾ ಜೋಷಿ, ಮಧುಕೇಶ್ವರ್, ತಜಿಂದರ್ ಬಗ್ಗಾ ಹಾಗೂ ಜಾಜು ಬಿಸ್ತಾ ಅವರು ಬಿಜೆಪಿಯ ಈ ಹೊಸ ತಂಡದಲ್ಲಿ ಪದಾಧಿಕಾರಿಗಳಾಗಿ ಆಯ್ಕೆಯಾಗಿದ್ದಾರೆ.

ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಪಶ್ಚಿಮ ಬಂಗಾಳದ ಅನೂಪ್ ಕುಮಾರ್ ಸಾಹಾ, ಮಹಾರಾಷ್ಟ್ರದ ಮಧುಕೇಶ್ವರ್ ದೇಸಾಯಿ, ಬಿಹಾರದ ಮನೀಶ್ ಸಿಂಗ್, ಒಡಿಶಾದ ಅರ್ಪಿತಾ ಅಪರಾಜಿತ ಬಡಾಜೆನಾ, ಮಹಾರಾಷ್ಟ್ರದ ರಾಮ್ ಸತ್ಪುತೆ, ಉತ್ತರ ಪ್ರದೇಶದ ಡಾ. ಅಭಿನವ್ ಪ್ರಕಾಶ್, ಉತ್ತರಾಖಂಡದ ನೇಹಾ ಜೋಶಿ ಅವರು ಆಯ್ಕೆಯಾಗಿದ್ದಾರೆ.

National Team Of BJP Yuva Morcha Declared Here Is List

ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾಗಿ ಪಶ್ಚಿಮ ಬಂಗಾಳ ರಾಜು ಬಿಸ್ತಾ, ದೆಹಲಿಯ ರೋಹಿತ್ ಚಾಹಲ್, ಉತ್ತರ ಪ್ರದೇಶದ ವೈಭವ್ ಸಿಂಗ್ ಅವರನ್ನು ನೇಮಿಸಲಾಗಿದೆ.

ರಾಷ್ಟ್ರೀಯ ಕಾರ್ಯದರ್ಶಿಗಳಾಗಿ ಕೇರಳದ ಶ್ಯಾಮ ರಾಜ್, ತೆಲಂಗಾಣದ ಶಹಜಾದಿ ಸೈಯದ್, ಛತ್ತೀಸ್‌ಗಡದ ರವಿ ಭಗತ್, ದೆಹಲಿಯ ತಿಜೇಂದರ್ ಪಾಲ್ ಸಿಂಗ್ ಬಗ್ಗಾ, ಹರಿಯಾಣದ ಗೌರವ್ ಗೌತಮ್ ಅಸ್ಸಾಂನ ಅರುಣ್ ಜ್ಯೋತಿ ಹಜಾರಿಕಾ, ಮಣಿಪುರದ ನಿಂಗ್‌ತೌಜಂ ಮೊಂಗ್‌ಪೊಂಗ್‌ಗಂಬ ಅವರನ್ನು ನೇಮಿಸಲಾಗಿದೆ.

ಖಜಾಂಚಿಯಾಗಿ ತೆಲಂಗಾಣದ ಸಾಯಿ ಪ್ರಸಾದ್ ಅವರು ನೇಮಕಗೊಂಡಿದ್ದಾರೆ. ಕಚೇರಿ ಉಸ್ತುವಾರಿಯಾಗಿ ದೆಹಲಿಯ ವಿನೀತ್ ತ್ಯಾಗಿ, ಮಾಧ್ಯಮ ಉಸ್ತುವಾರಿಯಾಗಿ ಚಂಡೀಗಢದ ಅಮಂದೀಪ್ ಸಿಂಗ್, ಸಾಮಾಜಿಕ ಜಾಲತಾಣ ಉಸ್ತುವಾರಿಯಾಗಿ ಹಿಮಾಚಲದ ಕಪಿಲ್ ಪರ್ಮಾರ್ ಹಾಗೂ ನೀತಿ- ಸಂಶೋಧನೆ ಉಸ್ತುವಾರಿಯಾಗಿ ಗುಜರಾತ್‌ನ ವರುಣ್ ಝವೇರಿ ಅವರನ್ನು ನೇಮಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+