ಭಾರತ್ ಬಯೋಟೆಕ್‌ನ ನೇಸಲ್ ಕೊರೊನಾ ಲಸಿಕೆ ಪ್ರಯೋಗಕ್ಕೆ ಅನುಮೋದನೆ

ನವದೆಹಲಿ, ಆಗಸ್ಟ್‌ 13: ಭಾರತ್ ಬಯೋಟೆಕ್‌ ಅಭಿವೃದ್ಧಿಪಡಿಸಿರುವ, ಮೂಗಿನ ಮೂಲಕ ನೀಡುವ ಕೊರೊನಾ ಲಸಿಕೆಯ ಎರಡು ಹಾಗೂ ಮೂರನೇ ಹಂತದ ವೈದ್ಯಕೀಯ ಪ್ರಯೋಗಗಳಿಗೆ ಔಷಧ ನಿಯಂತ್ರಕ ಸಂಸ್ಥೆ ಅನುಮತಿ ನೀಡಿದೆ.

ಭಾರತ್ ಬಯೋಟೆಕ್‌ನ ನಾಸಿಕ ಲಸಿಕೆಯ ಪ್ರಯೋಗಕ್ಕೆ ಅನುಮತಿ ನೀಡಿರುವುದಾಗಿ ಜೈವಿಕ ತಂತ್ರಜ್ಞಾನ ಇಲಾಖೆ ಮಾಹಿತಿ ನೀಡಿದೆ.

ಈ ಮುನ್ನ 18-60 ವಯೋಮಾನದವರ ಮೇಲೆ ಮೊದಲನೇ ಹಂತದ ವೈದ್ಯಕೀಯ ಪ್ರಯೋಗವನ್ನು ನಡೆಸಲಾಗಿತ್ತು. "ಮೊದಲ ಬಾರಿ ಭಾರತ್ ಬಯೋಟೆಕ್‌ನ ಮೂಗಿನ ಮೂಲಕ ನೀಡುವ ಲಸಿಕೆಯ 2 ಹಾಗೂ 3ನೇ ಹಂತದ ಪ್ರಯೋಗಕ್ಕೆ ಅನುಮತಿ ದೊರೆತಿದೆ" ಎಂದು ಇಲಾಖೆ ತಿಳಿಸಿದೆ.

Nasal Covid-19 Vaccine By Bharat Biotech Gets Nod For Trials

ಭಾರತದಲ್ಲಿ ಇದೇ ಮೊದಲ ಬಾರಿ ಮಾನವರ ಮೇಲೆ ಈ ಪ್ರಯೋಗವನ್ನು ನಡೆಸಲಾಗುತ್ತಿದೆ.

ಭಾರತದಲ್ಲಿ ವಿವಿಧ ಬಗೆಯ ಕೊರೊನಾ ವೈರಸ್ ಲಸಿಕೆಗಳು ಅಭಿವೃದ್ಧಿಯಾಗುತ್ತಿವೆ. ಅದರಲ್ಲಿ 'ನಾಸಿಕ ಲಸಿಕೆ'ಯೂ ಒಂದಾಗಿದೆ. ಮೂಗಿನ ಮೂಲಕ ನೀಡಲಾಗುವ ಕೋವಿಡ್ ಲಸಿಕೆಗಳನ್ನು ಭಾರತದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಈಗಾಗಲೇ ಕೋವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆಗೆ ಅನುಮತಿ ಪಡೆದಿರುವ ಹೈದರಾಬಾದ್‌ನ ಭಾರತ್ ಬಯೋಟೆಕ್ ಸಂಸ್ಥೆ ನಾಸಿಕ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ.

ಮೂಗಿನ ಮೂಲಕ ನೀಡುವ ಕೋವಿಡ್ ಲಸಿಕೆಯು ವೈರಸ್ ಹರಡುವಿಕೆಯನ್ನು ತಡೆಯುವಲ್ಲಿ ಮಹತ್ವ ಪಾತ್ರ ವಹಿಸುವ ಸಾಧ್ಯತೆ ಇದೆ ಎಂದು ಪರಿಣತರು ಹೇಳಿದ್ದಾರೆ. ಪ್ರಸ್ತುತ ಅಮೆರಿಕದಲ್ಲಿ ಈ ಲಸಿಕೆ ಪ್ರಯೋಗ ನಡೆದಿದೆ.

"ನಾವು ಮೂಗಿನ ಲಸಿಕೆಯ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇವೆ. ಅದಕ್ಕಾಗಿ ವಾಷಿಂಗ್ಟನ್‌ ಯುನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್ ಜತೆ ಪಾಲುದಾರಿಕೆ ಹೊಂದಿದ್ದೇವೆ. ಎರಡು ಡೋಸ್ ಲಸಿಕೆಗೆ ಹೋಲಿಸಿದರೆ ನಾವು ಸಿಂಗಲ್ ಡೋಸ್ ಲಸಿಕೆಯ ಮೇಲೆ ಗಮನ ಹರಿಸಿದ್ದೇವೆ. ಮೂಗಿನ ಲಸಿಕೆ ಅತ್ಯುತ್ತಮ ಆಯ್ಕೆ ಎಂದು ಸಂಶೋಧನೆಗಳು ಸಾಬೀತುಪಡಿಸಿವೆ. ಕೊರೊನಾ ವೈರಸ್ ಮೂಗಿನ ಮೂಲಕವೂ ದಾಳಿ ನಡೆಸಬಹುದು' ಎಂದು ಭಾರತ್ ಬಯೋಟೆಕ್ ಮುಖ್ಯಸ್ಥ ಕೃಷ್ಣ ಎಲ್ಲಾ ಹೇಳಿದ್ದರು. ನಂತರ ಈ ಲಸಿಕೆಯ ಪ್ರಯೋಗ ಸಂಬಂಧ ಅರ್ಜಿ ಸಲ್ಲಿಸಲಾಗಿತ್ತು.

ಭುವನೇಶ್ವರ, ಪುಣೆ, ನಾಗಪುರ ಮತ್ತು ಹೈದರಾಬಾದ್‌ನ ನಾಲ್ಕು ಕೇಂದ್ರಗಳಲ್ಲಿ ಮೊದಲ ಹಂತಗಳಲ್ಲಿ 18-65 ವರ್ಷದೊಳಗಿನ ಕನಿಷ್ಠ 30-45 ಆರೋಗ್ಯವಂತ ಸ್ವಯಂಸೇವಕರನ್ನು ಪ್ರಯೋಗಕ್ಕೆ ಬಳಸಿಕೊಳ್ಳಲಾಗುವುದು ಎಂದು ಸಂಸ್ಥೆ ಮಾಹಿತಿ ನೀಡಿತ್ತು.

ಭಾರತ್ ಬಯೋಟೆಕ್ ಮೂಗಿನ ಮೂಲಕ ನೀಡುವ ಎರಡು ಲಸಿಕೆಗಳ ಮೇಲೆ ಕೆಲಸ ಮಾಡುತ್ತಿದೆ. ಒಂದು ಅಮೆರಿಕ ಮೂಲದ ಫ್ಲುಗೆನ್ ಲಸಿಕೆ ಉತ್ಪಾದಕ ಸಂಸ್ಥೆ ಮತ್ತು ವಿಸ್ಕನ್ಸಿನ್ ಮ್ಯಾಡಿಸನ್ ವಿಶ್ವವಿದ್ಯಾಲಯದ ವಿಜ್ಞಾನಿಗಳ ಸಹಯೋಗದಲ್ಲಿ ನಡೆಯುತ್ತಿದ್ದರೆ ಮತ್ತೊಂದು ಲಸಿಕೆಯು ವಾಷಿಂಗ್ಟನ್ ಸ್ಕೂಲ್ ಆಫ್ ಮೆಡಿಸಿನ್ ವಿಶ್ವವಿದ್ಯಾಲಯದ ಪಾಲುದಾರಿಕೆಯಲ್ಲಿ ಅಭಿವೃದ್ಧಿಯಾಗುತ್ತಿದೆ.

ನಾಸಲ್ ವ್ಯಾಕ್ಸಿನ್ ಅನ್ನು ಮನುಷ್ಯರಿಗೆ ಸೋಂಕು ಹರಡುವ ಮೂಲ ಜಾಗವಾದ ಮೂಗಿನ ಮೂಲಕವೇ ನೀಡಲಾಗುತ್ತದೆ. ಮೂಗಿನ ಮೂಲಕ ನೀಡಲಾಗುವ ಲಸಿಕೆಯು ದೇಹದಾದ್ಯಂತ ಬಲವಾದ ಪ್ರತಿರಕ್ಷಣಾ ಸ್ಪಂದನೆಯನ್ನು ನೀಡುತ್ತದೆ ಎಂದು ಅಧ್ಯಯನಗಳು ತಿಳಿಸಿವೆ. ಆದರೆ ಅದು ಮುಖ್ಯವಾಗಿ ಮೂಗು ಹಾಗೂ ಉಸಿರಾಟದ ವ್ಯವಸ್ಥೆಗೆ ಹೆಚ್ಚು ಪರಿಣಾಮಕಾರಿ. ಇದರಿಂದ ದೇಹದಲ್ಲಿ ಸೋಂಕು ಆವರಿಸುವುದು ಕ್ಷೀಣಿಸುತ್ತದೆ.

ಮಕ್ಕಳಿಗೆ ಈ ಮೂಗಿನ ಲಸಿಕೆಗಳನ್ನು ನೀಡುವ ಸಂಬಂಧ ಪ್ರಯೋಗಗಳು ನಡೆಯುತ್ತಿರುವುದಾಗಿ ತಿಳಿದುಬಂದಿದೆ.

ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆ ಡೋಸ್‌ಗಳ ಮಿಶ್ರಣ ಪ್ರಯೋಗ ಉತ್ತಮ ಫಲಿತಾಂಶ ನೀಡಿದ್ದು ಇದಕ್ಕೆ ಡ್ರಗ್ ಕಂಟ್ರೋಲ್ ಜನರಲ್ ಆಫ್ ಇಂಡಿಯಾ ಗುರುವಾರ ಅನುಮತಿ ನೀಡಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಈ ಅಂಶವನ್ನು ದೃಢಪಡಿಸಿದೆ. ಹೀಗಾಗಿ‌‌ ಕೇಂದ್ರ ಸರ್ಕಾರ ಎರಡೂ ಲಸಿಕೆ ಗಳ ಮಿಶ್ರಣ ಮಾಡಿ ಡೋಸ್ ನೀಡಲು ಅನುಮತಿ ನೀಡಿದೆ. ಈ ಮಿಶ್ರಿತ ಪ್ರಯೋಗ ದಿಂದ ಉತ್ತಮ ಫಲಿತಾಂಶ ದೊರೆತಿದೆ. ವೈರಸ್ ವಿರುದ್ಧ ಉತ್ತಮ ಪ್ರತಿರೋಧ ಶಕ್ತಿ ಸೃಷ್ಟಿಯಾಗಿರುವುದು ಈ ಅಧ್ಯಯನದಲ್ಲಿ‌ ದೃಢಪಟ್ಟಿದೆ ಎಂದು ತಿಳಿಸಿದೆ.

ಕೇಂದ್ರೀಯ ಔಷಧ ಗುಣಮಟ್ಟನಿಯಂತ್ರಕ ಸಂಸ್ಥೆಯ (ಸಿಡಿಎಸ್‌ಸಿಒ) ತಜ್ಞರ ಸಮಿತಿ ಗುರುವಾರ ಕೋವಿಶೀಲ್ಡ್‌ ಹಾಗೂ ಕೋವ್ಯಾಕ್ಸಿನ್‌ಗಳ ತಲಾ 1 ಡೋಸ್‌ ನೀಡಿ ಜನರ ಮೇಲೆ ಪ್ರಯೋಗ ನಡೆಸಲು ಶಿಫಾರಸು ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+