ಪ್ರಧಾನಿ ಮೋದಿ ಇನ್ನು ಮುಂದೆ ವಿದೇಶ ಪ್ರವಾಸ ಮಾಡೊಲ್ಲ!

ನವದೆಹಲಿ, ಡಿಸೆಂಬರ್ 26: ವಿರೋಧ ಪಕ್ಷದವರ ಟೀಕೆಯ ಅಸ್ತ್ರಗಳಲ್ಲಿ ಒಂದಾಗಿರುವ ತಮ್ಮ ವಿದೇಶ ಪ್ರವಾಸಕ್ಕೆ ಕಡಿವಾಣ ಹಾಕಲು ಪ್ರಧಾನಿ ನರೇಂದ್ರ ಮೋದಿ ಮುಂದಾಗಿದ್ದಾರೆ. ಇದು ಚುನಾವಣೆಯ ಸಲುವಾಗಿ.

2019ರ ಲೋಕಸಭೆ ಚುನಾವಣೆಗೆ ಇನ್ನು ಕೇವಲ ನಾಲ್ಕು ತಿಂಗಳು ಬಾಕಿ ಇದೆ. ಹೀಗಾಗಿ ಮುಂದಿನ ವರ್ಷದ ಆರಂಭದಲ್ಲಿ ನರೇಂದ್ರ ಮೋದಿ ಅವರು ಸಾರ್ವತ್ರಿಕ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ರಾಷ್ಟ್ರೀಯ ವಿಚಾರಗಳತ್ತ ಗಮನಹರಿಸಬೇಕಿರುವುದರಿಂದ ವಿದೇಶ ಪ್ರಯಾಣ ಮಾಡುವುದಿಲ್ಲ ಎಂದು ಸರ್ಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಧಾನಿಯಾಗಿ ತಮ್ಮ ಹೊಣೆಗಾರಿಕೆಗಳನ್ನು ಕಡಿಮೆಗೊಳಿಸಿಕೊಳ್ಳುವುದರ ಜೊತೆಗೆ ಮೋದಿ ಅವರು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ತಾರಾ ಪ್ರಚಾರಕರೂ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. 2019ರ ಮೊದಲ ತ್ರೈಮಾಸಿಕ ಅವಧಿಯಲ್ಲಿ ಮೋದಿ ಅವರಿಗೆ ಯಾವುದೇ ಮಹತ್ವದ ಜಾಗತಿಕ ಸಭೆಗಳಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂಬುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

narendra modi unlikely to make foreign trips lok sabha elections 2019

ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್ ಗಡ ವಿಧಾನಸಭೆ ಚುನಾವಣೆಗಳಲ್ಲಿ ಸೋಲು ಅನುಭವಿಸಿರುವುದರಿಂದ ಮೋದಿ ಅವರ ಸರ್ಕಾರಕ್ಕೆ ಸವಾಲು ಹೆಚ್ಚಾಗಿದೆ. ಹೀಗಾಗಿ ಲೋಕಸಭೆ ಚುನಾವಣೆಯಲ್ಲಿ ಪಕ್ಷವನ್ನು ಬಲಪಡಿಸಲು ಮೋದಿ ಪ್ರಚಾರದ ಕಡೆಗೆ ಹೆಚ್ಚಿನ ಗಮನ ಹರಿಸಬೇಕಾಗಿದೆ.

ಜನವರಿ 21-23ರಂದು ವಾರಣಾಸಿಯಲ್ಲಿ ನಡೆಯಲಿರುವ ಪ್ರವಾಸಿ ಭಾರತೀಯ ದಿವಸ್ ಆಚರಣೆಯಲ್ಲಿ ಮೋದಿ ಪಾಲ್ಗೊಳ್ಳಲಿದ್ದಾರೆ.

ಅಕ್ಟೋಬರ್‌ನಲ್ಲಿ ಜಪಾನ್ ಮತ್ತು ಸಿಂಗಪುರಕ್ಕೆ (ಏಷ್ಯನ್ ಸಮಾವೇಶದಲ್ಲಿ ಪಾಲ್ಗೊಳ್ಳಲು) ಮತ್ತು ಮಾಲ್ಡೀವ್ಸ್‌ಗೆ (ಅಧ್ಯಕ್ಷ ಇಬ್ರಾಹಿಂ ಸೊಲ್ಹಿ ಪ್ರಮಾಣವಚನ ಸ್ವೀಕಾರ ಸಮಾರಂಭ) ಅಕ್ಟೋಬರ್‌ನಲ್ಲಿ ತೆರಳಿದ್ದರು. ಬಳಿಕ ನವೆಂಬರ್‌ನಲ್ಲಿ ಜಿ20 ಶೃಂಗಸಭೆಯಲ್ಲಿ ಭಾಗವಹಿಸಲು ಅರ್ಜೆಂಟೀನಾ ಪ್ರವಾಸ ಕೈಗೊಂಡಿದ್ದರು.

ಜುಲೈನಲ್ಲಿ ಸರ್ಕಾರ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ಪ್ರಧಾನಿ ಮೋದಿ ಅವರು ಕಳೆದ ನಾಲ್ಕು ವರ್ಷಗಳಲ್ಲಿ 84 ದೇಶಗಳಿಗೆ ಭೇಟಿ ನೀಡಿದ್ದಾರೆ. ಈ ಪ್ರವಾಸಗಳಿಗಾಗಿ 1,484 ಕೋಟಿ ರೂ ವೆಚ್ಚವಾಗಿದೆ.

ಇದರಲ್ಲಿ 2014ರ ಜೂನ್ 15 ರಿಂದ 2018ರ ಜೂನ್ 10ರ ಅವಧಿಯಲ್ಲಿ 1088.42 ಕೋಟಿ ರೂ. ಪ್ರಧಾನಿಯವರ ವಿಮಾನ ನಿರ್ವಹಣೆಗೆ ಮತ್ತು ಚಾರ್ಟರಡ್ ವಿಮಾನಗಳ ನಿರ್ವಹಣೆಗೆ 387.26 ಕೋಟಿ ರೂ. ವೆಚ್ಚವಾಗಿದೆ ಎಂದು ತಿಳಿಸಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+