Narendra Modi: ತಮಿಳುನಾಡು ವಿಧಾನಸಭೆ ಚುನಾವಣೆ 2026: ಕಪ್ಪು ಬಣ್ಣದ ಮೇಕಪ್ ಬಳಸಿದರೇ ನರೇಂದ್ರ ಮೋದಿ, ವೈರಲ್ ವಿಡಿಯೋ
Narendra Modi: ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಹಾಗೂ ಕರ್ನಾಟಕವೂ ಸೇರಿದಂತೆ ವಿವಿಧ ರಾಜ್ಯಗಳ ಉಪ ಚುನಾವಣೆಯು ಅಂತಿಮಘಟ್ಟವನ್ನು ತಲುಪಿದೆ. ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣ ಹಾಗೂ ಆಯಾ ರಾಜ್ಯಗಳಿಗೆ ಸಂಬಂಧಿಸಿದ ಉಡುಗೆ ತೊಡುಗೆ ವಿಚಾರವು ಚರ್ಚೆ ಆಗುತ್ತಿದೆ. ಮೊದಲಿನಿಂದಲೂ ಪ್ರಧಾನಿ ನರೇಂದ್ರ ಮೋದಿ ಅವರು ಆಯಾ ರಾಜ್ಯಗಳ ವೇಷಭೂಷಣಕ್ಕೆ ಆದ್ಯತೆ ನೀಡುವುದು ಇದೆ.
ಆದರೆ ಇದೀಗ ಈ ಬಾರಿ ತಮಿಳುನಾಡಿನ ವಿಧಾನಸಭೆ ಚುನಾವಣೆ 2026ರಲ್ಲಿ ಅವರು ಮುಖದ ಬಣ್ಣವನ್ನು ಬದಲಾಯಿಸಿದ್ದಾರೆ ಅಥವಾ ತಿಳಿ ಕಪ್ಪು ಬಣ್ಣದ ಮೇಕಪ್ ಬಳಸಿದ್ದಾರೆ ಎನ್ನುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಕೆಲವರು ನೆಟ್ಟಿಗರು ಮೋದಿ ಅವರು ಮುಖ ಬಣ್ಣ ಕಪ್ಪಗಾಗಿರುವಂತೆ ಇದೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ಪ್ರಧಾನಿ ನರೇಂದ್ರ ಮೋದಿ ಅವರು ತಮಿಳುನಾಡಿನಲ್ಲಿ ಭಾಷಣ ಮಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡು ಪ್ರಶ್ನೆ ಮಾಡಿದೆ. ಏನಿದು ವಿವಾದ - ಚರ್ಚೆ ಎನ್ನುವುದು ಈ ಸುದ್ದಿಯಲ್ಲಿ ನೋಡೋಣ..

ತಮಿಳುನಾಡು, ಕೇರಳಂ, ಅಸ್ಸಾಂ, ಪಶ್ಚಿಮ ಬಂಗಾಳ ಹಾಗೂ ಪುದುಚೇರಿಯಲ್ಲಿ ಚುನಾವಣೆ ಪ್ರಾರಂಭವಾದಾಗಿನಿಂದಲೂ ಹಲವು ಕಾರಣಗಳಿಗೆ ಈ ಬಾರಿಯ ಪಂಚ ರಾಜ್ಯ ವಿಧಾನಸಭೆ ಚುನಾವಣೆ ಹೆಚ್ಚು ಚರ್ಚೆ ಆಗುತ್ತಿದೆ. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣವೂ ಪ್ರಮುಖವಾಗಿದೆ. ಏಪ್ರಿಲ್ 17, 2026 ರಂದು ಮಹಿಳಾ ಮೀಸಲಾತಿ ಮಸೂದೆ ಮತ್ತು ಡಿಲಿಮಿಟೇಶನ್ ಮಸೂದೆಯನ್ನು ತಿರಸ್ಕರಿಸಿದ ನಂತರ ಪರಿಸ್ಥಿತಿ ಬದಲಾಗಿದೆ. ಏಪ್ರಿಲ್ 23, 2026ರ ತಮಿಳುನಾಡು ವಿಧಾನಸಭೆ ಚುನಾವಣೆ ಹಾಗೂ ಪಶ್ಚಿಮ ಬಂಗಾಳದ ಮೊದಲ ಹಂತದ ವಿಧಾನಸಭೆ ಚುನಾವಣೆಗೆ ಮುಂಚಿತವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ತಮಿಳುನಾಡಿನಲ್ಲಿ ನಡೆಸಿದ ಪ್ರಚಾರ ರ್ಯಾಲಿಯು ಇದೀಗ ಚರ್ಚೆಯ ಮುಖ್ಯ ಕೇಂದ್ರ ಬಿಂದುವಾಗಿದೆ.
ರ‍್ಯಾಲಿಯ ವಿಡಿಯೋಗಳು ಮತ್ತು ಸ್ಕ್ರೀನ್‌ಶಾಟ್‌ಗಳು ಇದೀಗ ವೈರಲ್ ಆಗುತ್ತಿವೆ. ಚುನಾವಣೆ ಪ್ರಚಾರದ ಸಮಯದಲ್ಲಿ ಪ್ರಧಾನಿ ಮೋದಿ ಅವರು ಗಾಢವಾದ ಚರ್ಮದ ಟೋನ್ ಹೊಂದಿದ್ದಾರೇ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು, ಕಪ್ಪು ಬಣ್ಣದ ಮೇಕಪ್ ಬಳಸಿದ್ದಾರೆ ಎನ್ನುವ ವಿಚಾರವು ಆನ್‌ಲೈನ್‌ನಲ್ಲಿ ಊಹಾಪೋಹ ಮತ್ತು ಟ್ರೋಲಿಂಗ್‌ಗೆ ಕಾರಣವಾಗಿದೆ. ಕೆಲವರು ಸ್ಥಳೀಯ ಮತದಾರರೊಂದಿಗೆ ಸಂಪರ್ಕ ಸಾಧಿಸಲು ಅವರು ಗಾಢವಾದ ಬಣ್ಣದ ಮೇಕಪ್ ಅಥವಾ ಬ್ರಾಂಜರ್ ಬಳಸಿದ್ದಾರೆ ಎಂದು ಕೆಲವರು ಆರೋಪಿಸಿದ್ದಾರೆ.
Modi ji ne kiya hai toh kuch soch samajh kar hi kiya hoga pic.twitter.com/bQHOimprxS
— Congress Kerala (@INCKerala) April 20, 2026
ಕೇರಳಂ ಕಾಂಗ್ರೆಸ್ ಟೀಕೆ
ಇನ್ನು ಪ್ರಧಾನಿ ನರೇಂದ್ರ ಮೋದಿ ಅವರು ತಮಿಳುನಾಡಿನ ವಿಧಾನಸಭೆ ಚುನಾವಣಾ ಪ್ರಚಾರ ರ‍್ಯಾಲಿಯ ವಿಡಿಯೋವನ್ನು ಹಂಚಿಕೊಂಡಿರುವ ಕೇರಳಂ ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ, ಮೋದಿ ಜೀ ಸ್ವಲ್ಪ ಯೋಚಿಸಿದ ನಂತರವೇ ಅದನ್ನು ಮಾಡಿರಬೇಕು ಎಂದು ಹೇಳಿದೆ. ಈ ವಿಚಾರವಾಗಿ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಹಾಗೂ ಟೀಕೆ ಸಹ ಶುರುವಾಗಿದೆ. ಆದರೆ ಇದು ನಿಜವೇ ಎನ್ನುವುದು ಸಾಬೀತಾಗಿಲ್ಲ.












Click it and Unblock the Notifications