ನನಗಾಗಿ, ನಿಮಗಾಗಿ, ದೇಶಕ್ಕಾಗಿ 'ನಮೋನಂಬರ್'!

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸರಕಾರವನ್ನು ಕೆಳಗಿಳಿಸಿ ಬಿಜೆಪಿಯ ನೇತೃತ್ವ ವಹಿಸಿರುವ ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿ ಮಾಡಬೇಕೆಂಬ ಮಹತ್ವಾಕಾಂಕ್ಷೆಯಿಂದ 'ನಮೋನಂಬರ್' ಎಂಬ ಹೊಸ ಎಸ್ಎಮ್ಎಸ್ ಅಭಿಯಾನವನ್ನು India272+ ಸ್ವಯಂಸೇವಕರ ವೇದಿಕೆ ಆರಂಭಿಸಿದೆ. ಈ ಅಭಿಯಾನಕ್ಕೆ ನರೇಂದ್ರ ಮೋದಿ ಅವರು ಗಾಂಧಿನಗರದಲ್ಲಿ ಬುಧವಾರ ಚಾಲನೆ ನೀಡಿದರು.

ನಮೋ ನಂಬರ್ ಮೂಲಕ ಸ್ವಯಂಸೇವಕ ಎಷ್ಟು ಮೋದಿ ಬೆಂಬಲಿಗರನ್ನು ಬಿಜೆಪಿ ಪರ ಮತಹಾಕಲು ಪ್ರೇರೇಪಿಸುತ್ತಾನೆ ಎಂಬುದು ತಿಳಿದುಬರಲಿದೆ. ನರೇಂದ್ರ ಮೋದಿ ಅವರು ಪ್ರಧಾನಿಯಾಗಬೇಕು ಎಂದು ಹಂಬಲಿಸುತ್ತಿರುವ ನಾಗರಿಕರು ತಮ್ಮ ಮತಚೀಟಿಯ ಸಂಖ್ಯೆಯನ್ನು 78200 78200 ಸಂಖ್ಯೆಗೆ ಎಸ್ಎಮ್ಎಸ್ ಮಾಡಬೇಕು. ಒಬ್ಬ ಸ್ವಯಂಸೇವಕ ತನ್ನ ಎಷ್ಟು ಸ್ನೇಹಿತರು, ಬಂಧುಗಳನ್ನು ಈ ಅಭಿಯಾನದಲ್ಲಿ ತೊಡಗಿಸಿಕೊಳ್ಳುತ್ತಾನೆ ಎಂಬುದರ ಲೆಕ್ಕವೂ ಇದು ಇಡಲಿದೆ.


ವೋಟರ್ ಐಡಿಯನ್ನು ನಮೋನಂಬರ್‌ಗೆ ಎಸ್ಎಮ್ಎಸ್ ಮಾಡುವುದರಿಂದ ನರೇಂದ್ರ ಮೋದಿ ಅವರನ್ನು ಬೆಂಬಲಿಸಿದಂತಾಗುವುದು ಮಾತ್ರವಲ್ಲ, ಆಯಾ ಮತದಾರರ ಹೆಸರು ಮತ್ತು ಗುರುತಿನ ಸಂಖ್ಯೆ ಮತದಾರರ ಪಟ್ಟಿಯಲ್ಲಿ ತಪ್ಪದೆ ದಾಖಲಾಗುವಂತೆ ನೋಡಿಕೊಳ್ಳಲಾಗುವುದು. ಮತದಾನ ಮಾಡಬೇಕಾದರೆ ಅವರ ಗುರುತಿನ ಸಂಖ್ಯೆ ಮತದಾರರ ಪಟ್ಟಿಯಲ್ಲಿ ದಾಖಲಾಗಿರುವುದು ತೀರ ಅಗತ್ಯ.

ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ, ಮೋದಿಯನ್ನು ಬೆಂಬಲಿಸಿ ಎಸ್ಎಮ್ಎಸ್ ಕಳಿಸಿದವರಿಗೆ, ಅವರ ಮತಹಾಕುವ ಬೂತ್ ಎಲ್ಲಿದೆ ಎಂದು ಸ್ನೇಹಿತರಿಗೆ ಮತ್ತು ಬಂಧುಗಳಿಗೆ ಮೊದಲೇ ತಿಳಿಯಲಿದೆ. ಸ್ಥಳೀಯ ಕಾರ್ಯಕರ್ತರನ್ನು ಸಂಪರ್ಕದಲ್ಲಿಟ್ಟುಕೊಂಡು ಅವರಿಗೆ ಸಹಾಯ ಮಾಡಲು ಕೂಡ ಸ್ವಯಂಸೇವಕರಿಗೆ ನಮೋನಂಬರ್ ಸಹಕಾರಿಯಾಗಲಿದೆ. ಈ ನಂಬರ್ ಆಯಾ ಕ್ಷೇತ್ರಗಳಲ್ಲಿ ಚುನಾವಣೆಗೆ ನಿಂತಿರುವ ಅಭ್ಯರ್ಥಿ ಪರ ಪ್ರಚಾರ ಕುರಿತ ಮಾಹಿತಿಯನ್ನು ಕೂಡ ಒದಗಿಸಲಿದೆ.

Narendra Modi launches NaMoNumber a Mission272+ Initiative

ನಮೋನಂಬರ್ ಬಳಸುವುದು ಹೇಗೆ? : ಮತದಾರರ ಗುರುತಿನ ಚೀಟಿಯಲ್ಲಿರುವ ಸಂಖ್ಯೆಯನ್ನು 78200 78200 ಸಂಖ್ಯೆಗೆ ಎಸ್ಎಮ್ಎಸ್ ಮಾಡಬೇಕು. (ಕೆಳಗಿನ ಚಿತ್ರ ನೋಡಿರಿ.)

ನನ್ನ ನಮೋನಂಬರ್ ಏರಿಸಿಕೊಳ್ಳುವುದು ಹೇಗೆ? : ಸ್ವಯಂಸೇವಕರ ಸ್ನೇಹಿತರು, ಬಂಧುಗಳು ತಮ್ಮ ಗುರುತಿನ ಸಂಖ್ಯೆಯ ಜೊತೆಗೆ ಸ್ವಯಂಸೇವಕರ ಮೊಬೈಲ್ ಸಂಖ್ಯೆಯನ್ನು ನಮೂದಿಸಿ 78200 78200 ಸಂಖ್ಯೆಗೆ ಎಸ್ಎಮ್ಎಸ್ ಮಾಡಬೇಕು (1ನೇ ಲೆವೆಲ್). ಸ್ನೇಹಿತರು ತಮ್ಮ ಸ್ನೇಹಿತರಿಗೆ ಮತ್ತು ಬಳಗದವರಿಗೆ ಎಸ್ಎಮ್ಎಸ್ ಕಳುಹಿಸಲು ತಿಳಿಸಬಹುದು (2ನೇ ಲೆವೆಲ್.)

Narendra Modi launches NaMoNumber a Mission272+ Initiative

ನೋಂದಾಯಿಸಿಕೊಂಡ ಸ್ವಯಂಸೇವಕರು ಸ್ಥಳೀಯ ಪ್ರಣಾಳಿಕೆ ತಯಾರಿಸಲು ಸಲಹೆ ನೀಡಬಹುದು ಮತ್ತು ಆಯ್ದ ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣೆಗೆ ನಿಂತ ಅಭ್ಯರ್ಥಿಗೆ India272+ ಸ್ವಯಂಸೇವಕರ ವೇದಿಕೆ ಮೂಲಕ ಮಾಹಿತಿಯನ್ನು ಕೂಡ ಒದಗಿಸಬಹುದು. ಎಲ್ಲಕ್ಕಿಂತ ಹೆಚ್ಚಾಗಿ, ಅತಿ ಹೆಚ್ಚು ತೊಡಗಿಸಿಕೊಂಡ ಸ್ವಯಂಸೇವಕರಿಗೆ ನರೇಂದ್ರ ಮೋದಿ ಅವರನ್ನು ಭೇಟಿ ಆಗುವ ಅವಕಾಶ ಕೂಡ ದೊರೆಯಲಿದೆ.

ನರೇಂದ್ರ ಮೋದಿ ಅವರನ್ನು ಪ್ರಧಾನಿ ಹುದ್ದೆಯ ಮೇಲೆ ಕೂಡಿಸಲೇಬೇಕು ಎಂಬ ಮಹತ್ ಉದ್ದೇಶದಿಂದ India272+ ಆನ್ ಲೈನ್ ವೇದಿಕೆ ಯುದ್ಧೋಪಾದಿಯಲ್ಲಿ 'ಮೆರೆ ಸಪನೋಂಕಾ ಭಾರತ್ (ನನ್ನ ಕನಸಿನ ಭಾರತ)' ಮುಂತಾದ ಅಭಿಯಾನಗಳ ಮೂಲಕ ಮತದಾರರನ್ನು ಸೆಳೆಯುವ, ಬಿಜೆಪಿ ನಾಯಕರು ಮತ್ತು ಕಾರ್ಯಕರ್ತ ನಾಯಕರೊಡನೆ ಮಾತುಕತೆಯಲ್ಲಿ ತೊಡಗಿದೆ. ಇವುಗಳ ಜೊತೆಗೆ 'ನಮೋನಂಬರ್' ಅಭಿಯಾನವೂ ಸೇರಿಕೊಳ್ಳಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+