ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ದೀಪಾವಳಿಯನ್ನು ಯೋಧರಿಗೆ ಸಮರ್ಪಿಸೋಣ: ಪ್ರಧಾನಿ ಮೋದಿ

By Prithviraj
|
Google Oneindia Kannada News

ನವದೆಹಲಿ, ಅಕ್ಟೋಬರ್, 30: ಹಗಲಿರುಳು ನಮ್ಮನ್ನು ಕಾಯುವ ಸೇನಾ ಯೋಧರಿಗೆ ಈ ವರ್ಷದ ದೀಪಾವಳಿ ಹಬ್ಬವನ್ನು ಸಮರ್ಪಿಸೋಣ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ತಿಳಿಸಿದರು.

ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್ ನ 25ನೇ ಸರಣಿಯಲ್ಲಿ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿರುವ ಅವರು, ದೇಶದ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳನ್ನು ಕೋರಿದರು.

Narendra Modi dedicates Diwali to armymen at #MannKiBaat

ಕಾರ್ಯಕ್ರಮದಲ್ಲಿ ಯೋಧರ ತ್ಯಾಗ ಹಾಗೂ ಬಲಿದಾನಗಳ ಕುರಿತು ಶ್ಲಾಘಿಸಿದರು. "ಸೈನಿಕರು ಕರ್ತವ್ಯ ನಿರ್ವಹಿಸುತ್ತಿರುವುದರಿಂದ ನಾವು ಸಂತೋಷದಿಂದ ದೀಪಾವಳಿ ಆಚರಿಸುತ್ತಿದ್ದೇವೆ. ಆದ್ದರಿಂದ ನಮ್ಮ ಯೋಧರಿಗೆ ಧನ್ಯವಾದ ಹೇಳಬೇಕು" ಎಂದು ಅವರು ಹೇಳಿದರು.

ಭಾಷಣದ ಮುಖ್ಯಾಂಶಗಳು

ನಮ್ಮ ರಕ್ಷಣೆಯಲ್ಲಿ ಮಗ್ನರಾಗಿರು ಭದ್ರತಾ ಪಡೆ ಸಿಬ್ಬಂದಿ ಮತ್ತು ಯೋಧರಿಗೆ ಪ್ರೀತಿ ತೋರಿಸುತ್ತಿರುವ ನಾಗರಿಕರಿಗೆ ನನ್ನ ಕೃತಜ್ಞತೆಗಳು ಈ ದೀಪಾವಳಿ ಯೋಧರಿಗೆ ಸಮರ್ಪಿಸೋಣ ಎಂದು ತಿಳಿಸಿದರು.

* ದೀಪಾವಳಿಯನ್ನು ಕೇವಲ ಭಾರತದಲ್ಲಿ ಮಾತ್ರವಲ್ಲದೆ ವಿಶ್ವಾದ್ಯಂತ ಆಚರಿಸುತ್ತಾರೆ. ಬೆಳಕಿನ ಹಬ್ಬ ದೀಪಾವಳಿ ವಿವಿಧ ಸಮುದಾಯಗಳ ನಡುವೆ ಬಾಂಧವ್ಯ ಬೆಸೆಯುತ್ತದೆ ಎಂದು ಹೇಳಿದರು.

* ಕತ್ತಲೆಯನ್ನು ಕಳೆದು ಬೆಳಕು ಮೂಡಿಸುವ ಹಬ್ಬವೇ ದೀಪಾವಳಿ. ಈ ಹಬ್ಬ ಸ್ವಚ್ಛತೆಯನ್ನು ಕೂಡ ಸೂಚಿಸುತ್ತದೆ. ಪ್ರತಿಯೊಬ್ಬರೂ ತಮ್ಮ ಮನೆಗಳನ್ನು ಸ್ವಚ್ಛಗೊಳಿಸುತ್ತಾರೆ. ಅದರ ಜೊತೆಗೆ ನಮ್ಮ ಸುತ್ತಮುತ್ತಲೂ ಕೂಡ ಶುಚಿಯಾಗಿಟ್ಟುಕೊಳ್ಳಬೇಕು.

* ಭಾರತದ ಕಲೆ, ಸಂಸ್ಕೃತಿ, ಹಬ್ಬಗಳು ನಮ್ಮ ಪರಿಸರದ ಬಗ್ಗೆ ಜಾಗೃತಿ ಮೂಡಿಸುವುದಲ್ಲದೆ ಭೂಮಿ, ಪಕ್ಷಿ, ಪ್ರಾಣಿ, ನದಿ, ಗುಡ್ಡ-ಬೆಟ್ಟಗಳ ಬಗ್ಗೆ ನಮ್ಮ ಜವಾಬ್ದಾರಿ ಏನೆಂಬುದನ್ನು ತಿಳಿಸುತ್ತದೆ.

* ನಮ್ಮ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಯೋಧರ ಹೆಸರಿನಲ್ಲಿ ದೀಪ ಬೆಳಗೋಣ.
* ಐಟಿಬಿಪಿ, ಅಸ್ಸಾಂ ರೈಫಲ್ಸ್, ಸಿಆರ್ ಪಿಎಫ್, ಬಿಎಸ್ಎಫ್, ನೌಕಾಪಡೆ, ಸೇನೆ ಮತ್ತು ಕರಾವಳಿ ಪಡೆಯ ಸೈನಿಕರ ಉತ್ಸಾಹ, ಧೈರ್ಯ, ಮತ್ತು ಯೋಧರ ತ್ಯಾಗಗಳು ಶ್ಲಾಘನೀಯ.

* ಬಯಲು ಶೌಚ ಮುಕ್ತ ರಾಜ್ಯ ಎಂಬ ಕೀರ್ತಿಗೆ ಪಾತ್ರವಾಗಿರುವ ಹಿಮಾಚಲ ಪ್ರದೇಶ ಮತ್ತು ಸಿಕ್ಕಿಂ ರಾಜ್ಯಗಳಿಗೆ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದರು.

* ತಮ್ಮ ರಾಜ್ಯವನ್ನು ಬಯಲು ಶೌಚ ಮುಕ್ತಗೊಳಿಸಲು ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುವ ಕೇರಳದ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಧನ್ಯವಾದ ಪ್ರಧಾನಿ ಮೋದಿ ಧನ್ಯವಾದ ಹೇಳಿದರು.

English summary
Prime Minister Narendra Modi dedicates Diwali to armymen at #MannKiBaat on Sunday. PM wished the nation in his 'Mann Ki Baat' monthly radio programme on the occasion of Diwali, saying this is a festival associated with cleanliness.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X