• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ರಧಾನಿಯಾದ ನಂತರ ನಡೆಸಿದ ಮೊದಲ ಸುದ್ದಿಗೋಷ್ಠಿಯಲ್ಲೂ ಭಾಷಣವೇ ಮಾಡಿದ ಮೋದಿ!

|
   Narendra Modi: ಪ್ರಧಾನಿಯಾದ ಮೇಲೆ ಮೊದಲ ಸುದ್ದಿಗೋಷ್ಠಿ ಕರೆದಿದ್ದ ನರೇಂದ್ರ ಮೋದಿ

   ನವದೆಹಲಿ, ಮೇ 17: ಪ್ರಧಾನಿಯಾಗಿ ಐದು ವರ್ಷ ಪೂರೈಸಿರುವ ನರೇಂದ್ರ ಮೋದಿ ಅವರು ಇಲ್ಲಿವರೆಗೆ ಒಂದೂ ಸುದ್ದಿಗೋಷ್ಠಿಯನ್ನು ಎದುರಿಸಿರಲಿಲ್ಲ, ಆದರೆ ಇಂದು ಮೊದಲ ಬಾರಿಗೆ ಸುದ್ದಿಗೋಷ್ಠಿಗೆ ಹಾಜರಾದರು, ಆದರೆ ಅಲ್ಲಿಯೂ ಭಾಷಣವನ್ನೇ ಮಾಡಿ ತೆರಳಿದರು!

   ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

   ಹೌದು, ಕಳೆದ ಐದು ವರ್ಷದಲ್ಲಿ ಪ್ರಧಾನಿ ಮೋದಿ ಅವರು ಇಂದು ಮೊದಲ ಬಾರಿಗೆ ಸುದ್ದಿಗೋಷ್ಠಿಗೆ ಹಾಜರಾಗಿದ್ದರು, ದೆಹಲಿಯ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮತ್ತು ಪ್ರಧಾನಿ ಮೋದಿ ಅವರು ಇತರ ನಾಯಕರುಗಳೊಂದಿಗೆ ಭಾಗವಹಿಸಿದ್ದರು.

   ಫಲಿತಾಂಶದ ದಿನ ಇತಿಹಾಸ ನಿರ್ಮಾಣವಾಗಲಿದೆ: ಮೋದಿ

   ಪ್ರಧಾನಿಯ ಮೊದಲ ಸುದ್ದಿಗೋಷ್ಠಿಯೆಂಬ ಕಾರಣಕ್ಕೆ ಹಲವು ಹಿರಿಯ ಪತ್ರಕರ್ತರೇ ಸುದ್ದಿಗೋಷ್ಠಿಗೆ ಆಗಮಿಸಿದ್ದರು, ಆದರೆ ಮೋದಿ ಅವರು ಎಲ್ಲರಿಗೂ ನಿರಾಸೆ ಮಾಡಿಬಿಟ್ಟರು. ಮೋದಿ ಅವರು ತಮಗೆ ಬೇಕಾದ್ದು ಹೇಳಿದರು, ಆದರೆ ಸುದ್ದಿಗಾರರು ಕೇಳಿದ ಯಾವ ಪ್ರಶ್ನೆಗೂ ಉತ್ತರಿಸಲೇ ಇಲ್ಲ.

   ಬಾಪುಗೆ ಅವಮಾನ ಮಾಡಿದ ಪ್ರಗ್ಯಾಳನ್ನು ಕ್ಷಮಿಸಲಾರೆ: ಮೋದಿ

   ಸುದ್ದಿಗೋಷ್ಠಿ ಮುಗಿದು, ಪ್ರಶ್ನೋತ್ತರ ಪ್ರಾರಂಭವಾದಾಗ ಅಮಿತ್ ಶಾ ಅವರೇ ಪತ್ರಕರ್ತರ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿದರು, ಒಂದು ಪ್ರಶ್ನೆಯನ್ನೂ ಮೋದಿ ಅವರು ಸ್ವೀಕರಿಸಲಿಲ್ಲ. ಪತ್ರಕರ್ತೆಯೊಬ್ಬರು ಮೋದಿ ಅವರು ಉತ್ತರಿಸಬೇಕೆಂದು ಒತ್ತಾಯ ಮಾಡಿದರಾದರೂ ಸಹ ಮೋದಿ ಅವರು ಉತ್ತರಿಸಲು ನಿರಾಕರಿಸಿದರು, ಅಮಿತ್ ಶಾ ಅವರು ಮಧ್ಯೆ ಬಾಯಿ ಹಾಕಿ ಈ ಪ್ರಶ್ನೆಗೆ ಪ್ರಧಾನಿ ಅವರು ಉತ್ತರಿಸಬೇಕಿಲ್ಲ, ಪ್ರಶ್ನೆಯು ಪಕ್ಷಕ್ಕೆ ಸಂಬಂಧ ಪಟ್ಟಿರುವುದು ಹಾಗಾಗಿ ನಾನು ಉತ್ತರಿಸುತ್ತೇನೆ ಎಂದರು.

   ಸುದ್ದಿಗೋಷ್ಠಿಯಲ್ಲೂ ಮೋದಿ ಭಾಷಣ

   ಸುದ್ದಿಗೋಷ್ಠಿಯಲ್ಲೂ ಮೋದಿ ಭಾಷಣ

   ಸುದ್ದಿಗೋಷ್ಠಿಯನ್ನುದ್ದೇಶಿಸಿ ಮೋದಿ ಅವರು ಮಾತನಾಡಿದ ಮಾತುಗಳೂ ಸಹ ಭಾಷಣದಂತೆಯೇ ಇದ್ದವು, ಮಾತಿನ ಪ್ರಾರಂಭದಲ್ಲಿಯೇ ಅವರು, ವಿಶ್ವದ ದೊಡ್ಡ ಪ್ರಜಾಪ್ರಭುತ್ವ ದೇಶ ಭಾರತ, ನಾವು ವಿಶ್ವದ ಮೇಲೆ ಪ್ರಭಾವ ಬೀರಬೇಕು ಎಂದು ಸಮಾವೇಶದ ಮಾದರಿ ಮಾತು ಪ್ರಾರಂಭಿಸಿದರು.

   ಕೆಲವು ಹಾಸ್ಯ ಚಟಾಕಿ ಸಹ ಹಾರಿಸಿದರು

   ಕೆಲವು ಹಾಸ್ಯ ಚಟಾಕಿ ಸಹ ಹಾರಿಸಿದರು

   ಅಲ್ಲಲ್ಲಿ ಒಮ್ಮೊಮ್ಮೆ ಹಾಸ್ಯ ಚಟಾಕಿ ಹಾರಿಸಿದರು, ಮೊದಲು ನನಗೆ ಇದೇ ಕೆಲಸವಾಗಿತ್ತು, ಪಕ್ಷದ ಮಾಧ್ಯಮ ಸಂವಹನ ನೋಡಿಕೊಳ್ಳುತ್ತಿದ್ದೆ, ಇದೇ ಸ್ಥಳದಲ್ಲಿ ನಿಮ್ಮಲ್ಲಿನ ಹಲವರೊಂದಿಗೆ ಸಂಜೆ ಆಗುತ್ತಲೆ ಚಹ ಹೀರುತ್ತಿದ್ದೆ, ಈಗ ಹಲವಾರು ಹೊಸ ಮುಖಗಳು ಬಂದಿವೆ ಎಂದು ಹಳೆಯದನ್ನೂ ನೆನಪಿಸಿಕೊಂಡರು.

   ಪಕ್ಷ ನಡೆಸುವುದು ಸುಲಭದ ಮಾತಲ್ಲ: ಮೋದಿ

   ಪಕ್ಷ ನಡೆಸುವುದು ಸುಲಭದ ಮಾತಲ್ಲ: ಮೋದಿ

   ಪಕ್ಷ ನಡೆಸುವ ಬಗ್ಗೆ ಮಾತನಾಡಿದ ಮೋದಿ ಅವರು, ಪಕ್ಷ ನಡೆಸುವುದು ಅಷ್ಟು ಸುಲಭದ ಕೆಲಸವಲ್ಲ, ಕೋಟ್ಯಂತರ ಕಾರ್ಯಕರ್ತರು, ಕೋಟ್ಯಂತರ ವ್ಯಕ್ತಿಗಳನ್ನು ತಲುಪಿಸುವ, ಎಲ್ಲರೊಂದಿಗೆ ಸಂವಹನ ಸಾಧಿಸುವ, ಲಕ್ಷಾಂತರ ಮುಖಂಡರನ್ನು ಎಚ್ಚರದಿಂದಿರಿಸುವ, ಎಲ್ಲರನ್ನೂ ಒಂದು ವಿಚಾರಧಾರೆಯಲ್ಲಿ ಕೊಂಡೊಯ್ಯುವ ಕಾರ್ಯ ಬಹಳ ಯೋಜಿತವಾದುದು ಎಂದು ಪಕ್ಷದ ಮಾನವ ಸಂಪನ್ಮೂಲ ನಿರ್ವಹಣೆಯ ಬಗ್ಗೆ ಹೇಳಿಕೊಂಡರು.

   ಪತ್ರಕರ್ತರಿಗೆ ಸಲಹೆ ನೀಡಿದ ಮೋದಿ

   ಪತ್ರಕರ್ತರಿಗೆ ಸಲಹೆ ನೀಡಿದ ಮೋದಿ

   ಪತ್ರಕರ್ತರಿಗೆ ಕೆಲವು ಸಲಹೆಗಳನ್ನೂ ಸಹ ಮೋದಿ ಸುದ್ದಿಗೋಷ್ಠಿಯಲ್ಲಿ ನೀಡಿದರು. ಹಲವು ದಶಕಗಳ ನಂತರ ಪೂರ್ಣಾವಧಿ ಪೂರೈಸಿದ ಸರ್ಕಾರ ಮತ್ತೆ ಬಹುಮತ ಪಡೆಯಲು ಹೊರಟಿದೆ, ಇದು ಅಧ್ಯಯನ ಯೋಗ್ಯ ಎನಿಸುತ್ತದೆ, ಆಸಕ್ತ ಪತ್ರಕರ್ತರು ಇದನ್ನು ಅಧ್ಯಯನ ಮಾಡಬಹುದು ಎಂದರು, ಅಲ್ಲದೆ, ಪಕ್ಷ ನಡೆಸುವ ರೀತಿಯನ್ನೂ ಸಹ ಅಧ್ಯಯನ ಮಾಡಬಹುದು ಎಂದರು.

   'ಒಳ್ಳೆಯ ಸುದ್ದಿಗೆ ನಿಮ್ಮಲ್ಲಿ ಸ್ಥಳವೇ ಇಲ್ಲದಾಗಿದೆ'

   'ಒಳ್ಳೆಯ ಸುದ್ದಿಗೆ ನಿಮ್ಮಲ್ಲಿ ಸ್ಥಳವೇ ಇಲ್ಲದಾಗಿದೆ'

   ಹೊಸ ತಲೆಮಾರಿನ ಪತ್ರಿಕೋದ್ಯಮವನ್ನು ಸೂಕ್ಷ್ಮವಾಗಿ ಟೀಕಸಿದ ಮೋದಿ, ಇಂದಿನ ರಾಜಕೀಯ 'ತೂ,ತೂ-ಮೇ, ಮೇ' (ನಾನಾ-ನೀನಾ) ದಿಂದ ತುಂಬಿಹೋಗಿದೆ. ಹಾಗಾಗಿ ಪತ್ರಿಕೋದ್ಯಮವೂ ಇಂತಹುದ್ಕೆ ಒತ್ತು ನೀಡುತ್ತಿವೆ. ಒಳ್ಳೆಯ ವಿಷಯಗಳಿಗೆ ಅವುಗಳ ಬಳಿ ಸ್ಥಳವೇ ಇಲ್ಲದಂತಾಗಿದೆ. ಟಿವಿ ಮಾಧ್ಯಗಳಿಗಂತೂ ಒಳ್ಳೆಯ ಸುದ್ದಿಗಳಿಗಾಗಿ ಕೆಲವು ಸೆಕೆಂಡುಗಳಷ್ಟೂ ಸಮಯ ದೊರೆಯುತ್ತಿಲ್ಲ ಎಂದು ಟೀಕಿಸಿದರು.

   ಪತ್ರಕರ್ತರಿಗೆ ನಿರಾಸೆ ಮೂಡಿಸಿದ ಮೋದಿ

   ಪತ್ರಕರ್ತರಿಗೆ ನಿರಾಸೆ ಮೂಡಿಸಿದ ಮೋದಿ

   ಐದು ವರ್ಷಗಳಲ್ಲಿ ಇಂದಾದರೂ ಸಿಕ್ಕಿದರಲ್ಲ ಎಂದು ಮೋದಿ ಅವರಿಗೆ ಕೇಳಲು ಪ್ರಶ್ನೆಗಳನ್ನು ತಯಾರು ಮಾಡಿಕೊಂಡು ಬಂದಿದ್ದ ಪತ್ರಕರ್ತರ ನಿರೀಕ್ಷೆ ಹುಸಿ ಮಾಡಿದರು. ಮೋದಿ ಅವರು ಈ ಹಿಂದೆ ಕೆಲವು ಆಯ್ದ ಚಾನೆಲ್‌ಗಳ ಪತ್ರಕರ್ತರಿಗೆ ಮಾತ್ರವೇ ಖಾಸಗಿ ಸಂದರ್ಶನ ನೀಡಿದ್ದರು. ಆದರೆ ಆ ಸಂದರ್ಶನಗಳಲ್ಲಿನ ಪ್ರಶ್ನೋತ್ತರಗಳು ಪೂರ್ವನಿರ್ಧಾರಿತವಾಗಿದ್ದವು ಎಂದು ವಿರೋಧಿಗಳು ಆರೋಪಿಸಿದ್ದರು.

   English summary
   Narendra Modi today addresses his first ever press meet as prime minister. But in the press meet also he did not single question from any reporter, all questions answered by Amit Shah.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
   X