ನೊಪೊರಾ ಉಪಚುನಾವಣೆ: ಟಿಎಂಸಿಗೆ ಭರ್ಜರಿ ಗೆಲುವು, ಎರಡನೇ ಸ್ಥಾನದಲ್ಲಿ ಬಿಜೆಪಿ
ಕೊಲ್ಕೊತ್ತಾ, ಫೆಬ್ರವರಿ 1: ಪಶ್ಚಿಮ ಬಂಗಾಳ ನೊಪೊರಾ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ, ಸಿಪಿಐಎಂ ಪಕ್ಷಗಳು ಮುಖಭಂಗ ಅನುಭವಿಸಿವೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅಭ್ಯರ್ಥಿ ಇಲ್ಲಿ ಭರ್ಜರಿ ಜಯ ದಾಖಲಿಸಿದ್ದಾರೆ.
ಟಿಎಂಸಿಯ ಅಭ್ಯರ್ಥಿ ಸುನಿಲ್ ಸಿಂಗ್ ತಮ್ಮ ಪ್ರತಿಸ್ಪರ್ಧಿ ಬಿಜೆಪಿಯ ಅಭ್ಯರ್ಥಿಯನ್ನು 73,018 ಮತಗಳ ಭಾರೀ ಅಂತರದಿಂದ ಸೋಲಿಸಿದ್ದಾರೆ.
ಸುನಿಲ್ ಸಿಂಗ್ ಬರೋಬ್ಬರಿ 1,11,729 ಮತಗಳನ್ನು ಪಡೆದರೆ ಬಿಜೆಪಿ ಅಭ್ಯರ್ಥಿ 38,711 ಮತಗಳನ್ನು ಪಡೆದು ಎರಡನೇ ಸ್ಥಾನ ಪಡೆದಿದ್ದಾರೆ. ಇಲ್ಲಿ ಸಿಪಿಐಎಂ ಮೂರನೇ ಸ್ಥಾನವನ್ನು ಪಡೆದಿದ್ದು ಆ ಪಕ್ಷದ ಅಭ್ಯರ್ಥಿ 35,497 ಮತಗಳನ್ನು ಪಡೆದಿದ್ದಾರೆ. ಇನ್ನು ಕಾಂಗ್ರೆಸ್ ನೊಪೊರಾದಲ್ಲಿ ನಾಲ್ಕನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.

ಈ ಸ್ಥಾನವನ್ನು ಕಾಂಗ್ರೆಸ್ ನ ಮಧುಸೂದನ್ ಘೋಸೆ ಪ್ರತಿನಿಧಿಸುತ್ತಿದ್ದರು. ಅವರು 2016ರ ಚುನಾವಣೆಯಲ್ಲಿ ಟಿಎಂಸಿ ಅಭ್ಯರ್ಥಿಯನ್ನು ಕೇವಲ 1 ಸಾವಿರ ಮತಗಳ ಅಂತರದಿಂದ ಸೋಲಿಸಿದ್ದರು.
ಇದೀಗ ಇಲ್ಲಿ ಕಾಂಗ್ರೆಸ್ ನಾಲ್ಕನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಜತೆಗೆ ಅಚ್ಚರಿಯ ರೀತಿಯಲ್ಲಿ ಕ್ಷೇತ್ರವನ್ನು ಟಿಎಂಸಿ ಭರ್ಜರಿ ಮತಗಳಿಂದ ಜಯ ಸಾಧಿಸಿದೆ. ಜತೆಗೆ ಬಿಜೆಪಿ ಎರಡನೇ ಸ್ಥಾನಕ್ಕೆ ನೆಗೆದಿರುವುದೂ ಹಲವರನ್ನು ಅಚ್ಚರಿಗೆ ಕೆಡವಿದೆ.












Click it and Unblock the Notifications