ಕರಾಚಿಯಲ್ಲಿ ಗಣಪತಿ ಮೂರ್ತಿಗೆ ಪೇಂಟ್ ಮಾಡಿದ ಪಾಕಿಸ್ತಾನದ ಮುಸ್ಲಿಂ ಯುವಕ: Video Viral

ದೇಶದಾದ್ಯಂತ ಗಣೇಶ ಚತುರ್ಥಿಯ ಸಂಭ್ರಮ ಎಲ್ಲೆಡೆ ಜೋರಾಗಿದೆ. ಭಾರತ ಮಾತ್ರವಲ್ಲದೆ ಜಗತ್ತಿನೆಲ್ಲೆಡೆ ನೆಲೆಸಿರುವ ಭಾರತೀಯರು ಈ ಗಣೇಶೋತ್ಸವವನ್ನ ಸಡಗರದಿಂದ ಆಚರಿಸಲು ಸಕಲ ಸಿದ್ಧತೆ ನಡೆಸುತ್ತಿದ್ದಾರೆ. ಇದರ ನಡುವೆ, ನೆರೆಯ ಪಾಕಿಸ್ತಾನದಿಂದ ಕೋಮು ಸೌಹಾರ್ದತೆಯನ್ನ ಸಾರುವ ಸುಂದರವಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.

ಪಾಕಿಸ್ತಾನದ ಕರಾಚಿಯಲ್ಲಿ ಮುಸ್ಲಿಂ ಕಲಾವಿದನೊಬ್ಬ ಹಿಂದೂಗಳ ಆರಾಧ್ಯ ದೈವವಾಗಿರುವ ಗಣಪತಿ ಮೂರ್ತಿಗೆ ಅತ್ಯಂತ ಭಕ್ತಿ ಮತ್ತು ಶ್ರದ್ಧೆಯಿಂದ ಬಣ್ಣ ಬಳಿಯುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಕರಾಚಿಯಲ್ಲಿ ವಾಸಿಸುತ್ತಿರುವ ಮರಾಠಿ ಕುಟುಂಬವೊಂದು ನಡೆಸುತ್ತಿರುವ ದೇವಸ್ಥಾನಕ್ಕಾಗಿ ಈ ಗಣೇಶನ ಮೂರ್ತಿಯನ್ನ ಸಿದ್ಧಪಡಿಸಲಾಗುತ್ತಿದೆ ಎಂಬುದು ವಿಶೇಷ. ಕಲೆಗೆ ಯಾವುದೇ ಧರ್ಮದ ಹಂಗಿಲ್ಲ ಎಂಬುದನ್ನು ಈ ವಿಡಿಯೋ ಜಗತ್ತಿಗೆ ಸಾರುತ್ತಿದೆ.

Muslim Artist Paints Ganapati Idol For A Marathi Family In Karachi Pakistan Watch Viral Video Now

ವೈರಲ್‌ ವಿಡಿಯೋದಲ್ಲಿ ಏನಿದೆ?

ಪಾಕಿಸ್ತಾನ ಮೂಲದ ಕಂಟೆಂಟ್ ಕ್ರಿಯೇಟರ್ ಆಗಿರುವ ಅಮರ್ ಪ್ರಕಾಶ್ ಎಂಬುವವರು ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಸುಂದರವಾದ ವಿಡಿಯೋವನ್ನ ಹಂಚಿಕೊಂಡಿದ್ದಾರೆ. "ಕರಾಚಿಯಲ್ಲಿ ಮಹಾರಾಷ್ಟ್ರ ಮೂಲದ ಕುಟುಂಬವೊಂದು ನಡೆಸುತ್ತಿರುವ ಗಣೇಶ್ ಮಠ್ ಮಂದಿರದ ಒಳಗೆ ಮುಸ್ಲಿಂ ಕಲಾವಿದನೊಬ್ಬ ಗಣಪತಿ ಬಪ್ಪನಿಗೆ ಬಣ್ಣ ಬಳಿಯುತ್ತಿದ್ದಾನೆ" ಎಂದು ಅವರು ವಿಡಿಯೋದ ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.

ವಿಡಿಯೋದ ಆರಂಭದಲ್ಲಿ ಮುಸ್ಲಿಂ ಯುವಕನೊಬ್ಬ ಶ್ವೇತವರ್ಣದ ಗಣಪತಿ ಮೂರ್ತಿಯ ಮುಂದೆ ಕುಳಿತಿರುವುದನ್ನ ಕಾಣಬಹುದು. ಬಳಿಕ ಆತ ಸ್ಪ್ರೇ ಪೇಂಟಿಂಗ್ ಬಳಸಿ ಗಣಪತಿಗೆ ಬಣ್ಣವನ್ನ ತುಂಬಲು ಆರಂಭಿಸುತ್ತಾನೆ. ಇದಾದ ನಂತರ ತನ್ನ ಕೈಯಲ್ಲಿರುವ ಪೇಂಟ್ ಬ್ರಷ್ ಮೂಲಕ ಚಿನ್ನ ಮತ್ತು ಬೆಳ್ಳಿ ಬಣ್ಣಗಳನ್ನ ಬಳಸಿ ಮೂರ್ತಿಗೆ ಅದ್ಭುತವಾದ ಕಳೆ ನೀಡುತ್ತಾನೆ. ಆತನ ಕೈಚಳಕದಲ್ಲಿ ಅರಳಿದ ಗಣಪತಿ ಮೂರ್ತಿಯು ನೋಡುಗರ ಕಣ್ಮನ ಸೆಳೆಯುವಂತಿದೆ.

ವೈರಲ್ ವಿಡಿಯೋಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾದ ಪ್ರತಿಕ್ರಿಯೆ

ಅಮರ್ ಪ್ರಕಾಶ್ ಹಂಚಿಕೊಂಡಿರುವ ಈ ವಿಡಿಯೋ ಇನ್‌ಸ್ಟಾಗ್ರಾಮ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಹುಪಾಲು ವೀಕ್ಷಕರು ಈ ವಿಡಿಯೋ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಮೆಂಟ್ ಬಾಕ್ಸ್‌ನಲ್ಲಿ ಹಾರ್ಟ್ ಎಮೋಜಿಗಳನ್ನ ಹಾಕುವ ಮೂಲಕ ತಮ್ಮ ಪ್ರೀತಿ ಮತ್ತು ಬೆಂಬಲವನ್ನು ಸೂಚಿಸಿದ್ದಾರೆ.

ನೆಟ್ಟಿಗರೊಬ್ಬರು ಕಮೆಂಟ್ ಮಾಡಿ, "ಮಾನವೀಯತೆಯೇ ಅತ್ಯುತ್ತಮ ಧರ್ಮ"ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು "ಇದು ನೋಡಲು ನಿಜಕ್ಕೂ ಸುಂದರವಾಗಿದೆ" ಎಂದು ಕಮೆಂಟ್ ಮಾಡಿದ್ದಾರೆ. ಆದಾಗ್ಯೂ, ಕೆಲವರು ಈ ವಿಡಿಯೋವನ್ನು ವಿಮರ್ಶಿಸಿದ್ದಾರೆ. "ಇದು ಆತನ ವೃತ್ತಿ ಮತ್ತು ಕೆಲಸ. ಆತನ ಕೌಶಲ್ಯವನ್ನ ನಾವು ಮೆಚ್ಚುತ್ತೇವೆ, ಆದರೆ ಇದರಲ್ಲಿ ವೈಭವೀಕರಿಸುವಂತಹದ್ದು ಏನೂ ಇಲ್ಲ" ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.

ಯಾರು ಈ ಕಂಟೆಂಟ್ ಕ್ರಿಯೇಟರ್ ಅಮರ್ ಪ್ರಕಾಶ್?

ಪಾಕಿಸ್ತಾನದಲ್ಲಿರುವ ಹಿಂದೂಗಳ ಜೀವನ ಶೈಲಿ ಹಾಗೂ ಸಂಸ್ಕೃತಿಯನ್ನ ಜಗತ್ತಿಗೆ ಪರಿಚಯಿಸುವ ಕೆಲಸವನ್ನ ಅಮರ್ ಪ್ರಕಾಶ್ ಮಾಡುತ್ತಿದ್ದಾರೆ. ಇವರು ತಮ್ಮ ಪತ್ನಿ ಸುಶ್ಮಿತಾ ಪ್ರಕಾಶ್ ನಿಪೇಂದ್ರ ಹಾಗೂ ತಾಯಿ ಲೀಲಾ ಪ್ರಕಾಶ್ ಅವರೊಂದಿಗೆ ಕರಾಚಿಯಲ್ಲಿ ನೆಲೆಸಿದ್ದಾರೆ. ತಮ್ಮ ಫೇಸ್‌ಬುಕ್ ಬಯೋದಲ್ಲಿ ಉಲ್ಲೇಖಿಸಿರುವಂತೆ, ಇವರು ಪಾಕಿಸ್ತಾನದ ಕರಾಚಿಯಲ್ಲಿರುವ ಸೇಂಟ್ ಪ್ಯಾಟ್ರಿಕ್ಸ್ ಹೈಸ್ಕೂಲ್‌ನಲ್ಲಿ ವಿದ್ಯಾಭ್ಯಾಸ ಪೂರೈಸಿದ್ದಾರೆ. ತದನಂತರ ಸರ್ ಸೈಯದ್ ಯೂನಿವರ್ಸಿಟಿ ಆಫ್ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿಯಿಂದ ಪದವಿ ಪಡೆದಿದ್ದಾರೆ.

ಅಮರ್ ಪ್ರಕಾಶ್ ಆಗಾಗ ಪಾಕಿಸ್ತಾನದಲ್ಲಿನ ತಮ್ಮ ಜೀವನವನ್ನ ಬಿಂಬಿಸುವ ವಿಡಿಯೋಗಳು ಮತ್ತು ಫೋಟೋಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚಿನ ಮತ್ತೊಂದು ವಿಡಿಯೋದಲ್ಲಿ, ಅವರು ಮಹಾರಾಷ್ಟ್ರದ ಸಾಂಪ್ರದಾಯಿಕ ಪೇಟ ಸೇರಿದಂತೆ ಸಂಪೂರ್ಣ ಸಾಂಪ್ರದಾಯಿಕ ಉಡುಗೆಯನ್ನ ತೊಟ್ಟು ಸಂಭ್ರಮಿಸುತ್ತಿರುವುದನ್ನ ಸಹ ನಾವು ಕಾಣಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+