ಮುಂಬೈ: ಭಾನುವಾರದಿಂದ ಮೆಟ್ರೋ ಸಂಚಾರ ಆರಂಭ

ಮುಂಬೈ ಜೂ.7: ದೇಶದ ಮೊದಲ ಮೋನೋ ರೈಲು ಆರಂಭಗೊಂಡ ಆರ್ಥಿಕ ಮಹಾನಗರಿಯಾದ ಮುಂಬೈಯಲ್ಲಿ ಭಾನುವಾರದಿಂದ ಮೆಟ್ರೋ ರೈಲು ಸೇವೆ ಅಧಿಕೃತವಾಗಿ ಆರಂಭವಾಗಲಿದೆ.

ಪ್ರತಿದಿನ 70 ಲಕ್ಷ ಪ್ರಯಾಣಿಕರನ್ನು ಹೊತ್ತೊಯ್ಯುವ ಮುಂಬಯಿಯ ಉಪನಗರ ರೈಲುಗಳ ಒಂದಿಷ್ಟು ಹೊರೆಯನ್ನು ಮುಂಬೈ ಮೆಟ್ರೋ ಇಳಿಸಲಿದೆ. ವೆರ್ಸೋವಾ ಅಂಧೇರಿ ಘಾಟ್ಕೋಪರ್ ನಡುವಿನ 11.4 ಕಿಮೀ ದೂರದ ಮಾರ್ಗ ಭಾನುವಾರ ಉದ್ಘಾಟನೆಗೊಳ್ಳಲಿದ್ದು ಪ್ರತಿ ನಾಲ್ಕು ನಿಮಿಷಗಳಿಗೊಂದು ಈ ಮಾರ್ಗದಲ್ಲಿ ರೈಲು ಸಂಚರಿಸಲಿದೆ.

ನಾಲ್ಕು ತಿಂಗಳ ಹಿಂದೆ ಮುಂಬೈಯ ಉಪನಗರಗಳಾದ ಚೆಂಬೂರು ಮತ್ತು ವಡಾಲದ ನಡುವೆ ಮೋನೋ ರೈಲು ಆರಂಭಗೊಂಡಿತ್ತು.

ಮುಂದಿನ ಪುಟದಲ್ಲಿ ಚಿತ್ರಗಳಲ್ಲಿ ಶನಿವಾರ ದೇಶದಲ್ಲಿ ನಡೆದ ಪ್ರಮುಖ ವಿದ್ಯಮಾನಗಳು, ಕಳೆದ ಒಂದು ವಾರದಲ್ಲಿ ಯಾವ ದಿನಾಂಕದಂದು ಚಿನ್ನ ಮತ್ತು ಬೆಳ್ಳಿ ದರ ಎಷ್ಟು ರೂಪಾಯಿ ಕಡಿಮೆಯಾಗಿದೆ ಇತ್ಯಾದಿ ಮಾಹಿತಿಗಳಿರುವ ಇನ್‌ಫೋಗ್ರಾಫಿಕ್‌ ನೀಡಲಾಗಿದೆ. ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ. [ಚಿತ್ರ ಪಿಟಿಐ]

 ಮುಂಬೈ ಮೆಟ್ರೋ ರೈಲು ಭಾನುವಾರ ಆರಂಭ:

ಮುಂಬೈ ಮೆಟ್ರೋ ರೈಲು ಭಾನುವಾರ ಆರಂಭ:

ವೆರ್ಸೋವಾ ಅಂಧೇರಿ ಘಾಟ್ಕೋಪರ್ ನಡುವೆ ಭಾನುವಾರ ಜೂನ್‌ 8ರಂದು ಮೆಟ್ರೋ ಸಂಚಾರ ಆರಂಭಗೊಳ್ಳಲಿದೆ.

 ಅರುಣ್‌ ಜೇಟ್ಲಿ ಪರಿಶೀಲನೆ:

ಅರುಣ್‌ ಜೇಟ್ಲಿ ಪರಿಶೀಲನೆ:

ಪಶ್ಚಿಮ ನೌಕಾದಳ ಕಮಾಂಡ್‌ಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ರಕ್ಷಣಾ ಸಚಿವ ಅರುಣ್‌ ಜೇಟ್ಲಿ ಮಾತುಕತೆ ನಡೆಸಿದರು.

 ಗೆಳತಿಯನ್ನು ಕೈ ಹಿಡಿದ ಮಹಮ್ಮದ್‌‌ ಶಮಿ:

ಗೆಳತಿಯನ್ನು ಕೈ ಹಿಡಿದ ಮಹಮ್ಮದ್‌‌ ಶಮಿ:

ವೇಗದ ಬೌಲರ್‌ ಮಹಮ್ಮದ್‌ ಶಮಿ ಉತ್ತರ ಪ್ರದೇಶದ ಮುರ್ದಾಬಾದ್‌‌ನಲ್ಲಿ ಗೆಳತಿ, ಮಾಡೆಲ್‌ ವೃತ್ತಿಯಲ್ಲಿರುವ ಹಸೀನಾ ಜಾನ್‌‌ರನ್ನು ಜೂನ್‌.7 ಶನಿವಾರ ವಿವಾಹವಾದರು.

 ಒಂದು ವಾರದ ಚಿನ್ನ ಬೆಳ್ಳಿ ಧಾರಣೆ:

ಒಂದು ವಾರದ ಚಿನ್ನ ಬೆಳ್ಳಿ ಧಾರಣೆ:

ಮೇ.31ರಿಂದ ಜೂನ್‌ 7ರವರೆಗಿನ ಹತ್ತು ಗ್ರಾಂ ಚಿನ್ನ ಮತ್ತು ಒಂದು ಕೆ.ಜಿ ಬೆಳ್ಳಿಯ ಧಾರಣೆ

 ರೈಲಿಗೆ ಟ್ರಕ್‌ ಡಿಕ್ಕಿ

ರೈಲಿಗೆ ಟ್ರಕ್‌ ಡಿಕ್ಕಿ

ಮಾನವರಹಿತ ಲೆವೆಲ್ ಕ್ರಾಸಿಂಗ್‌‌ ಅನ್ನು ಟ್ರಕ್‌ ದಾಟುತ್ತಿದ್ದಾಗ ರೈಲು ಡಿಕ್ಕಿ. ಉತ್ತರ ಪ್ರದೇಶದ ಲಕ್ನೋ ಜಿಲ್ಲೆಯ ಹಾರ್ಡೋಯ್‌ ತಾಲೂಕಿನ ಪಿಹಾನಿಯಲ್ಲಿ ಅಪಘಾತ ಸಂಭವಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+