ವಿಡಿಯೋ: ಅಬ್ಬಾ.. ಅಂಬಾನಿ ಮಗಳ ಮದುವೆ ಕಾರ್ಡ್‌ ಹೇಗಿದೆ ನೋಡಿ

ಮುಂಬೈ, ನವೆಂಬರ್ 11: ವಿಶ್ವದ ಟಾಪ್ ಶ್ರೀಮಂತರದಲ್ಲಿ ಒಬ್ಬರಾದ ಮುಕೇಶ್ ಅಂಬಾನಿ ಮಗಳ ಮದುವೆ ಕೆಲವೇ ದಿನಗಳಲ್ಲಿ ನಡೆಯಲಿದೆ. ಭಾರತದ ಅತಿದೊಡ್ಡ ಶ್ರೀಮಂತನ ಮಗಳ ಮದುವೆಯ ಕರೆಯೋಲೆ ಅತಿ ವೈಭವವಾಗಿದ್ದು, ಈ ಮದುವೆ ಕಾರ್ಡ್‌ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆರಂಭವಾಗಿದೆ.

ಮುಕೇಶ್ ಅಂಬಾನಿಯ ಮಗಳು ಇಶಾ ಅಂಬಾನಿಯು ಆನಂದ್ ಪಿರ್ಮಾಳ್ ಅವರೊಂದಿಗೆ ಡಿಸೆಂಬರ್‌ನಲ್ಲಿ ರಾಜಸ್ಥಾನದಲ್ಲಿ ಮದುವೆ ಆಗಲಿದೆ. ಅವರ ಮದುವೆಯ ಆಹ್ವಾನ ಪತ್ರಿಕೆ ಈಗ ದೊಡ್ಡ ಸುದ್ದಿಯಾಗಿದೆ. ಅದಕ್ಕೆ ಕಾರಣ ಅದರ ವೈಭವ. ಕಾರ್ಡ್‌ನಲ್ಲಿ ಇಣುಕುವ ಅಂಬಾನಿಯ ಶ್ರೀಮಂತಿಕೆ.

ದೊಡ್ಡ ಗಿಫ್ಟ್‌ ಪ್ಯಾಕ್‌ನಂತೆ ಕಾಣುವ ಮದುವೆಯ ಕರೆಯೋಲೆ ನೋಡಲು ಸುಂದರವಾಗಿದೆ. ಹಲವು ಕಪಾಟಿನ ಮಾದರಿಯ ರಚನೆಹೊಂದಿರುವ ಅದರಲ್ಲಿ ಹೆಸರುಗಳನ್ನು ಚಿನ್ನದ ಲೇಪನದಲ್ಲಿ ಬರೆಯಲಾಗಿದೆ. ಗಣೇಶನ ಪುಟ್ಟ ವಿಗ್ರಹ, ಲಕ್ಷ್ಮಿ ವಿಗ್ರಹ ಸೇರಿದಂತೆ ಇನ್ನೂ ಕೆಲವು ದೇವರ ವಿಗ್ರಹಗಳ ಜೊತೆಗೆ ಮುತ್ತಿನ ಹಾರಗಳು ಸಹ ಪತ್ರಿಕೆಯಲ್ಲಿ ಇದೆ.

 Mukesh Ambani daughters royal wedding card

ಆಹ್ವಾನ ಪತ್ರಿಕೆಯನ್ನು ಹಲವು ಚಿನ್ನ ಲೇಪಿತ ಡಿಸೈನರ್‌ ಕೆಲಸಗಳು ಇವೆ, ರೇಷ್ಮೆ ವಸ್ತ್ರಗಳು, ಬೆಳ್ಳಿ, ಮುತ್ತಿನ ಆಭರಣಗಳು ಕಾರ್ಡ್‌ನಲ್ಲಿವೆ. ಒಂದು ಕಾರ್ಡ್‌ಗೆ 3 ಲಕ್ಷ ವೆಚ್ಚವಾಗಿದೆ ಎನ್ನಲಾಗುತ್ತಿದೆ.

ಇಶಾ ಮತ್ತು ಆನಂದ್ ಅವರುಗಳ ವಿವಾಹವು ಡಿಸೆಂಬರ್ 12ರಂದು ನಡೆಯಲಿದೆ. ಆನಂದ್ ಪಿರಾಮಲ್, ಭಾರತದ ನಂ 1 ರಿಯಲ್ ಎಸ್ಟೇಟ್ ಉದ್ಯಮಿ ಅಜಯ್ ಪಿರಾಮಲ್ ಅವರ ಪುತ್ರ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+