ಧೋನಿ ಪತ್ನಿ ಸಾಕ್ಷಿಗೆ ಪ್ರಾಣ ಬೆದರಿಕೆ? ಆರ್ಮ್ಸ್ ಲೈಸೆನ್ಸ್ ಗೆ ಅರ್ಜಿ!

ರಾಂಚಿ, ಜೂನ್ 20: ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಪತ್ನಿ ಸಾಕ್ಷಿ ಅವರಿಗೆ ಪ್ರಾಣ ಬೆದರಿಕೆ ಇದೆ. ಆದ್ದರಿಂದ ಅವರು ಆರ್ಮ್ಸ್ ಲೈಸೆನ್ಸ್ ಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ಜಾರ್ಖಂಡ್ ನ ರಾಂಚಿಯ ಮೂಲಗಳು ತಿಳಿಸಿವೆ.

ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿರುವ ಅವರು, ತಾವು ಮನೆಯಲ್ಲಿ ಹೆಚ್ಚು ಕಾಲ ಒಬ್ಬಳೇ ಇರುತ್ತೇನೆ. ನನಗೆ ಪ್ರಾಣಬೆದರಿಕೆ ಇದೆ. ಆದ್ದರಿಂದ ನನಗೆ ಆರ್ಮ್ಸ್ ಲೈಸೆನ್ಸ್ ನೀಡಬೇಕೆಂದು ರಾಂಚಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಬಳಿ ಅರ್ಜಿ ಸಲ್ಲಿಸಿದ್ದಾರೆ.

2010 ರಲ್ಲಿ ಎಂ ಎಸ್ ಧೋನಿಯವರು ಸಹ ರಾಂಚಿ ಜಿಲ್ಲಾಡಳಿತದಿಂದ ಆರ್ಮ್ ಲೈಸೆನ್ಸ್ ಪಡೆದು, ನಂತರ 9mm ಪಿಸ್ತೂಲ್ ಖರೀದಿಸಿದ್ದರು.

MS Dhonis wife Sakshi applies for an arms licenece

"ಆಯುಧವನ್ನು ನಾನು ನನ್ನ ರಕ್ಷಣೆಗೆ ಮಾತ್ರ ಬಳಸುತ್ತೇನೆ. ಇನ್ಯಾವುದೇ ದುರುದ್ದೇಶದಿಂದಲ್ಲ" ಎಂದು ಸಹ ಸಾಕ್ಷಿ ಅರ್ಜಿಯಲ್ಲಿ ಬರೆದಿದ್ದಾರೆ. ಅವರಿಗೆ ಆರ್ಮ್ಸ್ ಲೈಸೆನ್ಸ್ ನೀಡಬೇಕೋ ಬೇಡವೋ ಎಂಬುದನ್ನು ರಾಂಚಿ ಜಿಲ್ಲಾಡಳಿತ ನಿರ್ಧರಿಸಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+