ವೈರಲ್ ವಿಡಿಯೋ : ಪ್ರವಾಹದಲ್ಲಿ ಗರ್ಭಿಣಿಯ ಪರದಾಟ
ಟಿಕಾಮ್ಗಢ(ಮಧ್ಯಪ್ರದೇಶ), ಜುಲೈ 26: ಅತಿಯಾದ ಮಳೆಯಿಂದಾಗಿ ಪ್ರವಾಹಕ್ಕೆ ತುತ್ತಾಗಿರುವ ಮಧ್ಯಪ್ರದೇಶದ ಟಿಕಾಮ್ಗಢ ಎಂಬಲ್ಲಿ ಗರ್ಭಿಣಿಯೊಬ್ಬರನ್ನು ಆಸ್ಪತ್ರೆಗೆ ಸೇರಿಸಲು ಹರಸಾಹಸ ಪಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಆಂಬುಲೆನ್ಸಿಗೆ ಫೋನಾಯಿಸಿದ್ದರೂ ಅತ್ತೆಡೆಯಿಂದ ಸರಿಯಾದ ಪ್ರತಿಕ್ರಿಯೆ ಬಾರದ ಕಾರಣ ಹಾಸಿಗೆಯೊಂದರಲ್ಲಿ ಗರ್ಭಿಣಿಯನ್ನು ಮಲಗಿಸಿಕೊಂಡು, ನಾಲ್ಕಾರು ಜನ ಹೊತ್ತುಕೊಂಡೇ ಪ್ರವಾಹವನ್ನು ದಾಟಿ ಮುನ್ನುಗ್ಗುತ್ತಿರುವ ಈ ವಿಡಿಯೋ ಕರುಳು ಹಿಂಡುತ್ತದೆ!
#WATCH: Family members of a pregnant woman took her to the hospital in a cot through Tikamgarh's flooded streets after ambulance service number 108 failed to respond. #MadhyaPradesh (25/7/2018) pic.twitter.com/aAbgZg9HxB
— ANI (@ANI) July 25, 2018
ಜುಲೈ 25, ಬುಧವಾರದಂದು ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಲು ಸಹಾಯವಾಣಿ ಸಂಖ್ಯೆಗೆ ಮತ್ತು ಹತ್ತಿರದ ಆಸ್ಪತ್ರೆಗೆ ಫೋನ್ ಮಾಡಿ ಆಂಬುಲೆನ್ಸ್ ಕಳಿಸುವಂತೆ ಹೇಳಿದ್ದರೂ, ಆಸ್ಪತ್ರೆ ಕಡೆಯಿಂದ ಯಾವುದೇ ಪ್ರತಕ್ರಿಯೆ ಲಭ್ಯವಾಗಿರಲಿಲ್ಲ. ಇದರಿಂದಾಗಿ ಬೇರೆ ದಾರಿ ಕಾಣದೆ ಊರಿನ ಜನರೇ ಮಹಿಳೆಯನ್ನು ಆಸ್ಪತ್ರೆಗೆ ಸೇರಿಸುವ ಯತ್ನ ಮಾಡಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಇಲ್ಲಿನ ಜಿಲ್ಲಾಸ್ಪತ್ರೆ ವೈದ್ಯ ಡ.ರವಿ ರಾವತ್, 'ಈ ಕುರಿತು ನನಗೆ ಯಾವುದೇ ಮಾಹಿತಿ ಲಭ್ಯವಿಲ್ಲ. ಆಸ್ಪತ್ರೆಯಿಂದ ಆಂಬುಲೆನ್ಸ್ ಕಳಿಸದೆ ಇರುವುದಕ್ಕೆ ಕಾರಣವೇನು ಎಂಬಿತ್ಯಾದಿ ವಿಷಯದ ಕುರಿತು ವಿಚಾರಣೆ ನಡೆಸಿ, ನಂತರ ಪ್ರತಿಕ್ರಿಯೆ ನೀಡುತ್ತೇನೆ' ಎಂದರು.

ಕಳೆದ ಎರಡು ವಾರಗಳ ಹಿಂದೆ ಇದೇ ಊರಿನ ವ್ಯಕ್ತಿಯೊಬ್ಬರು ಮರಣೋತ್ತರ ಪರೀಕ್ಷೆಯ ನಂತರದ ತಮ್ಮ ತಾಯಿಯ ಶವವನ್ನು ಆಂಬುಲೆನ್ಸ್ ಇಲ್ಲದೆ ಮೋಟಾರ್ ಸೈಕಲ್ಲಿನಲ್ಲೇ ಕೊಂಡೊಯ್ದ ಘಟನೆ ನಡೆದಿತ್ತು.












Click it and Unblock the Notifications