ಬರಲಿದೆ ಮನಮೋಹನ್ ಸಿಂಗ್, ಸೋನಿಯಾ, ರಾಹುಲ್ ಕುರಿತ ಸಿನಿಮಾ!

Recommended Video

      Movie On Manmohan Singh , Sonia Gandhi, Rahul Gandhi | Oneindia Kannada

      ನವದೆಹಲಿ, ಅಕ್ಟೋಬರ್ 14: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿ ಆಳಿದ 10 ವರ್ಷಗಳ ಅಧಿಕಾರಾವಧಿಯ ಬಗ್ಗೆ ಶೀಘ್ರದಲ್ಲೇ ಚಲನ ಚಿತ್ರವೊಂದು ತಯಾರಾಗಲಿದೆ. ಈಗಾಗಲೇ ಚಿತ್ರದ ಸ್ಕ್ರಿಪ್ಟ್ ಸಿದ್ಧವಾಗಿದ್ದು ಐರಿಶ್ ಮೂಲದ ಸಿನಿಮಾ ಸಂಸ್ಥೆಯೊಂದು ಈ ಚಿತ್ರವನ್ನು ನಿರ್ಮಿಸಲಿದೆ ಎಂದು ಹೇಳಲಾಗಿದೆ.

      ಮನಮೋಹನ್ ಸಿಂಗ್ ಪಾತ್ರವನ್ನು ಭಾರತದ ಹಿರಿಯ ನಟರೊಬ್ಬರು ನಿರ್ವಹಿಸುತ್ತಿದ್ದಾರೆಂದು ಹೇಳಲಾಗಿದ್ದು, ಐರಿಶ್ ನಟರೊಬ್ಬರು ರಾಹುಲ್ ಗಾಂಧಿ ಪಾತ್ರವನ್ನು, ಇಟಲಿಯ ನಟಿಯೊಬ್ಬರು ಸೋನಿಯಾ ಗಾಂಧಿ ಪಾತ್ರವನ್ನು ಮಾಡಲಿದ್ದಾರೆ ಎಂದು ಕೆಲ ಮೂಲಗಳು ತಿಳಿಸಿವೆ.

      Movie on Manmohan Singh to have Italian actress for Sonia Gandhi, Hollywood actor for Rahul

      ಅಂದಹಾಗೆ, ಈ ಚಿತ್ರವು ಸಂಜಯ್ ಬಾರು ಬರೆದಿರುವ 'ಮನಮೋಹನ್ ಸಿಂಗ್: ದ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್' ಎಂಬ ಪುಸ್ತಕ ಆಧಾರಿತವಾಗಿದೆ. ಕೇಂದ್ರದಲ್ಲಿ ಮನಮೋಹನ್ ಸಿಂಗ್ ಪ್ರಧಾನಿಯಾಗಿ 10 ವರ್ಷ ಅಧಿಕಾರದಲ್ಲಿದ್ದಾಗ ಅವರಿಗೆ ಸಂಜಯ್ ಬಾರು ಅವರು ಮಾಧ್ಯಮ ಸಲಹೆಗಾರರಾಗಿದ್ದರು.

      ಮನಮೋಹನ್ ಸಿಂಗ್ ಪಾತ್ರ ಮಾತ್ರವಲ್ಲದೆ, ಇದರಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಮಾಜಿ ರಾಷ್ಟ್ರಪತಿ ದಿವಂಗತ ಅಬ್ದುಲ್ ಕಲಾಂ, ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಹಾಗೂ ಸಂಜಯ್ ಬಾರು ಅವರ ಪಾತ್ರವೂ ಇರಲಿವೆಯಂತೆ.

      ಅಂದಹಾಗೆ, ಚಿತ್ರವು 2019ರ ಸಂಸತ್ ಚುನಾವಣೆಗೆ ಕೆಲ ತಿಂಗಳ ಮುನ್ನ ಅಂದರೆ 2018ರ ಡಿಸೆಂಬರ್ ನಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರ ತಂಡ ಹೇಳಿಕೊಂಡಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+