• search

ಕರ್ನಾಟಕದಲ್ಲಿ ಕ್ಷೀಣಗೊಂಡ ಮುಂಗಾರು ಮಳೆ, ದೇಶದ ಇತರೆಡೆ ಜೋರು

By Mahesh
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಬೆಂಗಳೂರು, ಜೂನ್ 24: ಬಂಗಾಳ ಕೊಲ್ಲಿಯತ್ತ ಮುಂಗಾರು ಮಾರುತಗಳು ಸಾಗುತ್ತಿದ್ದು, ಕರ್ನಾಟಕದ ಕರಾವಳಿ, ಮಲೆನಾಡು ಬಿಟ್ಟು ಉಳಿದೆಡೆ ಮುಂಗಾರು ಕ್ಷೀಣಗೊಳ್ಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

  ಉಳಿದಂತೆ ದೇಶದ ಇತರೆಡೆ ಮುಂಗಾರು ಜೋರಾಗಲಿದೆ. ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಛತ್ತೀಸ್ ಗಢ ಹಾಗೂ ಒಡಿಶಾದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ನಿರೀಕ್ಷಿತವಾಗಿದೆ.

  Monsoon update: Heavy rain likely over West Bengal, Sikkim

  ಅರಬ್ಬೀಸಮುದ್ರದ ಕಡೆ ಕೂಡಾ ನೈಋತ್ಯ ಮಾರುತಗಳ ಸಾಗಾಟ ಕಂಡು ಬಂದಿದ್ದು, ಮಹಾರಾಷ್ಟ್ರ, ಗುಜರಾತಿನ ಕೆಲವು ಭಾಗಗಳಲ್ಲಿ ಮಳೆಯಾಗಲಿದೆ. ವಲ್ಸದ್, ಮಲೇಂಗಾವ್, ಅಮರವಾತಿ, ಗೋಂಡಿಯಾ, ತಿತ್ಲಾಘರ್, ಕಟಕ್, ಮಿಡ್ನಾಪುರ್, ಗೋಲ್ಪಾರ, ಭಾಗ್ಡೋಗ್ರಾದಲ್ಲಿ ಮಳೆಯಾಗಲಿದೆ.

  ಮುಂದಿನ ಎರಡು ಹಾಗೂ ಮೂರು ದಿನಗಳಲ್ಲಿ ಪಶ್ಚಿಮ ಬಂಗಾಳ, ಛತ್ತೀಸ್ ಗಢ, ಒಡಿಶಾ, ದಕ್ಷಿಣ ಸೌರಾಷ್ಟ್ರದ ಕೆಲ ಭಾಗ, ಜಾರ್ಖಂಡ್, ಬಿಹಾರ ಹಾಗೂ ಮಧ್ಯಪ್ರದೇಶಗಳಲ್ಲಿ ನೈಋತ್ಯ ಮಳೆ ಮಾರುತಗಳಿಂದ ಮಳೆ ಸುರಿಯಲಿದೆ.

  Monsoon update: Heavy rain likely over West Bengal, Sikkim

  ಭಾರಿ ಮಳೆ: ಪಶ್ಚಿಮ ಬಂಗಾಳ, ಸಿಕ್ಕಿಂನ ಹಿಮಾಲಯ ಪ್ರದೇಶ, ಅಸ್ಸಾಂ, ಮೇಘಾಲಯ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಮ್, ತ್ರಿಪುರ, ಕೊಂಕಣ ಹಾಗೂ ಗೋವಾ ಮತ್ತು ವಿದರ್ಭದ ಕೆಲವು ಕಡೆ ಭಾರಿ ಮಳೆ ನಿರೀಕ್ಷಿಸಬಹುದು.

  ಆಂಧ್ರಪ್ರದೇಶದ ಕರಾವಳಿ,ತೆಲಂಗಾಣ, ರಾಯಸೀಮಾ, ತಮಿಳುನಾಡು ಹಾಗೂ ಪುದುಚೇರಿಗಳಲ್ಲಿ ಗುಡುಗು, ಮಿಂಚು ಸಹಿತ ಮಹಿಳೆ ಬೀಳಲಿದೆ ಎಂದು ವರದಿ ಸಿಕ್ಕಿದೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Weak Monsoon conditions are still prevailing over most parts of the country. Due to the favourable movement of MJO and the formation of a weather system over North Bay of Bengal, we expect Monsoon to advance further around June 24 over parts of West Bengal, Madhya Pradesh, some more parts of Chhattisgarh and Odisha.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more