ಹವಾಮಾನ ವರದಿ: ಮಧ್ಯ ಭಾರತದಲ್ಲಿ ಮಹಾ ಮಳೆ ಮುನ್ಸೂಚನೆ
ನವದೆಹಲಿ, ಜುಲೈ 22: ಮುಂಗಾರು ಮಳೆ ಮಾರುತಗಳು ಭಾರತದ ಮಧ್ಯಭಾಗದಲ್ಲಿ ಭಾರಿ ಮಳೆ ತರುವ ನಿರೀಕ್ಷೆ ತಂದಿವೆ. ಛತ್ತೀಸ್ ಗಢ, ಒಡಿಶಾ ಹಾಗೂ ಮಧ್ಯಪ್ರದೇಶಗಳಲ್ಲಿ ಭಾರಿ ಮಳೆ ಸಂಭವಿಸಲಿದೆ.
ಅನುಪ್ ಘರ್, ಸಿಕಾರ್, ಆಗ್ರಾ, ಗ್ವಾಲಿಯರ್, ಅಲಹಾಬಾದ್, ದಲ್ತೊನ್ ಗಂಜ್ ಗಳಲ್ಲಿ ಭಾರಿ ಮಳೆ ಸುರಿಯುವ ಸಾಧ್ಯತೆಗಳಿವೆ. ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯಂತೆ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದ್ದು ಭಾರಿ ಬಿರುಗಾಳಿ ಸಹಿತ ಮಳೆ ಸುರಿಯಲಿದೆ.
ಜಮ್ಶೇಡ್ ಪುರ, ವಾರಣಾಸಿ, ಮಧ್ಯಪ್ರದೇಶದ ಪೂರ್ವ ಭಾಗ, ಪಶ್ಚಿಮ ಬಂಗಾಳ, ಜಾರ್ಖಂಡ್, ಕೊಂಕಣ ಹಾಗೂ ಗೋವಾ, ತೆಲಂಗಾಣ, ಕರಾವಳಿ ಕರ್ನಾಟಕ, ಕರ್ನಾಟಕ ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆ ಸುರಿಯಲಿದೆ.

ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಹರ್ಯಾಣ, ಚಂದೀಗಢ ಹಾಗೂ ದೆಹಲಿ, ಉತ್ತರಪ್ರದೇಶ, ಪಶ್ಚಿಮ ಬಂಗಾಲ, ಸಿಕ್ಕಿಂ, ಅಸ್ಸಾಂ ಹಾಗೂ ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಮ್, ತ್ರಿಪುರ, ಗುಜರಾತ್, ಮಹಾರಾಷ್ಟ್ರ, ಮರಾಠವಾಡ, ಆಂಧ್ರಪ್ರದೇಶ ಕರಾವಳಿ, ಕರ್ನಾಟಕದ ಉತ್ತರ ಒಳನಾಡು, ತಮಿಳುನಾಡು, ಕೇರಳದಲ್ಲಿ ಭಾರಿ ಮಳೆಯಾಗಲಿದೆ.












Click it and Unblock the Notifications