Video: ನಂಗೆ ಕಚ್ತಿಯಾ ಇರು ನಿಂಗೆ ಮಾಡ್ತೀನಿ- ಹಾವಿನೊಂದಿಗೆ ಕೋತಿ ಫೈಟ್: ವಿಡಿಯೋ ವೈರಲ್!
ಮಂಗಗಳು ಮನೆಗಳಿಗೆ ಬಂದು ಆಹಾರ ಪದಾರ್ಥಗಳನ್ನು ಎತ್ತಿಕೊಂಡು ಹೋಗುವುದನ್ನು ನೀವು ನೋಡಿರಿರುತ್ತೀರಿ. ಅಲ್ಲದೆ ದೇವಸ್ಥಾನಗಳಲ್ಲಿ ಭಕ್ತರಿಂದ ಕಾಣಿಕೆಗಳನ್ನು ಕದಿಯುವುದನ್ನು ಸಹ ನೀವು ನೋಡುತ್ತೀರಿ. ಅಂತಹ ವಿಡಿಯೋಗಳು ಯಾವಾಗಲೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಇತ್ತೀಚಿಗೆ ಕೋತಿ ಮತ್ತು ಹಾವಿನ ನಡುವಿನ ಕಾದಾಟದ ವಿಡಿಯೋವೊಂದು ಸದ್ದು ಮಾಡುತ್ತಿದೆ.
ಹೌದು.. ಕೋತಿ ಚೇಷ್ಟೆಯ ಪ್ರಾಣಿ. ಗೊತ್ತಿದ್ದೂ ಗೊತ್ತಿಲ್ದೆನೋ ಅವುಗಳು ಮಾಡುವ ಸಣ್ಣಪುಟ್ಟ ಕೆಲಸಗಳಿಂದ ದೊಡ್ಡ ದೊಡ್ಡ ಸಮಸ್ಯೆಗಳು ಆಗುತ್ತವೆ. ಆದರೆ ಇತ್ತೀಚೆಗೆ ವೈರಲ್ ಆಗಿರುವ ವಿಡಿಯೋದಲ್ಲಿ ಕೋತಿಯೊಂದು ಹಾವಿನೊಂದಿಗೆ ಕಾದಾಡುತ್ತಿರುವ ದೃಶ್ಯ ವೈರಲ್ ಆಗಿದೆ.

ತೆಂಗಿನ ಮರ ಏರಿ ಕುಳಿತ ಕೋತಿಗೆ ಮರದ ಕಾಂಡದಲ್ಲಿ ಹಾವು ಕಾಣಿಸಿದೆ. ಹಾವನ್ನು ಕಂಡ ಕೋತಿ ಕಿರುಚಾಡಲು ಶುರು ಮಾಡಿದೆ. ತನ್ನ ಬಾಯಿಯಿಂದ ಹಾವನ್ನು ಹಿಡಿಯಲು ಯತ್ನಿಸಿದೆ. ಕೋತಿ ಹಾವನ್ನು ಮುಟ್ಟಿದಾಗ ಕೋತಿಯ ಮೇಲೆ ಹಾವು ದಾಳಿ ಮಾಡಿದೆ. ಈ ವೇಳೆ ಹಾವು ಕೋತಿ ತಲೆಯನ್ನು ಕಚ್ಚಿ ಬಿಗಿಯಾಗಿ ಹಿಡಿದಿದೆ.
ಇದರಿಂದ ಕಂಗಾಲಾದ ಕೋತಿ ಬಿಡಿಸಿಕೊಳ್ಳಲು ಯತ್ನಿಸಿದೆ. ಬಲವಾಗಿ ಎಳೆಯಲು ಪ್ರಯತ್ನಿಸಿದ ನಂತರ... ಹಾವು ಕೋತಿಯನ್ನು ಬಿಡದೆ ಬಿಗಿಯಾಗಿ ಹಿಡಿದುಕೊಳ್ಳುತ್ತದೆ. ನರಳಾಡುತ್ತಿದ್ದ ಕೋತಿ ಕೊನೆಗೂ ತನ್ನೆಲ್ಲ ಶಕ್ತಿ ಹಾಕಿ ಹಾವಿನಿಂದ ತಲೆಯನ್ನು ಬಿಡಿಸಿಕೊಳ್ಳುತ್ತದೆ. ಆಗ ಹಾವು ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತದೆ. ಆದರೆ ಹಾವು ಈಗಾಗಲೇ ಮಾಡಿದ್ದಕ್ಕೆ ಕೋಪಗೊಂಡ ಕೋತಿ ಓಡಿಹೋಗುತ್ತಿದ್ದ ಹಾವನ್ನು ಹಿಡಿದು ಮತ್ತೆ ಕಚ್ಚಲು ಪ್ರಯತ್ನಿಸುತ್ತದೆ. ಇದರೊಂದಿಗೆ ಈ ವಿಡಿಯೋ ಮುಗಿಯುತ್ತದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿದೆ. ಈ ಬಗ್ಗೆ ನೆಟಿಜನ್‌ಗಳು ವಿಭಿನ್ನ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.
Animal fight with each other in the jungle. pic.twitter.com/g6HqiAZEJf
— Unknown (@comedykarna) May 9, 2024
ಕಚ್ಚಿದ ಹಾವನ್ನು ಕುತ್ತಿಗೆಗೆ ಹಾಕಿಕೊಂಡು ಆಸ್ಪತ್ರೆಗೆ ಬಂದ ಭೂಪ!
ಹಾವುಗಳನ್ನು ಕಂಡರೆ ಅನೇಕರಿಗೆ ಭಯವಾಗುವುದು ಸಹಜ. ಅದರಲ್ಲೂ ನಾಗರಹಾವು ಇತರ ವಿಷಕಾರಿ ಹಾವುಗಳನ್ನು ಕಂಡರೆ ಮಾರುದ್ದ ಓಡಿಹೋಗುವವರೇ ಹೆಚ್ಚು. ಆದ್ರೆ ಇಲ್ಲೊಂದು ವೈರಲ್ ಆದ ವಿಡಿಯೋವನ್ನು ನೋಡಿದ್ರೆ ಶಾಕ್ ಆಗೋದು ಗ್ಯಾರಂಟಿ. ಹಾಗಾದರೆ ಈ ವಿಡಿಯೋದಲ್ಲಿ ಏನಿದೆ..?
ವೈರಲ್ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಹಾವನ್ನು ಕುತ್ತಿಗೆಗೆ ಹಾಕಿಕೊಂಡು ಆಸ್ಪತ್ರೆಗೆ ಬಂದಿರುವುದು ಕಂಡು ಬಂದಿದೆ. ಬಿಹಾರದ ಭಾಗಲ್ಪುರದಲ್ಲಿ ಈ ಘಟನೆ ನಡೆದಿದೆ. ಪ್ರಕಾಶ್ ಎಂಬ ವ್ಯಕ್ತಿಗೆ ಹಾವು ಕಚ್ಚಿದ್ದು, ಅದೇ ಹಾವನ್ನು ಕುತ್ತಿಗೆಗೆ ಹಾಕಿಕೊಂಡು ಆತ ಆಸ್ಪತ್ರೆಗೆ ಬಂದಿದ್ದಾನೆ. ಹಾವಿನ ಬಾಯಿಯನ್ನು ಕೈಯಿಂದ ಬಿಗಿಯಾಗಿ ಹಿಡಿದುಕೊಂಡ ವ್ಯಕ್ತಿ ಆಸ್ಪತ್ರೆಗೆ ಹೋದಾಗ ಆತನನ್ನು ಕಂಡ ರೋಗಿಗಳು ಹಾಗೂ ಆಸ್ಪತ್ರೆ ಸಿಬ್ಬಂದಿ ಭಯಗೊಂಡಿದ್ದಾರೆ.
ಆ ವ್ಯಕ್ತಿಯ ಕುತ್ತಿಗೆಯಲ್ಲಿ ಹಾವನ್ನು ನೋಡಿದ ಜನರು ಭಯದಿಂದ ಕೂಗಲಾರಂಭಿಸಿದ್ದಾರೆ. ಈತ ಹಾವನ್ನು ಹಿಡಿದುಕೊಂಡು ನೆಲದ ಮೇಲೆ ಬಿದ್ದು, ಕೂಡಲೇ ಚಿಕಿತ್ಸೆ ಕೊಡಿಸುವಂತೆ ವೈದ್ಯರಲ್ಲಿ ಬೇಡಿಕೊಳ್ಳುತ್ತಾನೆ. ವೈದ್ಯರು ಹಾಗೂ ಸಿಬ್ಬಂದಿ ಹಾವನ್ನು ಚೀಲದಲ್ಲಿ ಕಟ್ಟಿ ವ್ಯಕ್ತಿಗೆ ಚಿಕಿತ್ಸೆ ನೀಡಿದ್ದಾರೆ ಎಂದು ವರದಿಯಾಗಿದೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ವೀಡಿಯೋ ನೋಡಿದವರು ಹಾವು ಎಲ್ಲಿಂದ ಬಂತು ಎಂದು ಕಾಮೆಂಟ್ ಮಾಡಿದ್ದಾರೆ.












Click it and Unblock the Notifications