Get Updates
Get notified of breaking news, exclusive insights, and must-see stories!

Modi Turban: ವಿಶೇಷ ಪೇಟ ತೊಟ್ಟು ಶ್ರೀರಾಮನ ಮೇಲಿನ ಭಕ್ತಿಯನ್ನು ತೋರಿದ ಮೋದಿ

ಪ್ರತಿ ಬಾರಿಯಂತೆ ಈ ಬಾರಿಯೂ ಸ್ವಾತಂತ್ರ್ಯ ದಿನಾಚರಣೆಗೆಂದು ಪ್ರಧಾನಿ ನರೇಂದ್ರ ಮೋದಿ ಅವರು ವಿಶೇಷ ಪೇಟವನ್ನು ಧರಿಸಿದ್ದರು. ಇಂದು ಪ್ರಧಾನಿ ಮೋದಿ ತಮ್ಮ ಉಡುಪಿನ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಈ ಬಾರಿ ಅವರು ಶ್ರೀರಾಮನ ಮೇಲಿನ ಭಕ್ತಿಯನ್ನು ತಮ್ಮ ಉಡುಪಿನ ಮೂಲಕ ತೋರಿಸಿದ್ದಾರೆ.

ಹೌದು... ಇಂದು ಮೋದಿ ಅವರು ರಾಜಸ್ಥಾನಿ ಲಹರಿಯ ಪೇಟ, ಬಿಳಿ ಕುರ್ತಾ ಮತ್ತು ತಿಳಿ ನೀಲಿ ಬಂಧಗಾಲಾ ಹಾಫ್ ಜಾಕೆಟ್ ಧರಿಸಿ ಕೆಂಪು ಕೋಟೆಗೆ ಆಗಮಿಸಿದ್ದರು. ಪ್ರಧಾನಿ ಮೋದಿಯವರ ಪೇಟದಲ್ಲಿ ಹಲವು ಬಣ್ಣಗಳು ಗೋಚರಿಸುತ್ತಿದ್ದವು. ಶಿರಸ್ತ್ರಾಣವು ಉದ್ದವಾದ ಬಾಲದೊಂದಿಗೆ ಕಿತ್ತಳೆ, ಹಳದಿ ಮತ್ತು ಹಸಿರು ಬಣ್ಣಗಳ ಮಿಶ್ರಣದಿಂದ ಕೂಡಿದ ಪೇಟವನ್ನು ಅವರು ಇಂದು ಧರಿಸಿದ್ದರು.

Modi showed his devotion to Lord Rama by wearing a special turban

ಅದರಲ್ಲಿ ಕಿತ್ತಳೆ ಬಣ್ಣ ಹೆಚ್ಚು ಎದ್ದು ಕಾಣುತ್ತಿತ್ತು. ಈ ಬಣ್ಣವನ್ನು ಶ್ರೀರಾಮನ ನೆಚ್ಚಿನ ಬಣ್ಣವೆಂದು ಪರಿಗಣಿಸಲಾಗಿದೆ. ಈ ಕಾರಣದಿಂದಾಗಿ ಅವರ ಪೇಟವನ್ನು ಭಗವಾನ್ ರಾಮನ ಬಣ್ಣದೊಂದಿಗೆ ಸಂಯೋಜಿಸಲಾಗಿದೆ ಎನ್ನಲಾಗುತ್ತಿದೆ.

ಈ ವರ್ಷ ಜನವರಿ 22 ರಂದು ಮೋದಿ ಅವರು ಅಯೋಧ್ಯೆ ರಾಮ ಮಂದಿರವನ್ನು ಉದ್ಘಾಟಿಸಿದರು. ರಾಮಲಾಲಾ ಪ್ರತಿಮೆಯನ್ನು ಅನಾವರಣಗೊಳಿಸಿದರು. ಇಂದು ಕಿತ್ತಳೆ ಬಣ್ಣದ ಪೇಟವನ್ನು ಧರಿಸುವ ಮೂಲಕ ಅವರು ಭಗವಾನ್ ರಾಮನ ಮೇಲಿನ ಭಕ್ತಿಯನ್ನು ತೋರಿಸಿದ್ದಾರೆ. ಹಾಗದರೆ ಈ ಹಿಂದೆ ಮೋದಿಯವರು ಯಾವೆಲ್ಲಾ ರೀತಿಯ ಬಣ್ಣದ ಪೇಟ ಧರಿಸಿದ್ದರು ಅನ್ನೋದನ್ನು ಈಗ ತಿಳಿಯೋಣ.

2023 ರಲ್ಲಿ ಹಳದಿ ಮತ್ತು ಕೆಂಪು ಪೇಟ

2023ರ ಸ್ವಾತಂತ್ರ್ಯ ದಿನಾಚರಣೆಯಂದು ಧ್ವಜಾರೋಹಣ ಮಾಡಲು ಬಂದಾಗ ಹಲವು ಬಣ್ಣಗಳ ಗೆರೆಗಳಿದ್ದ ಹಳದಿ ಮತ್ತು ಕೆಂಪು ಬಣ್ಣದ ಪೇಟವನ್ನು ಮೋದಿ ಧರಿಸಿದ್ದರು. ಪೇಟದೊಂದಿಗೆ ಅವರು ಬಿಳಿ ಕುರ್ತಾ ಮತ್ತು ಕಪ್ಪು ಜಾಕೆಟ್‌ನಲ್ಲಿ ಕಾಣಿಸಿಕೊಂಡರು.

Modi showed his devotion to Lord Rama by wearing a special turban

2022 ರಲ್ಲಿ ಬಣ್ಣಬಣ್ಣದ ಪೇಟ

2022 ರಲ್ಲಿ 76 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ, ಪ್ರಧಾನಿ ಮೋದಿ ಬಣ್ಣಬಣ್ಣದ ಪೇಟವನ್ನು ಧರಿಸಿ ಕೆಂಪು ಕೋಟೆಯನ್ನು ತಲುಪಿದರು. ಈ ಪೇಟವು ಬಿಳಿ ಬಣ್ಣದ್ದಾಗಿದ್ದರೂ, ಮಧ್ಯದಲ್ಲಿ ರಾಷ್ಟ್ರಧ್ವಜದ ಆಕಾರವನ್ನು ಹೊಂದಿತ್ತು. ಈ ವೇಳೆ ಪ್ರಧಾನಿ ಮೋದಿಯವರ ಕುರ್ತಾ ಬಿಳಿ ಮತ್ತು ಜಾಕೆಟ್ ನೀಲಿ ಬಣ್ಣದ್ದಾಗಿತ್ತು. ಈ ವರ್ಷ ಮೋದಿ ಅವರು ಪ್ರತಿ ಮನೆಗಳಲ್ಲಿ ತ್ರಿವರ್ಣ ಪ್ರಚಾರವನ್ನು ಪ್ರಾರಂಭಿಸಿದರು.

2021ರಲ್ಲಿ ಕೇಸರಿ ಬಣ್ಣದ ಪೇಟ

2021 ರಲ್ಲಿ 75 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿಯೂ ಸಹ, ಪ್ರಧಾನಿ ಮೋದಿಯವರ ಪೇಟವು ಬಹಳಷ್ಟು ಸುದ್ದಿ ಮಾಡಿದೆ. ಆಗ ಪ್ರಧಾನಿ ಮೋದಿ ಬಿಳಿ ಕುರ್ತಾ, ನೀಲಿ ಜಾಕೆಟ್‌ನೊಂದಿಗೆ ಆಗಮಿಸಿದ್ದರು. ಅವರ ತಲೆಯ ಮೇಲೆ ಕೇಸರಿ ಬಣ್ಣದ ಪೇಟವಿತ್ತು. ಕೇಸರಿ ಬಾರ್ಡರ್ ಇರುವ ಬಿಳಿ ಸ್ಕಾರ್ಫ್ ಕೂಡ ಅವರ ಹಾಕಿಕೊಂಡಿದ್ದರು.

2020 ರಲ್ಲಿ, ಅರ್ಧ ತೋಳಿನ ಕುರ್ತಾದೊಂದಿಗೆ ಮೋದಿ ಪೇಟ ಹೀಗಿತ್ತು?

2020 ರಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಕೇಸರಿ ಮತ್ತು ಕೆನೆ ಬಣ್ಣದ ಪೇಟದಲ್ಲಿ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ಮಾಡಲು ಆಗಮಿಸಿದ್ದರು. ಈ ವೇಳೆ ಅವರ ಅರ್ಧ ತೋಳಿನ ಕುರ್ತಾ ಎಲ್ಲರ ಗಮನ ಸೆಳೆಯುತ್ತಿತ್ತು.

Modi showed his devotion to Lord Rama by wearing a special turban

2019 ರಲ್ಲಿ ತರಂಗ ಮಾದರಿಯ ಪೇಟ

2019 ರಲ್ಲಿ, ಪ್ರಧಾನಿ ಮೋದಿ ಕುರ್ತಾ, ಪೈಜಾಮ ಧರಿಸಿ ಕೆಂಪು ಕೋಟೆಯನ್ನು ತಲುಪಿದ್ದರು. ಈ ವೇಳೆ ಅವರು ಹಳದಿ, ಕೆಂಪು ಮತ್ತು ಹಸಿರು ಬಣ್ಣಗಳಿಂದ ಮಾಡಿದ ತರಂಗ ಮಾದರಿಯ ಪೇಟವನ್ನು ಧರಿಸಿದ್ದರು.

2018 ರಲ್ಲಿ ಮೋದಿ ಪೇಟ ಹೇಗಿತ್ತು?

2018 ರಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪು ಕೋಟೆಯಿಂದ ಐದನೇ ಬಾರಿಗೆ ಸ್ವಾತಂತ್ರ್ಯ ದಿನದ ಭಾಷಣ ಮಾಡಿದರು. ಈ ಸಮಯದಲ್ಲಿ ಅವರು ಪೂರ್ಣ ತೋಳಿನ ಕುರ್ತಾ ಪೈಜಾಮವನ್ನು ಧರಿಸಿದ್ದರು ಮತ್ತು ಪ್ರಧಾನಿ ಕಡು ಕೇಸರಿ ಮತ್ತು ಕೆಂಪು ಪೇಟ ಧರಿಸಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+