ಪಿಎಂ ಮೋದಿ ವಿದೇಶ ಪ್ರವಾಸ: ರಮ್ಯಾ ನೀಡಿದ್ದ ಹೇಳಿಕೆ ಸುಳ್ಳೇ..ಸುಳ್ಳು
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ತಮ್ಮ 2ಅವಧಿಯಲ್ಲಿ ಮಾಡಿದ್ದ ಒಟ್ಟು ವಿದೇಶ ಪ್ರವಾಸದ ಸಂಖ್ಯೆಯನ್ನು ಪಿಎಂ ಮೋದಿ ಮೂರೇ ವರ್ಷದಲ್ಲಿ ಮುರಿದಿದ್ದಾರೆ ಎನ್ನುವ ರಮ್ಯಾ ನೀಡಿದ್ದ ಹೇಳಿಕೆ ಸತ್ಯಕ್ಕೆ ದೂರವಾದದ್ದು ಎಂದು ಆರ್ಟಿಐ ಮಾಹಿತಿಯಲ್ಲಿ ಬಹಿರಂಗ.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ತಮ್ಮ ಎರಡು ಅವಧಿಯಲ್ಲಿ ಮಾಡಿದ್ದ ಒಟ್ಟು ವಿದೇಶ ಪ್ರವಾಸದ ಸಂಖ್ಯೆಯನ್ನು ಪಿಎಂ ನರೇಂದ್ರ ಮೋದಿ ಮೂರೇ ವರ್ಷದಲ್ಲಿ ಮುರಿದಿದ್ದಾರೆ ಎನ್ನುವ ರಮ್ಯಾ ನೀಡಿದ್ದ ಹೇಳಿಕೆ ಸತ್ಯಕ್ಕೆ ದೂರವಾದದ್ದು ಎನ್ನುವ ಅಂಶ ಆರ್ಟಿಐ ಮಾಹಿತಿಯಲ್ಲಿ ಬಹಿರಂಗವಾಗಿದೆ.
NDTVಯ ಲೇಖನವೊಂದನ್ನು ತನ್ನ ಟ್ವಿಟ್ಟರ್ ಅಕೌಂಟಿನಿಂದ ಫಾರ್ವರ್ಡ್ ಮಾಡಿ, ಮನಮೋಹನ್ ಸಿಂಗ್ ಗಿಂತ ಜಾಸ್ತಿ ಮೋದಿ ವಿದೇಶ ಪ್ರವಾಸ ಮಾಡಿದ್ದಾರೆಂದು ರಾಷ್ಟ್ರೀಯ ಕಾಂಗ್ರೆಸ್ಸಿನ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಟ್ವೀಟ್ ಮಾಡಿ ಭಾರೀ ಟೀಕೆಗೆ ಒಳಗಾಗಿದ್ದರು.
ಈ ಸಂಬಂಧ 'ದಿ ಹಿಂದೂ' ಪತ್ರಿಕೆ ಸಂಬಂಧಪಟ್ಟ ಸಚಿವಾಲಯದಿಂದ ಮಾಹಿತಿ ಕಲೆಹಾಕಿ, ಜೊತೆಗೆ ಆರ್ಟಿಐ ದಾಖಲೆ ಆಧರಿಸಿ ಲೇಖನ ಪ್ರಕಟಿಸಿದ್ದು, ಒಟ್ಟಾರೆ ವಿದೇಶ ಪ್ರವಾಸದ ವಿಚಾರದಲ್ಲಿ ಇದುವರೆಗೆ ಮನಮೋಹನ್ ಸಿಂಗ್, ಮೋದಿಗಿಂತ ಸ್ಪಷ್ಟ ಮೇಲುಗೈ ಸಾಧಿಸಿದ್ದಾರೆ.
ಹೋದಲೆಲ್ಲಾ, ಬಂದಲೆಲ್ಲಾ ಮೋದಿಗೆ ಅಭೂತಪೂರ್ವ ಸ್ವಾಗತ ವ್ಯಕ್ತವಾಗುತ್ತಿರುವುದು ಒಂದೆಡೆಯಾದರೆ, ತಮ್ಮ ವಿದೇಶ ಪ್ರವಾಸದ ವೇಳೆ ಮೋದಿ ಸಾಧ್ಯವಾದಷ್ಟು ವಿಮಾನದಲ್ಲೇ ವಿಶ್ರಾಂತಿ ತೆಗೆದುಕೊಳ್ಳುತ್ತಾರೆ. ಸದ್ಯ, ಮನಮೋಹನ್ ಸಿಂಗ್ ವಿದೇಶದ ಪ್ರಯಾಣದ ಅವಧಿಯಲ್ಲೂ ಮೋದಿಗಿಂತ ಮುನ್ನಡೆಯಲ್ಲಿದ್ದಾರೆ.
ಕಳೆದ ಭಾನುವಾರ (ಜು 2) ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಮೋದಿ ಮತ್ತು ಸಿಂಗ್ ಅವರ ವಿದೇಶ ಪ್ರವಾಸದ ಅಂಕಿಅಂಶವನ್ನು ಮಾಧ್ಯಮದ ಮುಂದಿಟ್ಟಿದ್ದರು. ಸ್ವಾಭಾವಿಕವಾಗಿ, ತಮ್ಮ ಪ್ರಧಾನಿಯ ವಿದೇಶ ಪ್ರವಾಸವನ್ನು ಶಾ ಸಮರ್ಥಿಸಿಕೊಂಡಿದ್ದರು. ವಿದೇಶ ಪ್ರವಾಸ - ಮೋದಿ Vs ಸಿಂಗ್, ಅಂಕಿಅಂಶ, ಮುಂದೆ ಓದಿ..

ಮೋದಿ ವಿದೇಶ ಪ್ರವಾಸ
ಭಾನುವಾರ (ಜು 2) ಅಮಿತ್ ಶಾ ಮಾತನಾಡುತ್ತಾ, ಮೋದಿ ವಿದೇಶ ಪ್ರವಾಸಕ್ಕೆ ಹೋದಾಗ ಅಲ್ಲಿನ ಜನತೆ ನಮ್ಮ ಪ್ರಧಾನಿಗೆ ನೀಡುವ ಗೌರವ, ಸ್ವಾಗತದ ಜೊತೆಗೆ ಅಂಕಿಅಂಶವನ್ನು ಉಲ್ಲೇಖಿಸಿ ಸ್ಪಷ್ಟೀಕರಣ ನೀಡಿದ್ದರು. ಜೊತೆಗೆ, ಸಮಯ ಮತ್ತು ದುಡ್ಡನ್ನು ಪೋಲು ಮಾಡುವ ಗುಣವೇ ಮೋದಿಗೆ ಇಲ್ಲ ಎಂದು ಶಾ ಗುಣಗಾನ ಮಾಡಿದ್ದರು.

ಹಿಂದೂ ಪತ್ರಿಕೆಯ ವರದಿ
ಈ ಸಂಬಂಧ ಮಾಜಿ ಪ್ರಧಾನಿಯವರ ಮತ್ತು ವಿದೇಶಾಂಗ ಸಚಿವಾಲಯದ ವೆಬ್ಸೈಟ್ ವರದಿಯನ್ನು ಆಧರಿಸಿ ಮತ್ತು ಸಂಬಂಧಪಟ್ಟ ದಾಖಲೆಗಳನ್ನು ಕಲೆಹಾಕಿ ಹಿಂದೂ ಪತ್ರಿಕೆ ವರದಿ ಪ್ರಕಟಿಸಿದೆ. ಆ ಪ್ರಕಾರ, ರಮ್ಯಾ ಮಾಡಿದ್ದ ಟ್ವೀಟ್ ಸುಳ್ಳು ಎನ್ನುವುದು ಜಗಜ್ಜಾಹೀರಾಗಿದೆ.

ಆಫ್ರಿಕಾ ಮತ್ತು ಮಧ್ಯ ಏಷ್ಯಾ
ಆಫ್ರಿಕಾ
ಎಂಎಂಎಸ್ ( ಯುಪಿಎ - 1) - 4
ಎಂಎಂಎಸ್ ( ಯುಪಿಎ - 2) -9
ಮೋದಿ (3ವರ್ಷದ ಅವಧಿಯಲ್ಲಿ) - 5
ಮಧ್ಯ ಏಷ್ಯಾ
ಎಂಎಂಎಸ್ ( ಯುಪಿಎ - 1) - 0
ಎಂಎಂಎಸ್ ( ಯುಪಿಎ - 2) - 0
ಮೋದಿ (3ವರ್ಷದ ಅವಧಿಯಲ್ಲಿ) - 11

ಪೂರ್ವ ಏಷ್ಯಾ ಮತ್ತು ಯುರೋಪ್ (ಆವರಣದಲ್ಲಿ ವಿದೇಶ ಪ್ರವಾಸ ಸಂಖ್ಯೆ)
ಪೂರ್ವ ಏಷ್ಯಾ
ಎಂಎಂಎಸ್ ( ಯುಪಿಎ - 1) - 6
ಎಂಎಂಎಸ್ ( ಯುಪಿಎ - 2) - 15
ಮೋದಿ (3ವರ್ಷದ ಅವಧಿಯಲ್ಲಿ) - 7
ಯುರೋಪ್
ಎಂಎಂಎಸ್ ( ಯುಪಿಎ - 1) - 38
ಎಂಎಂಎಸ್ ( ಯುಪಿಎ - 2) - 27
ಮೋದಿ (3ವರ್ಷದ ಅವಧಿಯಲ್ಲಿ) - 20

ಲ್ಯಾಟಿನ್ ಅಮೆರಿಕಾ ಮತ್ತು ಉತ್ತರ ಅಮೆರಿಕಾ
ಲ್ಯಾಟಿನ್ ಅಮೆರಿಕಾ
ಎಂಎಂಎಸ್ ( ಯುಪಿಎ - 1) - 9
ಎಂಎಂಎಸ್ ( ಯುಪಿಎ - 2) - 0
ಮೋದಿ (3ವರ್ಷದ ಅವಧಿಯಲ್ಲಿ) - 3
ಉತ್ತರ ಅಮೆರಿಕಾ
ಎಂಎಂಎಸ್ ( ಯುಪಿಎ - 1) - 14
ಎಂಎಂಎಸ್ ( ಯುಪಿಎ - 2) - 30
ಮೋದಿ (3ವರ್ಷದ ಅವಧಿಯಲ್ಲಿ) - 15

ಆಗ್ನೇಯ, ದಕ್ಷಿಣ ಏಷ್ಯಾ (ಆವರಣದಲ್ಲಿ ವಿದೇಶ ಪ್ರವಾಸ ಸಂಖ್ಯೆ)
ಆಗ್ನೇಯ ಏಷ್ಯಾ
ಎಂಎಂಎಸ್ ( ಯುಪಿಎ - 1) - 10
ಎಂಎಂಎಸ್ ( ಯುಪಿಎ - 2) - 12
ಮೋದಿ (3ವರ್ಷದ ಅವಧಿಯಲ್ಲಿ) - 4
ದಕ್ಷಿಣ ಏಷ್ಯಾ
ಎಂಎಂಎಸ್ ( ಯುಪಿಎ - 1) - 12
ಎಂಎಂಎಸ್ ( ಯುಪಿಎ - 2) - 15
ಮೋದಿ (3ವರ್ಷದ ಅವಧಿಯಲ್ಲಿ) - 23

ಪಶ್ಚಿಮ ಏಷ್ಯಾ, ಒಟ್ಟಾರೆ ವಿದೇಶ ಪ್ರವಾಸ
ಪಶ್ಚಿಮ ಏಷ್ಯಾ
ಎಂಎಂಎಸ್ ( ಯುಪಿಎ - 1) - 0
ಎಂಎಂಎಸ್ ( ಯುಪಿಎ - 2) - 3
ಮೋದಿ (3ವರ್ಷದ ಅವಧಿಯಲ್ಲಿ) - 6
ಒಟ್ಟಾರೆ ವಿದೇಶ ಪ್ರವಾಸ
ಎಂಎಂಎಸ್ ( ಯುಪಿಎ - 1) - 93
ಎಂಎಂಎಸ್ ( ಯುಪಿಎ - 2) - 111
ಮೋದಿ (3ವರ್ಷದ ಅವಧಿಯಲ್ಲಿ) - 94












Click it and Unblock the Notifications