ತಮ್ಮ ಮೋದಿಯ ಮದ್ವೆ ಬಗ್ಗೆ ಅಣ್ಣ ಸೋಮಭಾಯ್ ವಿವರಣೆ
ವಡೋದರಾ, ಏ.10: ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ವಡೋದರಾದಲ್ಲಿ ನಿನ್ನೆ ಸಲ್ಲಿಸಿದ್ದ ನಾಮಪತ್ರದಲ್ಲಿ 'ತಾನು ಮದುವೆಯಾಗಿದ್ದು, ಪತ್ನಿಯ ಹೆಸರು ಜಶೋದಾಬೆನ್' ಎಂದು ಘೋಷಿಸಿದ್ದರು. ಆ ಬಗ್ಗೆ ಇಂದು ಬೆಳಗ್ಗೆಯಿಂದ ವ್ಯಾಪಕ ಚರ್ಚೆ/ಟೀಕೆಗಳೂ ಕೇಳಿಬಂದಿದ್ದವು.
ಈ ಮಧ್ಯೆ, ನರೇಂದ್ರ ಮೋದಿ ಅವರ ಅಣ್ಣ ಸೋಮಭಾಯ್ ದಾಮೋದರದಾಸ್ ಮೋದಿ ಅವರು ಜಶೋದಾಬೆನ್ ಜತೆಗಿನ ವಿವಾಹದ ಬಗ್ಗೆ ಸ್ಪಷ್ಡನೆ ನೀಡಿದ್ದಾರೆ:

'ಕಾಲಾಂತರದಲ್ಲಿ ಮೋದಿ ದೇಶ ಸೇವೆಗಾಗಿ ತಮ್ಮ ಕುಟುಂಬವನ್ನೇ ಬಿಟ್ಟು ಬಂದರು. ಈ 40-45 ವರ್ಷಗಳಲ್ಲಿ ನನ್ನ ತಮ್ಮ ಪರಿವಾರದಿಂದ ಅಲಿಪ್ತನಾಗಿ ಉಳಿದುಬಿಟ್ಟ. ಆಕೆ ಜಶೋದಾಬೆನ್ ಅವರು ತಮ್ಮ ತಂದೆಯ ಮನೆಯಲ್ಲಿದ್ದುಕೊಂಡು, ಶಿಕ್ಷಣ ಪಡೆದು, ಶಿಕ್ಷಕಿಯಾಗಿ ಜೀವನ ರೂಪಿಸಿಕೊಂಡರು. ಈಗ ಮೋದಿ ಮಾಡಿದ್ದು ಸರಿಯೇ, ತಪ್ಪೇ? ಎನ್ನುವುದರ ಬಗ್ಗೆ ದೇಶದ ಜನರೇ ನಿರ್ಧರಿಸಲಿ' ಎಂದೂ ಸೋಮಭಾಯ್ ಮೋದಿ ಹೇಳಿದ್ದಾರೆ.
ಮೋದಿ ಒಬ್ಬ ಸನ್ಯಾಸಿ; ಪೂಜನೀಯ: ಈ ಮಧ್ಯೆ, 'ನರೇಂದ್ರ ಮೋದಿ ಅವರು ಒಬ್ಬ ಸನ್ಯಾಸಿ. ಜೀವನದುದ್ದಕ್ಕೂ ಅವರು ಬ್ರಹ್ಮಚರ್ಯ ಪಾಲಿಸಿಕೊಂಡು ಬಂದಿದ್ದಾರೆ. ಅವರ ಪೂಜೆ ಮಾಡಬೇಕು' ಎಂದು ಬಿಜೆಪಿಯ ಹಿರಿಯ ನಾಯಕ ಸುಬ್ರಮಣ್ಯಸ್ವಾಮಿ ಪ್ರತಿಕ್ರಿಯಿಸಿದ್ದಾರೆ.












Click it and Unblock the Notifications