• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಫೇಲ್ ಡೀಲ್ : ನರೇಂದ್ರ ಮೋದಿ ರಾಜೀನಾಮೆಗೆ ಖರ್ಗೆ ವೈಯಕ್ತಿಕ ಆಗ್ರಹ

|

ನವದೆಹಲಿ, ಸೆಪ್ಟೆಂಬರ್ 22 : "ನರೇಂದ್ರ ಮೋದಿಯವರು ಪ್ರಧಾನಿ ಪಟ್ಟಕ್ಕೆ ಅರ್ಹರಲ್ಲ. ಅವರು ಕೂಡಲೆ ರಾಜೀನಾಮೆ ಸಲ್ಲಿಸಬೇಕು ಮತ್ತು ಸಂಪುಟದ ಯಾವುದೇ ಸಚಿವರನ್ನು ಪ್ರಧಾನಿಯನ್ನಾಗಿ ಮಾಡಬೇಕು" ಎಂದು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಆಗ್ರಹಿಸಿದ್ದಾರೆ.

ರಫೇಲ್ ಡೀಲ್ ವಿವಾದದ ಬಗ್ಗೆ ಫ್ರಾನ್ಸ್ ರಕ್ಷಣಾ ಸಚಿವಾಲಯ ಸ್ಪಷ್ಟೀಕರಣ ನೀಡಿದ್ದರೂ, ತಮ್ಮ ಪಟ್ಟು ಬಿಡದ ಮಲ್ಲಿಕಾರ್ಜುನ ಖರ್ಗೆ ಅವರು, ಪ್ರಧಾನಿಯಾಗಿ ಮುಂದುವರಿಯಲು ಅವರಿಗೆ ಯಾವುದೇ ನೈತಿಕತೆ ಇಲ್ಲ. ಇದು ನನ್ನ ವೈಯಕ್ತಿಕ ಅಭಿಪ್ರಾಯ ಮಾತ್ರ ಎಂದು ಖರ್ಗೆ ಹೇಳಿದ್ದಾರೆ.

ರಫೇಲ್ ಡೀಲ್: ರಿಲಯನ್ಸ್ ಹೆಸರನ್ನು ನಾನು ಸೂಚಿಸಿಲ್ಲ ಎಂದ ಫ್ರಾನ್ಸ್

ರಫೇಲ್ ಡೀಲ್ ನಲ್ಲಿ ಖಾಸಗಿ ಕಂಪನಿಯೊಂದಕ್ಕೆ ಕಾಂಟ್ರಾಕ್ಟ್ ನೀಡುವಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಕೈವಾಡವಿತ್ತು ಎಂದು ಫ್ರಾನ್ಸ್ ನ ಮಾಜಿ ಅಧ್ಯಕ್ಷ ಹೇಳಿದ್ದಾರೆ. ಪ್ರಧಾನಿಯವರು ಒಪ್ಪಂದ ಅಂತಿಮಗೊಳಿಸುವಾಗ ತಮ್ಮ ಸ್ನೇಹಿತನನ್ನು (ಅನಿಲ್ ಅಂಬಾನಿ) ಫ್ರಾನ್ಸ್ ಗೆ ಕರೆದುಕೊಂಡು ಹೋಗಿದ್ದರು ಎಂದು ಅವರು ವಾಗ್ದಾಳಿ ನಡೆಸಿದರು.

ನಾವು ಮೊದಲಿನಿಂದಲೂ ಹೇಳುತ್ತಲೇ ಇದ್ದೇವೆ. ರಫೇಲ್ ಡೀಲ್ ಭಾರೀ ಭ್ರಷ್ಟಾಚಾರದ ಹಗರಣ ಎಂದು. ಈಗ ಹಗರಣದ ಹೂರಣ ಏನೆಂದು ಫ್ರಾನ್ಸ್ ನ ಮಾಜಿ ಅಧ್ಯಕ್ಷರ ಬಾಯಿಂದಲೇ ಬಂದಿದೆ. ಇದಕ್ಕಿಂತ ಬೇರೆ ಸಾಕ್ಷ್ಯ ಇನ್ನೇನು ಬೇಕು. ಮೋದಿಯವರು ಕೂಡಲೆ ರಾಜೀನಾಮೆ ನೀಡಬೇಕು ಎಂದು ಖರ್ಗೆ ಅವರು ಪಟ್ಟು ಹಿಡಿದಿದ್ದಾರೆ.

ಸೈನಿಕರ ರಕ್ತಕ್ಕೆ ಅಗೌರವ ತೋರಿದ ಪ್ರಧಾನಿ: ರಾಹುಲ್ ಗಾಂಧಿ ವಾಗ್ದಾಳಿ

ಇದಕ್ಕೆ ಪ್ರತಿಕ್ರಿಯಿಸಿರುವ ಟ್ವಿಟ್ಟಿಗರು, ಕಾಂಗ್ರೆಸ್ ಪಕ್ಷ ಮತಕ್ಕಾಗಿ ಹೊಸಲು ರಾಜಕೀಯ ಆಟವಾಡುತ್ತಿದೆ ಮತ್ತು ಈ ರೀತಿ ದಾಳಿ ನಡೆಸಿ ನಮ್ಮ ವಾಯುಸೇನೆಯನ್ನು ಮತ್ತು ದುರ್ಬಲಗೊಳಿಸಲು ಯತ್ನಿಸುತ್ತಿದೆ. ಆ ರೀತಿ ಹೇಳಿಕೆ ನೀಡೆಂದು ಫ್ರಾನ್ಸ್ ನ ಮಾಜಿ ಅಧ್ಯಕ್ಷರಿಗೆ ಎಷ್ಟು ಹಣ ನೀಡಿದ್ದೀರಿ? ಯಾಕೆ ಸೋನಿಯಾ ಅವರು ಕಳೆದ 7 ದಿನಗಳಿಂದ ರಷ್ಯಾದಲ್ಲಿದ್ದಾರೆ? ಅಮೆರಿಕದಲ್ಲಿ ಹಸ್ತಕ್ಷೇಪ ಮಾಡಿದಂತೆ, ಭಾರತದ ಚುನಾವಣೆಯಲ್ಲಿಯೂ ಪುತಿನ್ ಅವರು ಹಸ್ತಕ್ಷೇಪ ಮಾಡಲಿದ್ದಾರೆಯೆ ಎಂದು ಟ್ವಿಟ್ಟಿಗರು ಕಾಂಗ್ರೆಸ್ ಮೇಲೆ ಕೆಂಡ ಕಾರಿದ್ದಾರೆ.

English summary
Narendra Modi has no morality to continue as prime minister. He should resign immediately and allow some other cabinet minister to become PM. Modi has involved in Rafale deal corruption, Mallikarjun Kharge demanded.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X