ಹೊಸ ಡ್ರೋನ್ ನಿಯಮಾವಳಿ ಹೊರ ತಂದ ಮೋದಿ ಸರ್ಕಾರ
ನವದೆಹಲಿ, ಆಗಸ್ಟ್ 26: ನಾಗರಿಕ ವಿಮಾನಯಾನ ಸಚಿವಾಲಯದಿಂದ ಡ್ರೋನ್ ನಿಯಮಾವಳಿಗಳು, 2021 ಸಾರ್ವಜನಿಕ ಸಮಾಲೋಚನೆಗಾಗಿ ಬಿಡುಗಡೆ ಮಾಡಿದ್ದ ಕರಡು ಪ್ರತಿಗೆ ಹೆಚ್ಚಿನ ಆಕ್ಷೇಪಣೆ ಬಂದಿಲ್ಲದ ಕಾರಣ, ಹೊಸ ಡ್ರೋನ್ ನಿಯಮಾವಳಿಗಳು ಅಧಿಕೃತವಾಗಿ ಈ ವಾರದಿಂದಲೇ ಜಾರಿಗೆ ಬರಲಿದೆ.
ನಾಗರಿಕ ವಿಮಾನಯಾನ ಸಚಿವಾಲಯವು ಸಾರ್ವಜನಿಕ ಸಮಾಲೋಚನೆಗಾಗಿ ನವೀಕರಿಸಿದ - ಡ್ರೋನ್ ನಿಯಮಾವಳಿಗಳು, 2021 ಅನ್ನು ಜುಲೈ ತಿಂಗಳಲ್ಲಿ ಬಿಡುಗಡೆ ಮಾಡಿತ್ತು. ಸಾರ್ವಜನಿಕರು ತಮ್ಮ ಅಭಿಪ್ರಾಯಗಳನ್ನು 5 ಆಗಸ್ಟ್ 2021 ರೊಳಗೆ ಸಲ್ಲಿಸಬಹುದಾಗಿತ್ತು. ಸಾರ್ವಜನಿಕರ ಆಕ್ಷೇಪಣೆ, ಸಲಹೆಗಳನ್ನು ಪರಿಗಣಿಸಿ ಹೊಸ ನಿಯಾಮಾವಳಿಗಳನ್ನು ಪ್ರಕಟಿಸಲು ಇಲಾಖೆ ಮುಂದಾಗಿದೆ.
ವಿಶ್ವಾಸ, ಸ್ವಯಂ-ಪ್ರಮಾಣೀಕರಣ ಮತ್ತು ಆಕ್ರಮಣಕಾರಿಯಲ್ಲದ ಮೇಲ್ವಿಚಾರಣೆಯ ಆಧಾರದಲ್ಲಿ ರೂಪಿಸಲಾಗಿರುವ ಡ್ರೋನ್ ನಿಯಮಾವಳಿಗಳು, 2021, ಯುಎಎಸ್ ನಿಯಮಾವಳಿಗಳು 2021 (ಮಾರ್ಚ್ 12, 2021 ರಂದು ಬಿಡುಗಡೆಯಾಗಿದ್ದ) ಬದಲಿಗೆ ಜಾರಿಯಾಗುತ್ತವೆ.

ಡ್ರೋನ್ ನಿಯಮಾವಳಿಗಳು, 2021 ಪ್ರಮುಖ ಅಂಶಗಳು:
ಅನುಮೋದನೆಗಳನ್ನು ರದ್ದುಪಡಿಸಲಾಗಿದೆ: ವಿಶಿಷ್ಟ ದೃಢೀಕರಣ ಸಂಖ್ಯೆ, ವಿಶಿಷ್ಟ ಮೂಲಮಾದರಿ ಗುರುತಿನ ಸಂಖ್ಯೆ, ಗುಣಮಟ್ಟ ಪ್ರಮಾಣಪತ್ರ, ನಿರ್ವಹಣೆಯ ಪ್ರಮಾಣಪತ್ರ, ಆಮದು ಪ್ರಮಾಣಪತ್ರ, ಅಸ್ತಿತ್ವದಲ್ಲಿರುವ ಡ್ರೋನ್‌ಗಳ ಸ್ವೀಕಾರ, ಆಪರೇಟರ್ ಪರವಾನಗಿ, ಆರ್ & ಡಿ ಸಂಘಟನೆಯ ದೃಢೀಕರಣ, ವಿದ್ಯಾರ್ಥಿ ರಿಮೋಟ್ ಪೈಲಟ್ ಪರವಾನಗಿ, ರಿಮೋಟ್ ಪೈಲಟ್ ಬೋಧಕರ ದೃಢೀಕರಣ, ಡ್ರೋನ್ ಪೋರ್ಟ್ ದೃಢೀಕರಣ ಇತ್ಯಾದಿ.
* ಫಾರ್ಮ್‌ಗಳ ಸಂಖ್ಯೆಯನ್ನು 25 ರಿಂದ 6 ಕ್ಕೆ ಇಳಿಸಲಾಗಿದೆ.
* ಶುಲ್ಕವನ್ನು ಅತ್ಯಂತ ಕಡಿಮೆ ಮಾಡಲಾಗಿದೆ. ಡ್ರೋನ್ ಗಾತ್ರಕ್ಕೂ ಶುಲಕ್ಕ್ಕೂ ಸಂಬಂಧವಿರುವುದಿಲ್ಲ.
* ಸುರಕ್ಷತಾ ವೈಶಿಷ್ಟ್ಯಗಳಾದ 'ಅನುಮತಿ ಇಲ್ಲದಿದ್ದರೆ - ಹಾರಾಟವಿಲ್ಲ' (ಎನ್‌ಪಿಎನ್‌ಟಿ), ನೈಜ-ಸಮಯದ ಟ್ರ್ಯಾಕಿಂಗ್ ಬೀಕನ್, ಜಿಯೋ-ಫೆನ್ಸಿಂಗ್ ಇತ್ಯಾದಿಗಳನ್ನು ನಂತರ ಪ್ರಕಟಿಸಲಾಗುವುದು. ಅನುಸರಣೆಗಾಗಿ ಆರು ತಿಂಗಳ ಸಮಯವನ್ನು ಒದಗಿಸಲಾಗುವುದು.
* ಡಿಜಿಟಲ್ ಸ್ಕೈ ಪ್ಲಾಟ್‌ಫಾರ್ಮ್ ಅನ್ನು ವ್ಯಾಪಾರ-ಸ್ನೇಹಿ ಸಿಂಗಲ್ ವಿಂಡೋ ಆನ್‌ಲೈನ್ ವ್ಯವಸ್ಥೆಯಾಗಿ ಅಭಿವೃದ್ಧಿಪಡಿಸಲಾಗುತ್ತದೆ.
* ಡಿಜಿಟಲ್ ಸ್ಕೈ ಪ್ಲಾಟ್‌ಫಾರ್ಮ್‌ನಲ್ಲಿ ಕನಿಷ್ಠ ಮಾನವ ಹಸ್ತಕ್ಷೇಪ ಇರುತ್ತದೆ ಮತ್ತು ಹೆಚ್ಚಿನ ಅನುಮತಿಗಳು ಸ್ವಯಂ- ಸೃಷ್ಟಿಯಾಗುತ್ತವೆ.
* ಡಿಜಿಟಲ್ ಸ್ಕೈ ಪ್ಲಾಟ್‌ಫಾರ್ಮ್‌ನಲ್ಲಿ ಹಸಿರು, ಹಳದಿ ಮತ್ತು ಕೆಂಪು ವಲಯಗಳೊಂದಿಗೆ ವಾಯುಪ್ರದೇಶದ ನಕ್ಷೆಯನ್ನು ಪ್ರದರ್ಶಿಸಲಾಗುತ್ತದೆ.
* ಹಳದಿ ವಲಯವನ್ನು ವಿಮಾನ ನಿಲ್ದಾಣದ ಪರಿಧಿಯಿಂದ 45 ಕಿ.ಮೀ ನಿಂದ 12 ಕಿ.ಮೀ.ಗೆ ಇಳಿಸಲಾಗಿದೆ.
* ವಿಮಾನ ನಿಲ್ದಾಣದ ಪರಿಧಿಯಿಂದ 8 ರಿಂದ 12 ಕಿ.ಮೀ ನಡುವಿನ ಪ್ರದೇಶದಲ್ಲಿ 200 ಅಡಿಗಳವರೆಗೆ ಮತ್ತು ಹಸಿರು ವಲಯಗಳಲ್ಲಿ 400 ಅಡಿಗಳವರೆಗೆ ಯಾವುದೇ ಹಾರಾಟ ಅನುಮತಿ ಅಗತ್ಯವಿಲ್ಲ.
* ಮೈಕ್ರೋ ಡ್ರೋನ್‌ಗಳಿಗೆ (ವಾಣಿಜ್ಯೇತರ ಬಳಕೆಗಾಗಿ), ನ್ಯಾನೊ ಡ್ರೋನ್ ಮತ್ತು ಆರ್ & ಡಿ ಸಂಸ್ಥೆಗಳಿಗೆ ಯಾವುದೇ ಪೈಲಟ್ ಪರವಾನಗಿ ಅಗತ್ಯವಿಲ್ಲ.
* ಭಾರತದಲ್ಲಿ ನೋಂದಾಯಿತ ವಿದೇಶಿ ಒಡೆತನದ ಕಂಪನಿಗಳಿಂದ ಡ್ರೋನ್ ಕಾರ್ಯಾಚರಣೆಗೆ ಯಾವುದೇ ನಿರ್ಬಂಧವಿಲ್ಲ.
* ಡಿಜಿಎಫ್‌ಟಿಯಿಂದ ಡ್ರೋನ್‌ಗಳು ಮತ್ತು ಡ್ರೋನ್ ಘಟಕಗಳ ಆಮದು. ನಿಯಂತ್ರಣ ಯಾವುದೇ ನೋಂದಣಿ ಅಥವಾ ಪರವಾನಗಿ ನೀಡುವ ಮೊದಲು ಯಾವುದೇ ಭದ್ರತಾ ಅನುಮತಿ ಅಗತ್ಯವಿಲ್ಲ.
* ಆರ್ & ಡಿ ಘಟಕಗಳಿಗೆ ಹಾರಾಟ ಯೋಗ್ಯ ಪ್ರಮಾಣಪತ್ರ, ವಿಶಿಷ್ಟ ಗುರುತಿನ ಸಂಖ್ಯೆ, ಪೂರ್ವ ಅನುಮತಿ ಮತ್ತು ರಿಮೋಟ್ ಪೈಲಟ್ ಪರವಾನಗಿ ಅಗತ್ಯವಿಲ್ಲ.
* 2021 ರ ಡ್ರೋನ್ ನಿಯಮಾವಳಿಗಳ ಅಡಿಯಲ್ಲಿ ಡ್ರೋನ್‌ಗಳ ವ್ಯಾಪ್ತಿಯು 300 ಕೆಜಿಯಿಂದ 500 ಕೆಜಿಗೆ ಹೆಚ್ಚಾಗಿದೆ. ಇದು ಡ್ರೋನ್ ಟ್ಯಾಕ್ಸಿಗಳನ್ನೂ ಒಳಗೊಂಡಿರುತ್ತದೆ.
* ಎಲ್ಲಾ ಡ್ರೋನ್ ತರಬೇತಿ ಮತ್ತು ಪರೀಕ್ಷೆಯನ್ನು ಅಧಿಕೃತ ಡ್ರೋನ್ ಶಾಲೆಯಿಂದ ನಡೆಸಬೇಕು. ಡಿಜಿಸಿಎ ತರಬೇತಿ ಅವಶ್ಯಕತೆಗಳನ್ನು ಸೂಚಿಸುತ್ತದೆ, ಡ್ರೋನ್ ಶಾಲೆಗಳ ಮೇಲ್ವಿಚಾರಣೆ ಮತ್ತು ಪೈಲಟ್ ಪರವಾನಗಿಗಳನ್ನು ಆನ್‌ಲೈನ್‌ನಲ್ಲಿ ಒದಗಿಸಲಾಗುತ್ತದೆ.
* ಭಾರತದ ಗುಣಮಟ್ಟ ಮಂಡಳಿ ಮತ್ತು ಅದರಿಂದ ಮಾನ್ಯತೆ ಪಡೆದ ಪ್ರಮಾಣೀಕರಣ ಘಟಕಗಳಿಂದ ಹಾರಾಟ ಯೋಗ್ಯ ಪ್ರಮಾಣಪತ್ರದ ವಿತರಣೆ.
* ತಯಾರಕರು ತಮ್ಮ ಡ್ರೋನ್‌ನ ವಿಶಿಷ್ಟ ಗುರುತಿನ ಸಂಖ್ಯೆಯನ್ನು ಡಿಜಿಟಲ್ ಸ್ಕೈ ಪ್ಲಾಟ್‌ಫಾರ್ಮ್‌ನಲ್ಲಿ ಸ್ವಯಂ-ಪ್ರಮಾಣೀಕರಣ ಮಾರ್ಗದ ಮೂಲಕ ಸೃಷ್ಟಿಸಬಹುದು.
* ಡ್ರೋನ್‌ಗಳ ವರ್ಗಾವಣೆ ಮತ್ತು ನೋಂದಣಿಗಾಗಿ ಸುಲಭ ಪ್ರಕ್ರಿಯೆ.
* ಸ್ಟ್ಯಾಂಡರ್ಡ್ ಆಪರೇಟಿಂಗ್ ಕಾರ್ಯವಿಧಾನಗಳು (ಎಸ್‌ಒಪಿ) ಮತ್ತು ತರಬೇತಿ ಕಾರ್ಯವಿಧಾನದ ಕೈಪಿಡಿಗಳನ್ನು (ಟಿಪಿಎಂ) ಡಿಜಿಟಲ್ ಸ್ಕೈ ಪ್ಲಾಟ್‌ಫಾರ್ಮ್‌ನಲ್ಲಿ ಬಳಕೆದಾರರ ಸ್ವಯಂ ಮೇಲ್ವಿಚಾರಣೆಗಾಗಿ ಡಿಜಿಸಿಎ ನೀಡುತ್ತದೆ.












Click it and Unblock the Notifications