ಮೋದಿ ಸಂಪುಟ ವಿಸ್ತರಣೆ : ಯಾರಿಗೆ ಯಾವ ಖಾತೆ?
ನವದೆಹಲಿ, ಸೆಪ್ಟೆಂಬರ್ 03 : ಪ್ರಧಾನಿ ನರೇಂದ್ರ ಮೋದಿ ಸಚಿವ ಸಂಪುಟ ವಿಸ್ತರಣೆ ಮಾಡಿದ್ದಾರೆ. ಒಂಭತ್ತು ನೂತನ ಸಚಿವರು ಮೋದಿ ಸಂಪುಟಕ್ಕೆ ಸೇರ್ಪಡೆಗೊಂಡಿದ್ದಾರೆ. ರಕ್ಷಣಾ ಖಾತೆಯ ಹೊಣೆಯನ್ನು ನಿರ್ಮಲಾ ಸೀತಾರಾಮನ್ ಅವರಿಗೆ ವಹಿಸಲಾಗಿದೆ.
ಭಾನುವಾರ ರಾಷ್ಟ್ರಪತಿ ಭವನದಲ್ಲಿ ನೂತನ ಸಚಿವರ ಪ್ರಮಾಣ ವಚನ ಸಮಾರಂಭ ನಡೆಯಿತು. ರಾಜ್ಯ ಸಚಿವರಾಗಿದ್ದ ನಿರ್ಮಲಾ ಸೀತಾರಾಮನ್, ಧರ್ಮೇಂದ್ರ ಪ್ರಧಾನ್, ಪಿಯೂಷ್ ಗೋಯಲ್ ಹಾಗೂ ಮುಖ್ತರ್ ಅಬ್ಬಾಸ್ ನಖ್ವಿ ಅವರು ಕ್ಯಾಬಿನೆಟ್ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಪ್ರಮಾಣ ವಚನ ಸ್ವೀಕಾರ ಸಮಾರಂಭದ ಬಳಿಕ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ. ಕೆಲವು ಸಚಿವರ ಖಾತೆಗಳನ್ನು ಬದಲಾವಣೆ ಮಾಡಲಾಗಿದೆ. ಯಾರಿಗೆ ಯಾವ ಖಾತೆ? ಪಟ್ಟಿ ನೋಡಿ..
* ಪಿಯೂಷ್ ಗೋಯಲ್ - ರೈಲ್ವೆ
* ನಿರ್ಮಲಾ ಸೀತಾರಾಮನ್ - ರಕ್ಷಣೆ
* ಸುರೇಶ್ ಪ್ರಭು - ವಾಣಿಜ್ಯ ಮತ್ತು ಕೈಗಾರಿಕೆ
* ಅರುಣ್ ಜೇಟ್ಲಿ - ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳು
* ಧರ್ಮೇಂದ್ರ ಪ್ರಧಾನ್ - ಪೆಟ್ರೋಲಿಯಂ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಾಭಿವೃದ್ಧಿ
* ಉಮಾ ಭಾರತಿ - ಕುಡಿಯುವ ನೀರು, ಸ್ವಚ್ಛತೆ
* ಅನಂತಕುಮಾರ್ ಹೆಗಡೆ - ಕೌಶಲ್ಯಾಭಿವೃದ್ಧಿ
* ಅಲ್ಫೋನ್ಸ್ ಕಣ್ಣಂತಾನಂ - ಪ್ರವಾಸೋದ್ಯಮ ಮತ್ತು ಮಾಹಿತಿ ತಂತ್ರಜ್ಞಾನ
* ರಾಜ್ ಕುಮಾರ್ ಸಿಂಗ್ - ಇಂಧನ ಮತ್ತು ನವೀಕರಿಸಬಹುದಾದ ಇಂಧನ ಖಾತೆ
* ರಾಜವರ್ಧನ್ ಸಿಂಗ್ ರಾಥೋಡ್ - ಯುವಜನ ಸೇವೆ ಮತ್ತು ಕ್ರೀಡೆ
* ನರೇಂದ್ರ ಸಿಂಗ್ ಥೋಮರ್ - ಗಣಿ
* ಅಶ್ವಿನಿ ಕುಮಾರ್ ಚೌಬೆ - ಆರೋಗ್ಯ ಮತ್ತು ಕುಟುಂಬ ಕಲ್ಯಾಣ
* ಗಿರಿರಾಜ್ ಸಿಂಗ್ - ಸಣ್ಣ ಮತ್ತು ಮಧ್ಯಮ ಕೈಗಾರಿಕೆ
* ನಿತಿನ್ ಗಡ್ಕರಿ - ಜಲ ಸಂಪನ್ಮೂಲ ಮತ್ತು ಗಂಗಾ ಪುನರುಜ್ಜೀವನ (ಹೆಚ್ಚುವರಿ ಹೊಣೆ)












Click it and Unblock the Notifications