75 ಹೊಸ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಮುಂದಾದ ಮೋದಿ ಸರ್ಕಾರ

ನವದೆಹಲಿ, ಆಗಸ್ಟ್ 28: ವೈದ್ಯಕೀಯ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಕಾರಣಕ್ಕೆ 75 ಹೊಸ ಕಾಲೇಜು ಸ್ಥಾಪನ್ಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ.

ಕೇಂದ್ರ ಸಚಿವ ಸಂಪುಟದ ಆರ್ಥಿಕ ವ್ಯವಹಾರಗಳ ಸಮಿತಿ(ಸಿಸಿಇಎ) ಸಭೆಯಲ್ಲಿ ಬುಧವಾರ (ಆಗಸ್ಟ್ 28) ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಯಿತು. ಈ ಪೈಕಿ ಹೊಸ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಪ್ರಮುಖವಾದುದಾಗಿದೆ.

"75 ಹೊಸ ಕಾಲೇಜಿಗೆ ಮಂಜೂರು ಸಿಕ್ಕಿರುವುದರಿಂದ ಸುಮಾರು 15,700 ಎಂಬಿಬಿಎಸ್ ಹೆಚ್ಚು ಸೀಟ್ ಗಳು ಸೇರ್ಪಡೆ ಆಗಲಿವೆ. ಇಂದಿನ ಈ ನಿರ್ಧಾರದಿಂದ ಗ್ರಾಮೀಣ ಆರ್ಥಿಕತೆಗೆ ದೊಡ್ಡ ಮಟ್ಟದಲ್ಲಿ ಸಹಾಯ ಆಗಲಿದೆ" ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದರು.

Cabinet approves setting up of 75 govt medical colleges

ಹಾಲಿ ಜಿಲ್ಲಾ ಮತ್ತು ಶಿಫಾರಸ್ಸು ಆಧಾರಿತ ಆಸ್ಪತ್ರೆಗೆ ಹೊಂದಿಕೊಂಡಂತೆ ಹೊಸ ಮೆಡಿಕಲ್ ಕಾಲೇಜುಗಳು 2021-22ರ ಸುಮಾರಿಗೆ ಈ ಹೊಸ ಮೆಡಿಕಲ್ ಕಾಲೇಜುಗಳು ಸಂಪೂರ್ಣವಾಗಿ ಹೊಂದಿಕೊಳ್ಳಲಿವೆ.

"ಹೊಸ ಕಾಲೇಜುಗಳನ್ನು ಹಂತ ಹಂತವಾಗಿ ನಿರ್ಮಿಸಲಾಗುವುದು, ಎಲ್ಲಿ ಕಾಲೇಜು, ಆಸ್ಪತ್ರೆ ಅಗತ್ಯ ಹೆಚ್ಚಿದೆಯೋ ಅಲ್ಲಿ ಮೊದಲಿಗೆ ಕಾಲೇಜುಗಳು ಸ್ಥಾಪನೆಯಾಗಲಿದೆ. 200ಬೆಡ್ ಗಳ ಜಿಲ್ಲಾಸ್ಪತ್ರೆಗಳ ಜೊತೆಗೆ ಕಾಲೇಜಿನ ಸಂಪರ್ಕ ಜಾಲ ನಿರ್ಮಾಣವಾಗಲಿದೆ..."

"ಈ ಮೂಲಕ ಅಗತ್ಯ ವೈದ್ಯಕೀಯ ನೆರವು ನೀಡಬಲ್ಲ ವೃತ್ತಿಪರ ಆರೋಗ್ಯಾಧಿಕಾರಿಗಳು, ವೈದ್ಯರ ತಂಡ ಲಭ್ಯವಾಗಲಿದೆ. ಜಿಲ್ಲಾಸ್ಪತ್ರೆಗಳ ಮೂಲ ಸೌಕರ್ಯ ಅಭಿವೃದ್ಧಿಪಡಿಸಲಾಗುವುದು, ವೈದ್ಯಕೀಯ ಶಿಕ್ಷಣ ಕೈಗೆಟುಕುವ ದರದಲ್ಲಿ ಎಲ್ಲರಿಗೂ ಲಭ್ಯವಾಗುವಂತೆ ಮಾಡುವುದು ಸರ್ಕಾರದ ಉದ್ದೇಶ" ಎಂದು ಸಚಿವರು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+