ಮೋದಿ 2.0 ಸಂಪುಟದಲ್ಲಿ ಯಾವ ರಾಜ್ಯಕ್ಕೆ ಎಷ್ಟು ಸಚಿವ ಸ್ಥಾನ?
ನವದೆಹಲಿ, ಮೇ 31: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ತನ್ನ ಎರಡನೇ ಅವಧಿಯ ಅಧಿಕಾರ ಆರಂಭಿಸಿದೆ. ಮೇ 30ರಂದು ಮೋದಿ ಅವರು ಪ್ರಧಾನಿಯಾಗಿ ತಮ್ಮ 57 ಮಂದಿ ಸಚಿವರೊಂದಿಗೆ ಪ್ರಮಾಣ ವಚನ ಸ್ವೀಕರಿಸಿದರು.
ಮೋದಿ ಅವರ ಸಚಿವ ಸಂಪುಟ ಸದಸ್ಯರಿಗೆ ಶುಕ್ರವಾರದಂದು ಖಾತೆ ಹಂಚಿಕೆಯಾಗಿದೆ. ಕಳೆದ ಸರ್ಕಾರದಲ್ಲಿದ್ದ ಪ್ರಮುಖರ ಪೈಕಿ ಸುಷ್ಮಾ ಸ್ವರಾಜ್, ರಾಜ್ಯವರ್ಧನ್ ಸಿಂಗ್ ರಾಥೋರ್, ಮನೇಕಾ ಗಾಂಧಿ ಅವರಿಗೆ ಸಚಿವ ಸ್ಥಾನ, ಸಂಪುಟದಲ್ಲಿ ಅವಕಾಶ ಸಿಕ್ಕಿಲ್ಲ. ಅರುಣ್ ಜೇಟ್ಲಿ ಅವರು ಅನಾರೋಗ್ಯದ ಕಾರಣದಿಂದ ಮೋದಿ ಸರ್ಕಾರದ ಭಾಗವಾಗಿಲ್ಲ.
ಒಟ್ಟು 24 ಕ್ಯಾಬಿನೆಟ್ ಸಚಿವರು, 33 ರಾಜ್ಯ ಖಾತೆ ಸಚಿವರು ಅದರಲ್ಲಿ 9 ಮಂದಿ ಸ್ವತಂತ ಖಾತೆ ರಾಜ್ಯ ಸಚಿವರಿದ್ದಾರೆ. ಇನ್ನು ರಾಜ್ಯವಾರು ಸಚಿವರ ಪಟ್ಟಿ ನೋಡಿದರೆ,ಉತ್ತರಪ್ರದೇಶಕ್ಕೆ ಸಿಂಹಪಾಲು ಸಿಕ್ಕಿದೆ. ಪ್ರಧಾನಿ ಮೋದಿ ಅವರು ವಾರಣಾಸಿಯ ಸಂಸದರಾಗಿದ್ದು, ಒಟ್ಟು 9 ಮಂದಿ ಉತ್ತರಪ್ರದೇಶದವರಿದ್ದಾರೆ.

ಯಾವ ರಾಜ್ಯಕ್ಕೆ ಎಷ್ಟು ಸಚಿವ ಸ್ಥಾನ ಸಿಕ್ಕಿದೆ?
ಅರುಣಾಚಲ ಪ್ರದೇಶ: 1
ಅಸ್ಸಾಂ : 1
ಬಿಹಾರ:6
ಛತ್ತೀಸ್ ಗಢ:1
ದೆಹಲಿ:1
ಗೋವಾ:1
ಗುಜರಾತ್:3
ಹರ್ಯಾಣ:3
ಹಿಮಾಚಲ ಪ್ರದೇಶ:1
ಜಮ್ಮು ಮತ್ತು ಕಾಶ್ಮೀರ:1
ಜಾರ್ಖಂಡ್:2
ಕರ್ನಾಟಕ:4
ಮಧ್ಯಪ್ರದೇಶ:5
ಮಹಾರಾಷ್ಟ್ರ:8
ಒಡಿಶಾ:2
ಪಂಜಾಬ್:2
ರಾಜಸ್ಥಾನ:3
ತೆಲಂಗಾಣ:1
ಉತ್ತರಪ್ರದೇಶ:9
ಉತ್ತರಾಖಂಡ್:1
ಪಶ್ಚಿಮ ಬಂಗಾಲ:2












Click it and Unblock the Notifications