ರಾಹುಲ್ ಗಾಂಧಿಯನ್ನು ಟೀಕಿಸುವ ಕುರಿತೇ ಮೋದಿಗೆ ಯೋಚನೆ: ಕಾಂಗ್ರೆಸ್
ನವದೆಹಲಿ, ಮೇ 3: ಚುನಾವಣಾ ಪ್ರಚಾರಕ್ಕೆಂದು ಕರ್ನಾಟಕಕ್ಕೆ ಬಂದಾಗಲೂ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಟೀಕಿಸುವುದನ್ನು ಮುಂದುವರಿಸಿದ್ದಾರೆ. ಜತೆಗೆ ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿದ್ದಾರೆ. ಇದು ಕಾಂಗ್ರೆಸ್‌ನ ಆಕ್ರೋಶಕ್ಕೆ ಕಾರಣವಾಗಿದೆ.
ತನ್ನ ಮುಖ್ಯಸ್ಥ ರಾಹುಲ್ ಗಾಂಧಿ ಅವರನ್ನು ಹೇಗೆ ಟೀಕಿಸಬೇಕು ಮತ್ತು ಪಕ್ಷವನ್ನು ಯಾವ ರೀತಿ ನಿಂದಿಸಬೇಕು ಎಂಬ ಬಗ್ಗೆಯೇ ಪ್ರಧಾನಿ ಮೋದಿ ಅವರು ನಿರಂತರವಾಗಿ ಚಿಂತಿಸುತ್ತಿರುತ್ತಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
'ಮೋದಿ ಅವರಲ್ಲಿ ದೊಡ್ಡ ಬದಲಾವಣೆಯಾಗಿದೆ. ಅದನ್ನು ಯಾರಾದರೂ ಗಮನಿಸುತ್ತಿದ್ದಾರೆಯೋ ಇಲ್ಲವೋ ತಿಳಿದಿಲ್ಲ. ಪ್ರಧಾನಿ ಮೋದಿ ಅವರಾಗಲೀ ಅಥವಾ ಬಿಜೆಪಿಯ ಇತರೆ ನಾಯಕರಾಗಲೀ ಬೆಳಗಿನಿಂದ ಸಂಜೆಯವರೆಗೂ ಇಡೀ ದಿನ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಕುರಿತೇ ಯೋಚಿಸುತ್ತಿರುತ್ತಾರೆ' ಎಂದು ಕಾಂಗ್ರೆಸ್ ವಕ್ತಾರ ರಾಜೀವ್ ಶುಕ್ಲಾ ಟೀಕಿಸಿದ್ದಾರೆ.

'ನಿದ್ದೆಯಲ್ಲಿದ್ದಾಗ, ಎದ್ದಾಗ, ತಿನ್ನುವಾಗ, ನಡೆಯುವಾಗ, ಓದುವಾಗ... ಎಲ್ಲ ಸಮಯವೂ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷ. ಬಹುಶಃ ಅವರ ಕನಸಿನಲ್ಲಿಯೂ. ಅವರು ಯಾವಾಗಲೂ ರಾಹುಲ್ ಗಾಂಧಿ ಅವರನ್ನು ಹೇಗೆ ಟೀಕಿಸುವುದು ಮತ್ತು ಕಾಂಗ್ರೆಸ್‌ಅನ್ನು ಹೇಗೆ ನಿಂದಿಸುವುದು ಎಂಬ ಬಗ್ಗೆಯೇ ಚಿಂತಿಸುತ್ತಿರುತ್ತಾರೆ ಎಂದಿದ್ದಾರೆ.











Click it and Unblock the Notifications