38 ಪತ್ನಿಯರು 89 ಮಕ್ಕಳು: ವಿಶ್ವದ ಅತಿ ದೊಡ್ಡ ಕುಟುಂಬದ ಮುಖಂಡ ಇನ್ನಿಲ್ಲ

ಐಜಾಲ್, ಜೂನ್ 13: ವಿಶ್ವದ ಅತಿ ದೊಡ್ಡ ಕುಟುಂಬವನ್ನು ಹೊಂದಿದ್ದ ವ್ಯಕ್ತಿ ಎಂದು ನಂಬಲಾಗಿದ್ದ ಮಿಜೋರಾಂ ಮೂಲದ ಜಿಯೋನಾ ಚಾನಾ ಇಂದು(ಭಾನುವಾರ) ತಮ್ಮ 76ನೇ ವಯಸ್ಸಿನಲ್ಲಿ ಮೃತಪಟ್ಟಿದ್ದಾರೆ. 38 ಮಂದಿ ಪತ್ನಿಯರು 89 ಮಕ್ಕಳು ಹಾಗೂ 33 ಮಂದಿ ಮರಿ ಮಕ್ಕಳ ಅತಿ ದೊಡ್ಡ ಕುಟುಂಬವನ್ನು ಜಿಯೋನಾ ಚಾನಾ ಅಗಲಿದ್ದಾರೆ.

ಮಿಜೋರಾಂ ಮುಖ್ಯಮಂತ್ರಿ ಜೋರಾಂತಂಗ ಟ್ವಿಟ್ಟರ್‌ನಲ್ಲಿ ಜಿಯೋನಾ ಚಾನಾ ಅವರ ಅಗಲಿಕೆಯನ್ನು ಖಚಿತಪಡಿಸಿದ್ದಾರೆ. ಈ ಟ್ವೀಟ್‌ನಲ್ಲಿ ಮಿಜೋರಾಂ ಸಿಎಂ ಜಿಯೋನಾ ಚಾನಾ ಅವರ ಕುಟುಂಬದ ಕಾರಣಕ್ಕಾಗಿ ಅವರ ಗ್ರಾಮ ಬಕ್ತಾಂಗ್ ತ್ಲಾಂಗ್ನುವಾಮ್ ರಾಜ್ಯದ ಪ್ರಮುಖ ಪ್ರವಾಸಿಗರ ತಾಣವಾಗು ಗುರುತಿಸಿಕೊಂಡಿತ್ತು ಎಂದು ಬರೆದುಕೊಂಡಿದ್ದಾರೆ.

"ಮಿಜೋರಾಂ ಭಾರವಾದ ಹೃದಯದೊಂದಿಗೆ 38 ಹೆಂಡತಿಯರು ಮತ್ತು 89 ಮಕ್ಕಳೊಂದಿಗೆ ವಿಶ್ವದ ಅತಿದೊಡ್ಡ ಕುಟುಂಬದ ಮುಖ್ಯಸ್ಥರೆಂದು ನಂಬಲಾದ ಶ್ರೀ ಜಿಯಾನ್(76) ಅವರಿಗೆ ವಿದಾಯವನ್ನುಹೇಳಿದೆ. ಮಿಜೋರಾಂ ಮತ್ತು ಬಕ್ತಾಂಗ್ ತ್ಲಾಂಗ್ನುವಾಮ್‌ನಲ್ಲಿರುವ ಅವರ ಗ್ರಾಮ ಈ ಕುಟುಂಬದಿಂದಾಗಿ ಪ್ರವಾಸಿಗರ ಪ್ರಮುಖ ಆಕರ್ಷಣೆಯ ಕೇಂದ್ರವಾಗಿದೆ. ರೆಸ್ಟ್ ಇನ್ ಪೀಸ್ ಸರ್! " ಎಂದು ಮಿಜೋರಾಂ ಮುಖ್ಯಮಂತ್ರಿ ಜೋರಾಂತಂಗ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.

Mizoram man with the worlds largest family passes away At the age of 76

ಜಿಯೋನಾ ಎಂದೇ ಪ್ರಸಿದ್ಧಿಯಾಗಿರುವ ಜಿಯೋಂಘಾಕಾ ಭಾನುವಾರ ಮಧ್ಯಾಹ್ನ 3 ಗಂಟೆಗೆ ಮಿಜೋರಾಂನ ರಾಜಧಾನಿ ಐಜಾಲ್‌ನ ಟ್ರಿನಿಟಿ ಆಸ್ಪತ್ರೆಯಲ್ಲಿ ಮಧುಮೇಹ ಹಾಗೂ ರಕ್ತದೊತ್ತಡದಿಂದ ಮೃತಪಟ್ಟಿದ್ದಾರೆ. ತಮ್ಮ ಗ್ರಾಮದ ಧಾರ್ಮಿಕ ಮುಖಂಡರಾಗಿಯೂ ಜಿಯೋನಾ ಗುರುತಿಸಿಕೊಂಡಿದ್ದರು.

1945ರ ಜುಲೈ 21ರಂದು ಜನಿಸಿದ ಜಿಯೋನಾ ಅವರು 3 ವರ್ಷ ದೊಡ್ಡವರಾದ ತಮ್ಮ ಮೊದಲ ಪತ್ನಿಯನ್ನು 17ನೇ ವಯಸ್ಸಿನಲ್ಲಿ ಭೇಟಿಯಾದರು ಎಂದು 'ರಾಯ್ಟರ್ಸ್' ಉಲ್ಲೇಖಿಸಿದೆ. ಈ ಬೃಹತ್ ಕುಟುಂಬ ಪರ್ವತ ತಪ್ಪಲಿನಲ್ಲಿರುವ ಬಕ್ತಾಂಗ್ ತ್ಲಾಂಗ್ನುವಾಮ್ ಗ್ರಾಮದಲ್ಲಿ "ಛೌನ್ ಥಾರ್ ರನ್" ಎಂಬ ನಾಲ್ಕು ಅಂತಸ್ಥಿನ ಮನೆಯಲ್ಲಿ ವಾಸವಾಗಿದೆ. ಈ ಮನೆಯಲ್ಲಿ 100 ಕೊಠಡಿಗಳಿವೆ. ರಾಯ್‌ಟರ್ಸ್ ವರದಿಯ ಪ್ರಕಾರ ಜಿಯೋನಾ ಚಾನಾ ಅವರ ಹೆಂಡತಿಯರು ಮತ್ತು ಎಲ್ಲಾ ಮಕ್ಕಳು ಒಂದೇ ಕಟ್ಟಡದಲ್ಲಿ ಬೇರೆ ಬೇರೆ ಕೋಣೆಗಳಲ್ಲಿ ವಾಸಿಸುತ್ತಿದ್ದಾರೆ. ಆದರೆ ಒಂದೇ ಅಡುಗೆಮನೆ ಹಂಚಿಕೊಳ್ಳುತ್ತಿದ್ದಾರೆ. ಈ ಕುಟುಂಬ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದ್ದ ಕಾರಣ ಕುಟುಂಬಕ್ಕೆ ದೇಣಿಗೆ ರೂಪದಲ್ಲಿಯೂ ನೆರವು ದೊರೆಯುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+