ಉತ್ತರ ಪ್ರದೇಶ: ಪೊಲೀಸರಿಂದಲೇ ಅಪ್ರಾಪ್ತೆ ಮೇಲೆ ಅತ್ಯಾಚಾರ!
ಕಾನ್ಪುರ(ಉತ್ತರ ಪ್ರದೇಶ), ಸೆಪ್ಟೆಂಬರ್, 27: ಸಮಾಜದ ಸ್ವಾಸ್ಥ್ಯ ಕಾಯಬೇಕಾದ, ಭದ್ರತೆ ನೀಡಬೇಕಾದ ಪೊಲೀಸರೇ ಅಪ್ರಾಪ್ತೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.
ಹತ್ತನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿಯನ್ನು ಕೆಲವು ದಿನಗಳಿಂದ ನಿರಂತರವಾಗಿ ಚುಡಾಯಿಸುತ್ತಿದ್ದ ಇಬ್ಬರು ಪೊಲೀಸ್ ಸಿಬ್ಬಂದಿಗಳು ಆಕೆಯನ್ನು ಅಪಹರಿಸಿ, ಗೆಸ್ಟ್ ಹೌಸ್ ವೊಂದಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.

ಅತ್ಯಾಚಾರ ಎಸಗಿದ ನಂತರ, ತಾವು ಪೊಲೀಸರೆಂದು ಹೇಳಿ, ತಮ್ಮ ಬಗ್ಗೆ ದೂರು ನೀಡಿದರೆ ಬಾಲಕಿಯನ್ನು ಸಾಯಿಸುವುದಾಗಿ ಹೆದರಿಸಿದ್ದಾರೆ. ನಂತರ ಬಾಲಕಿಯನ್ನು ರಸ್ತೆಯಲ್ಲಿ ಎಸೆದು ಪರಾರಿಯಾಗಿದ್ದಾರೆ. ಮನೆಗೆ ಬಂದ ಯುವತಿ ಈ ಕುರಿತು ತನ್ನ ತಂದೆ ತಾಯಿಗೆ ಹೇಳಿದ್ದಾಳೆ.
ಸದ್ಯಕ್ಕೆ ಈ ಕುರಿತು ದೂರು ದಾಖಲಿಸಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸಿ, ಅಪರಾಧಿಗಳನ್ನು ಬಂಧಿಸಿ, ಶಿಕ್ಷೆ ನೀಡುವುದಾಗಿ ಭರವಸೆ ನೀಡಿದ್ದಾರೆ.












Click it and Unblock the Notifications