Breaking: ಆಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹದಲ್ಲಿ ಭೂಕಂಪ

ಅಂಡಮಾನ್, ಮೇ 9: ಆಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹದಲ್ಲಿ ಭೂಕಂಪ ಸಂಭವಿಸಿದೆ. ಸೋಮವಾರ(ಮೇ 9) ಮುಂಜಾನೆ ಇಲ್ಲಿನ ಕ್ಯಾಂಪ್ ಬೆಲ್ ಕೊಲ್ಲಿಯಲ್ಲಿ ಭೂಮಿ ಕಂಪಿಸಿದೆ.

ಅಂಡಮಾನ್ ದ್ವೀಪದ ಕೊಲ್ಲಿಯಲ್ಲಿ ಸಂಭವಿಸಿದ ಕಂಪನ ಪ್ರಮಾನ ರಿಕ್ಟರ್ ಮಾಪಕದಲ್ಲಿ 4.4 ಎಂದು ನಮೂದಾಗಿದೆ. ಇದರಿಂದ ಯಾವುದೇ ತೀವ್ರತರವಾಗಿ ಹಾನಿ ಸಂಭವಿಸಿಲ್ಲ. ಸುನಾಮಿ ಅಲರ್ಟ್ ನೀಡಲಾಗಿಲ್ಲ ಎಂದು ಭೂಕಂಪನ ರಾಷ್ಟ್ರೀಯ ಕೇಂದ್ರ ಹೇಳಿದೆ.

ಈ ಕುರಿತಂತೆ ಟ್ವೀಟ್ ಮಾಡಿರುವ ಕೇಂದ್ರವು, ತಡರಾತ್ರಿ 1.11 AM ಸುಮಾರಿಗೆ ಮೊದಲಿಗೆ ಕಂಪನದ ಅನುಭವ ದಾಖಲಾಗಿದ್ದು, ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹದ ಕ್ಯಾಂಪ್ ಬೆಲ್ ಕೊಲ್ಲಿಯಿಂದ ಈಶಾನ್ಯ ಭಾಗದಿಂದ 85 ಕಿ.ಮೀ ದೂರದಲ್ಲಿ ಕಂಪನದ ಕೇಂದ್ರ ಬಿಂದು ದಾಖಲಾಗಿದೆ ಎಂದು ತಿಳಿಸಿದೆ.

Mild Earthquake Hits Andaman and Nicobars Campbell Bay

09-05-2022 ರಂದು ಸಂಭವಿಸಿದ ಭೂಕಂಪದ ತೀವ್ರತೆ:4.4 ರಿಕ್ಟರ್ ಮಾಪಕದ ಪ್ರಮಾಣ, ಸಮಯ: 01:11:52 IST, ಅಕ್ಷಾಂಶ: 7.72 ಮತ್ತು ರೇಖಾಂಶ: 94.19, ಆಳ: 150 ಕಿಮೀ , ಸ್ಥಳ: ಕ್ಯಾಂಪ್‌ಬೆಲ್ ಕೊಲ್ಲಿಯ 85 ಕಿಮೀ ಈಶಾನ್ಯ ಪ್ರದೇಶ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ಮಾಹಿತಿ ನೀಡಿದೆ.

ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಏಪ್ರಿಲ್ 10ರಂದು ರಿಕ್ಟರ್ ಮಾಪಕದಲ್ಲಿ ಭೂಕಂಪನದ ತೀವ್ರತೆ 4.9ರಷ್ಟು ದಾಖಲಾಗಿತ್ತು. ಇದಕ್ಕೂ ಮುನ್ನ ಪೋರ್ಟ್‌ಬ್ಲೇರ್‌ನ ಆಗ್ನೇಯ ಭಾಗದಲ್ಲಿ ರಿಕ್ಟರ್ ಮಾಪಕದಲ್ಲಿ 4.3 ತೀವ್ರತೆಯ ಭೂಕಂಪ ಸಂಭವಿಸಿತ್ತು. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಉತ್ತರ-ವಾಯುವ್ಯಕ್ಕೆ 276 ಕಿಮೀ ದೂರದಲ್ಲಿರುವ ದಿಗ್ಲಿಪುರ್ ಬಳಿ ಕಂಪನದ ಅನುಭವವಾಗಿತ್ತು.ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+