Cyber Crime: ಡೀಪ್‌ಫೇಕ್, ಸೈಬರ್ ಅಪರಾಧ ವಿರುದ್ಧ ಕೇಂದ್ರ ಗೃಹ ಸಚಿವಾಲಯದಿಂದ ಕಠಿಣ ಕ್ರಮ

ಭಾರತದಲ್ಲಿ ಸೈಬರ್ ಅಪರಾಧ ಕೃತ್ಯಗಳು ವರ್ಷದಿಂದ ವರ್ಷಕ್ಕೆ ಏರಿಕೆ ಆಗುತ್ತಲೇ ಇವೆ. ಮತ್ತೊಂದೆಡೆ ಡಿಜಿಟಲ್ ಇಂಡಿಯಾ ಉಪಕ್ರಮ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುತ್ತಿದೆ. ಈ ಮಧ್ಯೆ ಸೈಬರ್ ವಂಚಕರಿಂದ ಜನರ ರಕ್ಷಣೆಗಾಗಿ ಗೃಹ ವ್ಯವಹಾರಗಳ ಸಚಿವಾಲಯ (MHA) ರಕ್ಷಣಾತ್ಮಕ ಪ್ರಯತ್ನ ನಡೆಸಿದೆ. ಆನ್‌ಲೈನ್ ಬೆದರಿಕೆಗಳ ತಡೆಗೆ ಕೇಂದ್ರವು ಸುಧಾರಿತ ಕ್ರಮ, ಪತ್ತೆ ಕಾರ್ಯವಿಧಾನಗಳನ್ನು ಚುರುಕುಗೊಳಿಸಿದೆ.

ಕೇಂದ್ರ ಸರ್ಕಾರದ ಮೂಲಗಳ ಪ್ರಕಾರ, ದೇಶದ್ಲಲಿ ಸೈಬರ್ ಭದ್ರತೆಗೆ ಸಂಬಂಧಿಸಿದ ಘಟನೆಗಳು 2022ರಲ್ಲಿ 10.29 ಲಕ್ಷದಿಂದ 2024 ರಲ್ಲಿ 22.68 ಲಕ್ಷಕ್ಕೆ ಹೆಚ್ಚಾಗಿದೆ. ಇದೇ ವರ್ಷ 2025ರ ಫೆಬ್ರವರಿಯಲ್ಲಿ ರಾಷ್ಟ್ರೀಯ ಸೈಬರ್ ಅಪರಾಧ ವರದಿ ಮಾಡುವ ಪೋರ್ಟಲ್ (NCRP) ನಲ್ಲಿ 36.45 ಲಕ್ಷದಷ್ಟು ಸೈಬರ್ ವಂಚನೆಗಳು ನಡೆದ ಬಗ್ಗೆ ವರದಿ ಆಗಿವೆ. ಭಾರತದಲ್ಲಿ ಶೇಕಡಾ 86ರಷ್ಟು ಅಧಿಕ ಮನೆಗಳನ್ನು ವಿಸ್ತರಿಸುವ ಡಿಜಿಟಲ್ ಸಂಪರ್ಕ ಸಾರ್ವಜನಿಕರು ನಡೆಸವು ಆರ್ಥಿಕ ವಹೀವಾಟು ಮತ್ತು ಸಂವಹನ ವಿಧಾನವನ್ನು ಸುಧಾರಿಸಿದೆ. ಇದರ ನಡುವೆಯು ತ್ವರಿತ ಸಂಪರ್ಕವು ಆನ್‌ಲೈನ್ ಶೋಷಣೆ ಹೆಚ್ಚಾಗಿದ್ದು, ಡಿಜಿಟಲ್ ಸುರಕ್ಷತೆಯನ್ನು ರಾಷ್ಟ್ರೀಯ ಆದ್ಯತೆಯಾಗಿ ಮಾಡಲಾಗಿದೆ.

MHA Strengthens Cybersecurity Framework as Cyber Frauds Surge Across India

ತಂತ್ರಜ್ಞಾನ ಸಹಿತ ಹೊಸ ಹಗರಣ ಏರಿಕೆ

ಜನಸಾಮಾನ್ಯರನ್ನು ಸೇರಿದಂತೆ ಎಲ್ಲ ವರ್ಗದವರನ್ನು ಸೈಬರ್ ಅಪರಾಧಿಗಳು ಗುರಿಯಾಗಿದ್ದಿಕೊಂಡಿರುತ್ತಾರೆ. ಸುಧಾರಿತ ತಂತ್ರಜ್ಞಾನಗಳು ಮತ್ತು ಫಿಶಿಂಗ್, ವಂಚನೆ ಮತ್ತು ಡೀಪ್‌ಫೇಕ್ ಮೂಲಕ ಮೋಸ ಮಾಡುತ್ತಿದ್ದಾರೆ. ತಂತ್ರಜ್ಞಾನಗಳ ಸಹಾಯದಿಂದ ಹೊಸ ತಂತ್ರ ಬಳಕೆ ಮಾಡುವುದು ಹೆಚ್ಚಾಗಿದೆ. ಬೆಂಗಳೂರಿನಲ್ಲಿ 57 ವರ್ಷದ ಮಹಿಳೆ ಡೀಪ್‌ಫೇಕ್ ವೀಡಿಯೊಗೆ ಮಾರು ಹೋಗಿ ನಕಲಿ ಹೂಡಿಕೆ ವೇದಿಕೆ ಮೂಲಕ ಬರೋಬ್ಬರಿ 3.75 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ.

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವಾಸ್ತವಿಕ ಆದಾಯ ಭರವಸೆ ನೀಡುವ ಸರ್ಕಾರಿ ಬೆಂಬಲಿತ ಹೂಡಿಕೆ ಯೋಜನೆ ಅನುಮೋದಿಸಿದ್ದಾರೆಂದು ತಪ್ಪಾಗಿ ಬಿಂಬಿಸುವ ಡೀಪ್‌ಫೇಕ್ ವೀಡಿಯೊಗ ಆನ್‌ಲೈನ್‌ನಲ್ಲಿ ಹರಿದಾಡಿತ್ತು. ಇನ್ನೂ ಹೈದರಾಬಾದ್‌ನ 25 ವರ್ಷದ ವ್ಯಕ್ತಿಗೆ ಮೋತಿಲಾಲ್ ಓಸ್ವಾಲ್ ಲೋಗೋ ಬಳಸಿ ಮಾಡಿದ್ದ ನಕಲಿ ವ್ಯಾಪಾರ ಜಾಹೀರಾತು ಆಪ್‌ ₹12.5 ಲಕ್ಷಕ್ಕೂ ರೂಪಾಯಿ ಪಡೆದು ವಂಚಿಸಲಾಗಿದೆ. ನಿಜವೆಂಬಂತೆ ಕಾಣುವಷ್ಟರ ಮಟ್ಟಿಗೆ ಡೀಪ್‌ಫೇಕ್ ವಿಡಿಯೋ ಮಾಡಿ, ಹೆಚ್ಚಿನ ಅದಾಯದ ಭರವಸೆ ನೀಡಿ ಹಿರಿಯ ಸರ್ಕಾರಿ ವ್ಯಾಕ್ತಿಗಳಿಗೂ ಹೂಡಿಕೆ ಆಮಿಷ ಒಡ್ಡಿ ಹಣ ಲಪಟಾಯಿಸುವ ಪ್ರಕರಣ ಬೆಳಕಿಗೆ ಬಂದಿವೆ.

ಸೈಬರ್ ಅಪರಾಧ ಸಮನ್ವಯ ಕೇಂದ್ರ

ಡಿಜಿಟಲ್ ಸಂಪರ್ಕ ಹೆಚ್ಚಾದಂತೆಲ್ಲ ದೇಶದಲ್ಲಿ ಸೈಬರ್ ಕ್ರೈಂ ಕೂಡ ಏರಿಕೆ ಆಗುತ್ತಿದೆ. ಇಂತಹ ಬೆದರಿಕೆ ತಡೆಗೆ ಕೇಂದ್ರ ಗೃಹ ಸಚಿವಾಲಯವು ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ (I4C) ಮೂಲಕ ತನ್ನ ಬಹು-ಹಂತದ ಸೈಬರ್ ರಕ್ಷಣಾ ಕಾರ್ಯವಿಧಾನವನ್ನು ಮತ್ತಷ್ಟು ಬಲಗೊಳಿಸಿದೆ. ಇದು ಸಾರ್ವಜನಿಕರು ಆನ್‌ಲೈನ್ ಹಣಕಾಸು ವಂಚನೆಗಳು, ಕಳ್ಳತನ, ಮಹಿಳೆ ಮತ್ತು ಮಕ್ಕಳನ್ನು ಟಾರ್ಗೆಟ್ ಮಾಡಿ ಮಾಡುವ ಅಪರಾಧಗಳ ವಿರುದ್ಧ ರಾಷ್ಟ್ರೀಯ ಸೈಬರ್ ಅಪರಾಧ ವರದಿ ಮಾಡುವ ಪೋರ್ಟಲ್ (www.cybercrime.gov.in) ಮೂಲಕ ದೂರು ನೀಡಲು ಅನುವು ಮಾಡುತ್ತದೆ.

ಇಂತಹ ವಂಚನೆಗೆ ಒಳಗಾದವರು ಸಹಾಯವಾಣಿ 1930 ಕರೆ ಮಾಡಿದರೆ ತಕ್ಷಣ ಸಿಗುತ್ತದೆ. ಕೂಡಲೇ ನೀವು ದೂರು ನೀಡಿದಲ್ಲಿ ಬ್ಯಾಂಕುಗಳು ನೈಜ ಸಮಯದಲ್ಲಿ ವಂಚನೆಯ ವಹಿವಾಟು ಸ್ಥಗಿತಗೊಳಿಸಿ ಹಾನಿಯನ್ನು, ಹಾನಿ ಪ್ರಮಾಣ ಕಡಿಮೆ ಮಾಡಲು ಸಹಾಯವಾಗುತ್ತದೆ. ಅಲ್ಲದೇ, ಸೈಬರ್ ವಿರುದ್ಧದ ಸಾಮರ್ಥ್ಯ ಬಲಗೊಳಿಸುತ್ತದೆ. ಸೈಬರ್ ಅಪರಾಧ ತನಿಖೆಯಲ್ಲಿ ತರಬೇತಿ ನೀಡುವ ಗೃಹ ಸಚಿವಾಲಯದ ನೇತೃತ್ವದ ಇ-ಲರ್ನಿಂಗ್ ಪ್ಲಾಟ್‌ಫಾರ್ಮ್ ಸೈಟ್ರೇನ್ ಪೋರ್ಟಲ್‌ನಲ್ಲಿ 1,05,796 ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ನೋಂದಾಯಿಸಿಕೊಂಡಿದ್ದಾರೆ. ಇಲ್ಲಿಯವರೆಗೆ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಅಧಿಕಾರಿಗಳಿಗೆ 82,704 ಕ್ಕೂ ಹೆಚ್ಚು ಪ್ರಮಾಣಪತ್ರಗಳನ್ನು ನೀಡಲಾಗಿದೆ ಎಂದು ಕೇಂದ್ರ ಸಚಿವಾಲಯ ಮಾಹಿತಿ ನೀಡಿದೆ.

ಅಂತರ-ಸಚಿವಾಲಯ ಸಮನ್ವಯ

ಎಲ್ಲ ಕ್ಷೇತ್ರಗಳಲ್ಲಿಯೂ ಸೈಬರ್ ಬೆದರಿಕೆ, ಪ್ರಕರಣಗಳ ಹೆಚ್ಚುತ್ತಿರುವ ಕಾರಣ ಅವುಗಳ ತಡೆಗೆ ಗೃಹ ಸಚಿವಾಲಯ ದೂರಸಂಪರ್ಕ ಇಲಾಖೆ (DoT) ಮತ್ತು ಇತರ ಏಜೆನ್ಸಿಗಳ ಸಹಕಾರದಲ್ಲಿ ಕೆಲಸ ಮಾಡುತ್ತಿದೆ. ದೂರ ಸಂಪರ್ಕ ಇಲಾಖೆಯು ಹಣಕಾಸು ವಂಚನೆ ಅಪಾಯ ಸೂಚಕ (FRI) ವ್ಯವಸ್ಥೆ ಅನುಮಾನಾಸ್ಪದ ಚಟುವಟಿಕೆಗಳಲ್ಲಿ ತೊಡಗಿರುವ ಮೊಬೈಲ್ ಸಂಖ್ಯೆ ಪತ್ತೆ ಮಾಡುತ್ತದೆ. ಯಾವ ಹಂತದ ಅಪಾಯ ಎದುರಾಗಬಹುದೆಂದು ನಿರ್ಧರಿಸಿ ಟೆಲಿಕಾಂ ಸಂಸ್ಥೆಗೆ ತಿಳಿಸುತ್ತದೆ. ಈ ಮೂಲಕ ಸಂಭವನೀಯ ಅಪಾರ ತಡೆಯುತ್ತದೆ. ಆಪರೇಟರ್‌ಗಳು ಮತ್ತು ಬ್ಯಾಂಕ್‌ಗಳು ಅಂತಹ ಸಂಖ್ಯೆಗಳನ್ನು ನಿರ್ಬಂಧಿಸಲು ಮತ್ತು ದೊಡ್ಡ ಪ್ರಮಾಣದ ಹಾನಿಯನ್ನುಂಟುಮಾಡುವ ಮೊದಲು ಮೋಸದ ನೆಟ್‌ವರ್ಕ್‌ಗಳಿಗೆ ತಡೆ ನೀಡುತ್ತದೆ.

ಸಾರ್ವಜನಿಕ ಜಾಗೃತಿ: ರಕ್ಷಣೆಗೆ ಆದ್ಯತೆ

ಸೈಬರ್ ಅಪರಾಧವನ್ನು ಎದುರಿಸುವಲ್ಲಿ ತಂತ್ರಜ್ಞಾನವು ನಿರ್ಣಾಯಕ ಪಾತ್ರ ವಹಿಸುತ್ತದೆ. ಈ ಬಗ್ಗೆ ಸಾರ್ವಜನಿಕ ಜಾಗೃತಿ ಮೂಡಿಸುವುದು. ರಕ್ಷಣೆ ಒದಗಿಸುವುದು ಪ್ರಮುಖ ಆದ್ಯತೆಯಾಗಿದೆ. ನಾಗರಿಕರು ಪರಿಶೀಲಿಸದೇ ಮೊಬೈಲ್‌ಗೆ ಬಂದ ಲಿಂಕ್‌ ಅನ್ನು ಕ್ಲಿಕ್ ಮಾಡುವುದು. ಬೇರೆಯವರಿಗೆ OTP ಶೇರ್ ಮಾಡಿಕೊಳ್ಳುವುದು. ಸೋಷಿಯಲ್ ಮೀಡಿಯಾಗಳಲ್ಲಿ ತೋರಿಸುವ ಹೂಡಿಕೆ ವಿಡಿಯೋ ನೋಡಿ ಹೂಡಿಕೆ ಮಾಡಿ ವಂಚನೆಗೆ ಒಳಗಾಗುವುದು ಹೆಚ್ಚಾಗುತ್ತಿದೆ. ಈ ಬಗ್ಗೆ ಜಾಗೃತಿ ಮೂಡಿಸುವುದ ಪ್ರಮುಖ ಕೆಲಸವಾಗಿದೆ.

ನಕಲಿ ವ್ಯಾಪಾರ ಅಪ್ಲಿಕೇಶನ್‌ಗಳು ಮತ್ತು ದಾರಿತಪ್ಪಿಸುವ ಆನ್‌ಲೈನ್ ಜಾಹೀರಾತುಗಳ ವಿರುದ್ಧ RBI ಮತ್ತು SEBI ಯಂಹತ ಸಂಸ್ಥೆಗಳು ನಿರಂತರವಾಗಿ ಸಲಹೆ, ಜಾಗೃತಿ ಮೂಡಿಸುತ್ತಿವೆ. ಅಭಿಯಾನ ನಡೆಸುತ್ತವೆ. ಅಗತ್ಯ ಮಾರ್ಗದರ್ಶನ ನೀಡುವ ಮೂಲಕ ಸೈಬರ್ ವಿರುದ್ಧ ಹೋರಾಟಕ್ಕೆ ಇಳಿದಿದೆ.

ಭಾರತ ಸುರಕ್ಷಿತ ಡಿಜಿಟಲ್ ನತ್ತ...

ಸೈಬರ್ ವಂಚಕರನ್ನು ಪತ್ತೆ, ಬಂಧನ ಮಾತ್ರವಲ್ಲದೆ ಡಿಜಿಟಲ್ ಜಾಗೃತಿ ಸಂಸ್ಕೃತಿ ಬೆಳೆಸುವ ಗುರಿ ಸರ್ಕಾರ ಹೊಂದಿದೆ. ಸುಧಾರಿತ ವರದಿ ಮಾಡುವಿಕೆ, ನೈಜ-ಸಮಯದ ಪ್ರತಿಕ್ರಿಯೆ ಮತ್ತು ರಾಷ್ಟ್ರವ್ಯಾಪಿ ತರಬೇತಿಯ ಮೂಲಕ, ನಾಗರಿಕರು ಭಾರತದ ವೇಗವಾಗಿ ವಿಸ್ತರಿಸುತ್ತಿರುವ ಡಿಜಿಟಲ್ ಆರ್ಥಿಕತೆಯಲ್ಲಿ ಸುರಕ್ಷಿತವಾಗಿ ತೊಡಗಿಸಿಕೊಳ್ಳಬೇಕೆಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ. ಆನ್‌ಲೈನ್‌ ವಹೀವಾಟು, ಹೂಡಿಕೆ, ಲಿಂಕ್ ಮಾಡುವಾಗ ಜಾಗೃತವಾಗಿರಿ. ಸೈಬರ್ ವಂಚನೆಗೆ ಒಳಗಾದಲ್ಲಿ ತಕ್ಷಣವೇ 1930 ಅಥವಾ cybercrime.gov.in ಗೆ ವರದಿ ಮಾಡಿಕೊಳ್ಳುವಂತೆ ತಿಳಿಸಲಾಗಿದೆ.

YouTube - https://youtube.com/@cyberdosti4c

Instagram- https://www.instagram.com/cyberdosti4c?igsh=c2tteTd5Mjl2b2cw

Facebook- https://www.facebook.com/share/1KVuL1aJ9y/?mibextid=wwXIfr

X- https://x.com/cyberdost?s=11

Whatsapp- https://whatsapp.com/channel/0029Va3VAOY8fewrOtXqMw1V

Daily hunt - https://m.dailyhunt.in/profile/I4C_MHA

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+