ಯೋಗಿ ಆದಿತ್ಯನಾಥ ಯಾರ್ಯಾರ ಹೆಸರು ಬದಲಾಯಿಸಿದ್ದಾರೆ ಗೊತ್ತಾ?

ಉತ್ತರ ಪ್ರದೇಶದ ಖಾವಿಧಾರಿ ಸಿಎಂ ಯೋಗಿ ಆದಿತ್ಯನಾಥ ಅವರು ಸದಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿ ಆಗುತ್ತಲೇ ಇರುತ್ತಾರೆ. ಹೆಚ್ಚಿನ ಪಾಲು ಅವರ ಧರ್ಮೋದ್ದೇಶಿತ ಆಡಳಿತ ನಿರ್ಧಾರಗಳಿಂದ ಸುದ್ದಿ ಆಗುವುದೇ ಹೆಚ್ಚು.

ಇತ್ತೀಚೆಗಷ್ಟೆ ಯೋಗಿ ಸರ್ಕಾರವು ಖ್ಯಾತ ಅಲಹಾಬಾದ್ ನಗರದ ಹೆಸರನ್ನು ಪ್ರಯಾಗ್‌ ರಾಜ್‌ ಎಂದು ಬದಲಾಯಿಸಿದ್ದು ದೇಶದಾದ್ಯಂತ ಸುದ್ದಿಯಾಯಿತು. ಆದರೆ ಇದು ಮೊದಲೇನಲ್ಲ ಅಧಿಕಾರಕ್ಕೆ ಬಂದಾಗಿನಿಂದಲೂ ಕಣ್ಣಿಗೆ ಬಿದ್ದ ಮುಸ್ಲಿಂ ಹೆಸರುಗಳನ್ನೆಲ್ಲಾ ಹಿಂದೂ ಹೆಸರಾಗಿ ಬದಲಾಯಿಸುತ್ತಿದ್ದಾರೆ ಯೋಗಿ.

Memes about Yogi Adityanath viral in social media

ಆದರೆ ಈ ಬಾರಿ ಯೋಗಿ ಆದಿತ್ಯನಾಥ ಅವರ ಈ ನಿರ್ಣಯ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆ ಆಗಿದೆ. ಯೋಗಿ ಅವರ ಈ ಹೆಸರು ಬದಲಾಯಿಸುವ ಖಯಾಲೆ ಹಲವು ಮೀಮ್‌ಗಳಿಗೆ ಆಹಾರವೂ ಆಗಿದೆ.

Memes about Yogi Adityanath viral in social media

ಯೋಗಿ ಅವರು ಖ್ಯಾತ ನಾಮರ ಹೆಸರುಗಳನ್ನು ಹಿಂದೂ ಹೆಸರುಗಳಾಗಿ ಬದಲಾಯಿಸಿರುವ ಮೀಮ್‌ಗಳು ಫೇಸ್‌ಬುಕ್‌, ಟ್ವಿಟ್ಟರ್‌ಗಳಲ್ಲಿ ತುಂಬಿ ತುಳುಕಾಡುತ್ತಿವೆ.

Memes about Yogi Adityanath viral in social media

ಇದೇ ವಿಷಯಕ್ಕೆ ಸಂಬಂಧಪಟ್ಟ ಮೀಮ್‌ ಹೀಗಿದೆ ನೋಡಿ, ಯೋಗಿ ಅವರು ಮೈಕಲ್‌ ಜಾಕ್ಸ್‌ನ್‌ಗೆ ಕರೆ ಮಾಡಿ ನಿನ್ನ ಹೆಸರು ಇನ್ನು ಮುಂದೆ 'ಮೈಕಾ ಲಾಲ್ ಜಯಕಿಶನ್‌' ಎಂದು ಬದಲಾಗಿದೆ ಎಂದಿದ್ದಾರೆ. ಮೈಕಲ್‌ ಜಾಕ್ಸನ್‌ ಮಾತ್ರವಲ್ಲ ಇನ್ನೂ ಹಲವರ ಹೆಸರು ಯೋಗಿ ಅವರ ಬಾಯಲ್ಲಿ ಹಿಂದೂ ಹೆಸರುಗಳಾಗಿ ಬದಲಾಗಿದೆ.

Memes about Yogi Adityanath viral in social media

ನಟಿ ಜಾಕ್ವೆಲಿನ್‌ ಫರ್ನಾಂಡಿಸ್‌ ಹೆಸರು ಜಾನಕಿ ಎಂದು ಬದಲಾಯಿಸಲಾಗಿದೆ. ಅಮೀರ್‌ ಖಾನ್ ಹೆಸರನ್ನು ಅಮರ್‌ ಖನ್ನಾ ಎಂದು ಹಿಂದೂ ಹೆಸರಾಗಿ ಬದಲಾಯಿಸಿದ್ದಾರಂತೆ ಯೋಗೀಜಿ. ರಷ್ಯಾ ಅಧ್ಯಕ್ಷ ಪುಟಿನ್ ಹೆಸರನ್ನು ಪುನಿತ್‌ ಮಿಶ್ರಾ ಎಂದು ಬದಲಾಯಿಸಿದ್ದಾರೆ ಯೋಗಿ.

ಮೀಮ್‌ ಸೃಷ್ಠಿಕರ್ತರ ಕ್ರಿಯಾಶೀಲತೆಗೆ ಕೊನೆ-ಮೊದಲಿಲ್ಲ ಬಿಡಿ. ವ್ಯಕ್ತಿಗಳ ಹೆಸರನ್ನು ಮಾತ್ರವಲ್ಲ ಯೋಗೀ ಅವರು ಕಾರ್ಟೂನ್‌ ಪಾತ್ರಗಳ ಹೆಸರನ್ನೂ ಹಿಂದೂ ಹೆಸರನ್ನಾಗಿಸಿದ್ದಾರಂತೆ. ದೈತ್ಯ ವಿಲನ್‌ ಥಾನೊಸ್‌ಗೆ ಕರೆ ಮಾಡಿದ ಯೋಗೀಜಿ ಆತನ ಹೆಸರನ್ನು ಠಾಕೂರ್‌ ಎಂದು ಬದಲಾಯಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+