ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಮೆಹಬೂಬಾ ಮುಫ್ತಿ

By Sachhidananda Acharya
|
Google Oneindia Kannada News

ಕಾಶ್ಮೀರ, ಜೂನ್ 19: ಬಹುಮತ ಕಳೆದುಕೊಂಡ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಸ್ಥಾನಕ್ಕೆ ಮೆಹಬೂಬಾ ಮುಫ್ತಿ ರಾಜೀನಾಮೆ ನೀಡಿದ್ದಾರೆ.

ಪಿಡಿಪಿ ಜೊತೆ ಮೈತ್ರಿ ಕಳೆದುಕೊಳ್ಳಲು ಬಿಜೆಪಿ ನಿರ್ಧರಿಸಿದ್ದರಿಂದ ಮುಫ್ತಿ ಸರಕಾರ ಅಲ್ಪಮತಕ್ಕೆ ಕುಸಿದಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯಪಾಲರಿಗೆ ಮುಖ್ಯಮಂತ್ರಿ ರಾಜೀನಾಮೆ ಸಲ್ಲಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಪಿಡಿಪಿಗೆ ಬಿಜೆಪಿ ತಲಾಖ್ಜಮ್ಮು ಮತ್ತು ಕಾಶ್ಮೀರದಲ್ಲಿ ಪಿಡಿಪಿಗೆ ಬಿಜೆಪಿ ತಲಾಖ್

ಈ ಕುರಿತು ಪ್ರತಿಕ್ರಿಯೆ ನೀಡಿರುವ ಪಿಡಿಪಿ ನಾಯಕ ನಯೀಮ್ ಅಖ್ತರ್, "ಸಂಜೆ 5 ಗಂಟೆಗೆ ನಾವು ಈ ಬಗ್ಗೆ ವಿವರವಾಗಿ ಮಾತನಾಡಲಿದ್ದೇವೆ. ಇದೇ ವೇಳೆ ಆಕೆ (ಮೆಹಬೂಬಾ ಮುಫ್ತಿ) ರಾಜ್ಯಪಾಲರಿಗೆ ರಾಜೀನಾಮೆ ನೀಡಿದ್ದಾರೆ," ಎಂದು ತಿಳಿಸಿದ್ದಾರೆ.

Mehbooba Mufti submits resignation to the Governor

"ಬಿಜೆಪಿ ಜೊತೆ ಸರಕಾರ ನಡೆಸಲು ನಮ್ಮಿಂದ ಸಾಧ್ಯವಿದ್ದ ಎಲ್ಲಾ ಪ್ರಯತ್ನ ನಡೆಸಿದ್ದೇವೆ. ಇದು ನಮ್ಮ ಪಾಲಿಗೆ ಅಚ್ಚರಿಯನ್ನು ತಂದಿದೆ. ಕಾರಣ ನಮಗೆ ಅವರ ನಿರ್ಧಾರದ ಬಗ್ಗೆ ಯಾವುದೇ ಮುನ್ಸೂಚನೆಗಳು ಇರಲಿಲ್ಲ," ಎಂದು ಪಿಡಿಪಿ ವಕ್ತಾರ ರಫಿ ಅಹಮದ್ ಮಿರ್ ಹೇಳಿದ್ದಾರೆ.

87 ಸದಸ್ಯ ಬಲದ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ 28 ಸದಸ್ಯರನ್ನು ಹೊಂದಿರುವ ಪಿಡಿಪಿ ಮತ್ತು 25 ಸದಸ್ಯರನ್ನು ಹೊಂದಿರುವ ಬಿಜೆಪಿ ಮೈತ್ರಿ ಸರಕಾರ ನಡೆಸುತ್ತಿತ್ತು. 2014ರಿಂದ ಪಿಡಿಪಿ ಜೊತೆ ಅಧಿಕಾರ ಹಂಚಿಕೊಂಡಿದ್ದ ಬಿಜೆಪಿ ಇದೀಗ ಚುನಾವಣೆಗೆ ಒಂದೂವರೆ ವರ್ಷವಿರುವಾಗ ಬೆಂಬಲ ಹಿಂಪಡೆದಿದೆ.

English summary
Baratiya Janatha Party (BJP) pulls out of an alliance with People's Democratic Party (PDP) in Jammu and Kashmir. "We will talk in detail at 5pm, meanwhile she (Mehbooba Mufti) has submitted her resignation (as Jammu and Kashmir CM) to the Governor," said PDP leader Naeem Akhtar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X