ಸೋಮವಾರ ಮೇಘಾಲಯ ವಿಧಾನಸಭಾ ಚುನಾವಣೆ: ಸಿದ್ಧತೆ ಮಾಡಿಕೊಂಡ ಚುನಾವಣಾ ಆಯೋಗ

ಗರೋ ಮತ್ತು ಖಾಸಿ ಹಿಲ್ಸ್ ಪ್ರದೇಶದಲ್ಲಿ ಈ ಹಿಂದೆ ಉಗ್ರಗಾಮಿ ಗುಂಪುಗಳು ಸಕ್ರಿಯವಾಗಿದ್ದವು. ಹಿಂದಿನ ಚುನಾವಣೆಗಳಲ್ಲಿ ಕೆಲವು ಅಹಿತಕರ ಘಟನೆಗಳು ವರದಿಯಾಗಿದ್ದವು.

ಶಿಲ್ಲಾಂಗ್, ಫೆಬ್ರವರಿ. 26: ಸೋಮವಾರದ ಫೆಬ್ರವರಿ. 27 ರಂದು ವಿಧಾನಸಭಾ ಚುನಾವಣೆಗೆ ಮೇಘಾಲಯ ಸಿದ್ಧವಾಗಿದ್ದು, ರಾಜ್ಯದಾದ್ಯಂತ 900 ಮತಗಟ್ಟೆಗಳನ್ನು ದುರ್ಬಲ ಮತ್ತು ಗಂಭೀರ ಎಂದು ಗುರುತಿಸಲಾಗಿದೆ ಎಂದು ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಹೇಳಿದ್ದಾರೆ. ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಮೇಘಾಲಯದ ಸಿಇಒ ಎಫ್‌ಆರ್ ಖಾರ್ಕೊಂಗೊರ್, "ಈ 900 ಮತಗಟ್ಟೆಗಳಲ್ಲಿ ಈ ಹಿಂದೆ ಹಿಂಸಾಚಾರ ನಡೆದಿರುವ ದಾಖಲೆಗಳಿವೆ ಎಂದಿದ್ದಾರೆ.

ಗರೋ ಮತ್ತು ಖಾಸಿ ಹಿಲ್ಸ್ ಪ್ರದೇಶದಲ್ಲಿ ಈ ಹಿಂದೆ ಉಗ್ರಗಾಮಿ ಗುಂಪುಗಳು ಸಕ್ರಿಯವಾಗಿದ್ದವು. ಹಿಂದಿನ ಚುನಾವಣೆಗಳಲ್ಲಿ ಕೆಲವು ಅಹಿತಕರ ಘಟನೆಗಳು ವರದಿಯಾಗಿದ್ದವು. ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯನ್ನು ಸುಗಮವಾಗಿ ನಡೆಸಲು, ಕಾನೂನು ಮತ್ತು ಸುವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳಲು ಚುನಾವಣಾ ಆಯೋಗವು 119 ಕಂಪನಿಗಳ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳನ್ನು (ಸಿಎಪಿಎಫ್) ಮೇಘಾಲಯದಲ್ಲಿ ನಿಯೋಜಿಸಿದೆ ಎಂದು ಖಾರ್ಕೊಂಗೊರ್ ಮಾಹಿತಿ ನೀಡಿದ್ದಾರೆ.

Meghalaya Assembly Elections: 900 Polling Stations Identified As Vulnerable, Critical

"ಈ ಹಿಂದೆ ತ್ರಿಪುರಾ ವಿಧಾನಸಭಾ ಚುನಾವಣೆಯನ್ನು ಯಶಸ್ವಿಯಾಗಿ ನಿರ್ವಹಣೆ ಮಾಡಿದ್ದೇವೆ. ಇಲ್ಲಿಯವರೆಗೆ ಯಾವುದೇ ಕಾನೂನು ಸುವ್ಯವಸ್ಥೆಗೆ ದಕ್ಕೆ ಬರುವಂತಹ ಘಟನೆಗಳು ವರದಿಯಾಗಿಲ್ಲ. ಆದರೆ, ದುರದೃಷ್ಟವಶಾತ್, ಸೋಹಿಯಾಂಗ್ ಕ್ಷೇತ್ರದ ಅಭ್ಯರ್ಥಿಯೊಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಅಲ್ಲಿ ಚುನಾವಣೆಯನ್ನು ಮುಂದೂಡಿಲಾಗಿದೆ. ಆದ್ದರಿಂದ, 60 ವಿಧಾನಸಭಾ ಕ್ಷೇತ್ರಗಳ ಪೈಕಿ 59 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ" ಎಂದು ಮೇಘಾಲಯ ಸಿಇಒ ಮಾಹಿತಿ ನೀಡಿದ್ದಾರೆ.

"ಒಟ್ಟು 3,482 ಮತಗಟ್ಟೆಗಳನ್ನು ಸ್ಥಾಪಿಸಿದ್ದೇವೆ. ಎಲ್ಲಾ ಸಿದ್ಧತೆಗಳು ನಡೆಯುತ್ತಿವೆ. ಎಲ್ಲಾ 12 ಜಿಲ್ಲಾ ಚುನಾವಣಾ ತಂಡಗಳು ಚುನಾವಣೆಗೆ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಂಡಿವೆ. ಗರೋ ಬೆಟ್ಟಗಳಲ್ಲಿ ನಮಗೆ ಕೆಲವು ಸಣ್ಣಪುಟ್ಟ ಸಮಸ್ಯೆಗಳಿವೆ. ಅಲ್ಲಿ ಸದಸ್ಯರ ನಡುವೆ ಘರ್ಷಣೆ ನಡೆದಿದ್ದು, ಈ ವಿಷಯಕ್ಕೆ ಸಂಬಂಧಿಸಿದಂತೆ 31 ಜನರನ್ನು ಬಂಧಿಸಿದ್ದೇವೆ. ಒಟ್ಟಾರೆಯಾಗಿ, ಚುನಾವಣಾ ಸಿದ್ಧತೆ ಸುಸೂತ್ರವಾಗಿ ನಡೆಯುತ್ತಿದೆ" ಎಂದು ಹೇಳಿದ್ದಾರೆ.

ಇನ್ನು ಮುನ್ನೆಚ್ಚರಿಕೆ ಕ್ರಮವಾಗಿ ಬಾಂಗ್ಲಾದೇಶದೊಂದಿಗಿನ ಮೇಘಾಲಯದ ಅಂತರರಾಷ್ಟ್ರೀಯ ಗಡಿಯನ್ನು ಮಾರ್ಚ್ 2 ರವರೆಗೆ ಮುಚ್ಚಲು ಚುನಾವಣಾ ಆಯೋಗ ಆದೇಶಿಸಿದೆ. "ರಾಜ್ಯದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯನ್ನು ಖಚಿತಪಡಿಸಿಕೊಳ್ಳಲು ನಾವು ಎಲ್ಲಾ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಸಿಆರ್‌ಪಿಸಿಯ ಸೆಕ್ಷನ್ 144 ಅನ್ನು ಅಂತರರಾಷ್ಟ್ರೀಯ ಗಡಿಯಲ್ಲಿ ವಿಧಿಸಲಾಗಿದೆ" ಎಂದು ಖಾರ್ಕೊಂಗೊರ್ ತಿಳಿಸಿದ್ದಾರೆ.

Meghalaya Assembly Elections: 900 Polling Stations Identified As Vulnerable, Critical

ಫೆಬ್ರವರಿ 24 ರಿಂದ ಮಾರ್ಚ್ 2 ರ ನಡುವೆ ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯ ಭಾರತ - ಬಾಂಗ್ಲಾದೇಶ ಗಡಿಯ ಒಂದು ಕಿಮೀ ವ್ಯಾಪ್ತಿಯೊಳಗೆ ಜನರ ಸಂಚಾರವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯ ಜಿಲ್ಲಾ ಮ್ಯಾಜಿಸ್ಟ್ರೇಟ್ ಆದೇಶ ಹೊರಡಿಸಿದ್ದಾರೆ. ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯ ಜಿಲ್ಲಾಡಳಿತವು ಗಡಿ ಪ್ರದೇಶಗಳಲ್ಲಿ ಸಿಆರ್‌ಪಿಸಿಯ ಸೆಕ್ಷನ್ 144 ಅನ್ನು ವಿಧಿಸಿದೆ. ಮಾರ್ಚ್ 2 ರಂದು ತ್ರಿಪುರ ಮತ್ತು ನಾಗಾಲ್ಯಾಂಡ್ ಮತ ಎಣಿಕೆ ಜೊತೆಗೆ ಮೇಘಾಲಯ ವಿಧಾನಸಭಾ ಚುನಾವಣೆಯ ಮತ ಏಣಿಕೆ ನಡೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+