Meghalaya Election 2023 : ಫೆಬ್ರವರಿ 27 ರಂದು ಮತದಾನ, ಮಾರ್ಚ್ 2ಕ್ಕೆ ಫಲಿತಾಂಶ!
ಮೇಘಾಲಯ ವಿಧಾನಸಭಾ ಚುನಾವಣೆಯ ಅವಧಿ ಮಾರ್ಚ್ 15 ರಂದು ಕೊನೆಗೊಳ್ಳಲಿದೆ. ಮೇಘಾಲಯದಲ್ಲಿ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಚುನಾವಣಾ ಆಯೋಗ ಇಂದು ಪ್ರಕಟಿಸಿದೆ. ರಾಜ್ಯದ ಒಟ್ಟು 60 ವಿಧಾನಸಭಾ ಸ್ಥಾನಗಳಿಗೆ ಫೆಬ್ರವರಿ 27 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಫಲಿತಾಂಶ ಮಾರ್ಚ್ 2 ರಂದು ಪ್ರಕಟವಾಗಲಿದೆ. ರಾಜ್ಯದಲ್ಲಿ ಚುನಾವಣಾ ಸಿದ್ಧತೆಯನ್ನು ಚುನಾವಣಾ ಆಯೋಗ ಪೂರ್ಣಗೊಳಿಸಿದೆ.
ತ್ರಿಪುರಾ ಮತ್ತು ನಾಗಾಲ್ಯಾಂಡ್ ವಿಧಾನಸಭಾ ಚುನಾವಣೆಯ ದಿನಾಂಕಗಳನ್ನು ಚುನಾವಣಾ ಆಯೋಗ ಇಂದು ಪ್ರಕಟಿಸಿದೆ. ಆಯೋಗದ ಪ್ರಕಾರ, ನಾಗಾಲ್ಯಾಂಡ್, ಮೇಘಾಲಯ ಮತ್ತು ತ್ರಿಪುರಾ ಒಟ್ಟು 62.8 ಲಕ್ಷ ಮತದಾರರನ್ನು ಹೊಂದಿದ್ದು, ಇದರಲ್ಲಿ 31.47 ಲಕ್ಷ ಮಹಿಳಾ ಮತದಾರರು, ಇವರಲ್ಲಿ 97,000 ಮತದಾರರು 80+ ವಯಸ್ಸಿನವರಾಗಿದ್ದಾರೆ ಮತ್ತು 31,700 ವಿಕಲಚೇತನ ಮತದಾರರು ಇದ್ದಾರೆ. ಚುವಾವ್‌ನಲ್ಲಿ ವಿಕಲಚೇತನ ಮತದಾರರಿಗೆ ಪ್ರತ್ಯೇಕ ಮತದಾನದ ವ್ಯವಸ್ಥೆ ಮಾಡಲಾಗುವುದು ಎಂದು ಆಯೋಗ ತಿಳಿಸಿದೆ.
ಚುನಾವಣಾ ಆಯೋಗ ನೀಡಿರುವ ಮಾಹಿತಿ ಪ್ರಕಾರ ಮೇಘಾಲಯದಲ್ಲಿ 3,482 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಇದೇ ವೇಳೆ ಶೇ.50ರಷ್ಟು ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ಮಾಡಲಾಗುವುದು. ಸೂಕ್ಷ್ಮ ಹಾಗೂ ದುರ್ಬಲ ಮತಗಟ್ಟೆಗಳಿಗೆ ಬಿಗಿ ಭದ್ರತೆ ಏರ್ಪಡಿಸಲಾಗುವುದು.

ಜೊತೆಗೆ ಮಧ್ಯಪ್ರದೇಶ, ಕರ್ನಾಟಕ ಮತ್ತು ಛತ್ತೀಸ್‌ಗಢದ ಚುನಾವಣಾ ದಿನಾಂಕಗಳನ್ನು ಮಾರ್ಚ್‌ನಲ್ಲಿ ಪ್ರಕಟಿಸಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿದೆ. ಈ ರಾಜ್ಯಗಳ ಚುನಾವಣೆಗೂ ಆಯೋಗದಿಂದ ಸಿದ್ಧತೆ ಪೂರ್ಣಗೊಂಡಿದೆ. ಮಧ್ಯಪ್ರದೇಶ ಮತ್ತು ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವಿದ್ದು, ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಸರಕಾರವಿದೆ.
ಹಿಂದಿನ ವಿಧಾನಸಭಾ ಚುನಾವಣೆ ಫೆಬ್ರವರಿ 2018 ರಲ್ಲಿ ನಡೆದಿದ್ದವು. ಕಳೆದ ಬಾರಿ ಮೇಘಾಲಯದಲ್ಲಿ ನಡೆದ ಚುನಾವಣೆಯ ನಂತರ, ನ್ಯಾಷನಲ್ ಪೀಪಲ್ಸ್ ಪಾರ್ಟಿ (NPP) ನೇತೃತ್ವದ ಒಕ್ಕೂಟವು ರಾಜ್ಯ ಸರ್ಕಾರವನ್ನು ರಚಿಸಿತು, ಕಾನ್ರಾಡ್ ಕೊಂಗಲ್ ಸಂಗ್ಮಾ ಮುಖ್ಯಮಂತ್ರಿಯಾಗಿ ಅಧಿಕಾರವನ್ನು ವಹಿಸಿಕೊಂಡರು. ಎನ್‌ಪಿಪಿ ಈಶಾನ್ಯದಿಂದ ರಾಷ್ಟ್ರೀಯ ಪಕ್ಷದ ಮಾನ್ಯತೆಯನ್ನು ಹೊಂದಿರುವ ಏಕೈಕ ಪಕ್ಷವಾಗಿದೆ.
ಇದುವರೆಗೆ ಮೇಘಾಲಯದಲ್ಲಿ ಸುಮಾರು 14 ಶಾಸಕರು ಮುಂಬರುವ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ರಾಜೀನಾಮೆ ನೀಡಿದ್ದಾರೆ, ಸದನದ ಬಲವನ್ನು 60 ರಿಂದ 47 ಕ್ಕೆ ಇಳಿಸಲಾಗಿದೆ ಎಂದು ಅಸೆಂಬ್ಲಿ ಕಮಿಷನರ್ ಮತ್ತು ಕಾರ್ಯದರ್ಶಿ ಆಂಡ್ರ್ಯೂ ಸೈಮನ್ಸ್ ತಿಳಿಸಿದ್ದಾರೆ.

ಮೇಘಾಲಯ ಚುನಾವಣಾ ವೇಳಾಪಟ್ಟಿಯ ವಿವರ ಇಲ್ಲಿದೆ:
ರಾಜ್ಯದಲ್ಲಿ ಫೆಬ್ರವರಿ 27 ರಂದು ಚುನಾವಣೆ ನಡೆಯಲಿದೆ.
ಮಾರ್ಚ್ 2 ರಂದು ಮತ ಎಣಿಕೆ ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಒಂದೇ ಹಂತದಲ್ಲಿ ಮತದಾನ ನಡೆಯಲಿದೆ.
ಮುಂಬರುವ ಚುನಾವಣೆಗಾಗಿ ಮೇಘಾಲಯದಲ್ಲಿ ಒಟ್ಟು 3,482 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು.
ಮೇಘಾಲಯ ವಿಧಾನಸಭೆಯ ಅಧಿಕಾರಾವಧಿಯು ಮಾರ್ಚ್ 15, 2023 ರಂದು ಕೊನೆಗೊಳ್ಳಲಿದೆ.












Click it and Unblock the Notifications