ಇಂದು ಮೆಡಿಕಲ್ ಶಾಪ್ ಬಂದ್: ರೋಗಿಗಳು ಪರದಾಡಬೇಕಾದೀತು ಹುಷಾರು!

Recommended Video

      ಸೆಪ್ಟೆಂಬರ್ 28ರಂದು ದೇಶದಾದ್ಯಂತ ಔಷಧ ಅಂಗಡಿಗಳು ಬಂದ್ | ಇಂದು ಎಲ್ಲೂ ಔಷಧ ಸಿಗೋಲ್ಲ

      ನವದೆಹಲಿ, ಸೆಪ್ಟೆಂಬರ್ 28: ಆನ್ ಲೈನ್ ನಲ್ಲಿ ಔಷಧ ಮಾರಾಟ ಮಾಡುವ ವ್ಯವಸ್ಥೆ ವಿರೋಧಿಸಿ, ಇ ಫಾರ್ಮಸಿ ವ್ಯವಸ್ಥೆ ವಿರುದ್ಧ ಇಂದು(ಸೆ.28) ಆಲ್ ಇಂಡಿಯಾ ಆರ್ಗನೈಸೇಷನ್ ಆಫ್ ಕೆಮಿಸ್ಟ್ ಅಂಡ್ ಡ್ರಗಿಸ್ಟ್ ಸಂಸ್ಥೆಯು ಭಾರತ್ ಬಂದ್ ಗೆ ಕರೆ ನೀಡಿದೆ.

      ದೇಶದಾದ್ಯಂತ ಇಂದು ಔಷಧಿ ಅಂಗಡಿಗಳು ಮುಚ್ಚಲಿದ್ದು, ಜನರು ಪರದಾಡುವ ಪರಿಸ್ಥಿತಿ ಉದ್ಭವವಾಗಬಹುದು. ಸರ್ಕಾರಿ ಆಸ್ಪತ್ರೆ ಆವರಣದ ಔಷಧಿ ಅಂಗಡಿಗಳು ತೆರೆದಿರುವ ಸಾಧ್ಯತೆ ಇದೆ.

      ಕೇಂದ್ರ ಸರ್ಕಾರ ಜಾರಿಗೆ ಮುಂದಾಗಿರುವ ಇ-ಫಾರ್ಮಸಿ ವ್ಯವಸ್ಥೆ ವಿರೋಧಿಸಿ ಆಲ್ ಇಂಡಿಯಾ ಆರ್ಗನೈಸೇಷನ್ ಆಫ್ ಕೆಮಿಸ್ಟ್ ಅಂಡ್ ಡ್ರಗಿಸ್ಟ್ ಸಂಸ್ಥೆ ಬಂದ್ ಗೆ ಕರೆ ನೀಡಿದೆ.

      Medical shop bandh: Aall medical shops may remain closed today

      ದೇಡದಾದ್ಯಂತ ಔಷಧಿ ಮಳಿಗೆಗಳ ಮಾಲೀಕರು ಬಂದ್ ಗೆ ಬೆಂಬಲ ನೀಡಿದ್ದಾರೆ. ತನ್ನಿಮಿತ್ತ ಜೀವರಕ್ಷಕ, ತುರ್ತು ಔಷಧಗಳನ್ನು ಹೆಚ್ಚಿನ ಪ್ರಮಾಣದಲ್ಲಿ ದಾಸ್ತಾನು ಮಾಡಿಕೊಳ್ಳುವಂತೆ ಸರ್ಕಾರೀ ಆಸ್ಪತ್ರೆ ಆವರಣದ ಮೆಡಿಕಲ್ ಶಾಪ್ ಗಳಿಗೆ ತಿಳಿಸಲಾಗಿದೆ. ರೋಗಿಗಳಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಕೆಲ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.

      ಕರ್ನಾಟಕದಲ್ಲಿ ಸರ್ಕಾರಿ ಆಸ್ಪತ್ರೆ ಆವರಣದಲ್ಲಿರುವ ಯಾವುದೇ ಮೆಡಿಕಲ್ ಶಾಪ್ ಗಳನ್ನು ಮುಚ್ಚಬಾರದೆಂದು ವೈದ್ಯಕೀಯ ಶಿಕ್ಷಣ ಸಚಿವ ಡಿ ಕೆ ಶಿವಕುಮಾರ್ ಆದೇಶಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+