ಆರೋಗ್ಯ ಕ್ಷೇತ್ರದ ಬಜೆಟ್ ಕೊಡುಗೆ ಬಗ್ಗೆ ಮೇಡಲ್ ಡಯಾಗ್ನಾಸ್ಟಿಕ್ಸ್ ಸಿಇಒ
ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್ 2021 ಮಂಡನೆ ನಂತರ, ಆರೋಗ್ಯ ಮತ್ತು ಯೋಗಕ್ಷೇಮ ಕ್ಷೇತ್ರಕ್ಕೆ ಕೊಟ್ಟಿರುವ ಕೊಡುಗೆ ಬಗ್ಗೆ ಮೇಡಲ್ ಡಯಾಗ್ನಾಸ್ಟಿಕ್ಸ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅರ್ಜುನ್ ಅನಂತ್ ಪ್ರತಿಕ್ರಿಯಿಸಿದ್ದಾರೆ.
"ಆರೋಗ್ಯ ಮತ್ತು ಯೋಗಕ್ಷೇಮ ಕ್ಷೇತ್ರಕ್ಕೆ ₹2, 83,846 ಲಕ್ಷ ಕೋಟಿ ಯನ್ನು ಘೋಷಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಅಭಿನಂದನೆಗಳು" ಮೇಡಲ್ ಡಯಾಗ್ನಾಸ್ಟಿಕ್ಸ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅರ್ಜುನ್ ಅನಂತ್
Budget 2021 Live Updates : ರಕ್ಷಣಾ ಕ್ಷೇತ್ರಕ್ಕೆ ಶೇಕಡಾ 20ರಷ್ಟು ಅನುದಾನ ಹೆಚ್ಚಳ
"COVID-19 ಸಾಂಕ್ರಾಮಿಕರೋಗದಿಂದ ಜಗತ್ತು ಇನ್ನೂ ತೊಂದರೆಗೀಡಾದ ಈ ಸಂದರ್ಭದಲ್ಲಿ, ಆರೋಗ್ಯ ಮತ್ತು ಯೋಗಕ್ಷೇಮ ಕ್ಷೇತ್ರಕ್ಕೆ ₹2, 83,846 ಲಕ್ಷ ಕೋಟಿ ಯನ್ನು ಘೋಷಿಸಿದ ಮಾನ್ಯ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಈ ಘೋಷಣೆಯನ್ನು ನಾನು ಸ್ವಾಗತಿಸುತ್ತೇನೆ. ಇದರಿಂದಾಗಿ ರಾಷ್ಟ್ರೀಯ ಆರೋಗ್ಯ ಮಿಷನ್ ಜೊತೆಗೆ ಆರು ವರ್ಷಗಳಲ್ಲಿ ₹64,180 ಕೋಟಿ ವೆಚ್ಚ ಮಾಡುವ ಬದ್ಧತೆಯೊಂದಿಗೆ ಸರಕಾರದ "ಪ್ರಧಾನಮಂತ್ರಿ 'ಸ್ವಾಸ್ಥ್ಯ ಭಾರತ ಯೋಜನೆ'ಯು ಪ್ರಾಥಮಿಕ, ಮಾಧ್ಯಮಿಕ ಮತ್ತು ತೃತೀಯ ಆರೋಗ್ಯ ಆರೈಕೆ ವ್ಯವಸ್ಥೆ ಮತ್ತು ಅಸ್ತಿತ್ವದಲ್ಲಿರುವ ರಾಷ್ಟ್ರೀಯ ಸಂಸ್ಥೆಗಳ ಸಾಮರ್ಥ್ಯಗಳನ್ನು ಅಭಿವೃದ್ಧಿಗೊಳಿಸಲಿದೆ. ವ್ಯಾಕ್ಸಿನೇಷನ್ ಡ್ರೈವ್ ಅರ್ಥವ್ಯವಸ್ಥೆಯನ್ನು ಎಂದಿನ ದೃಢ ವ್ಯವಸ್ಥೆಗೆ ತರಲು ಮತ್ತು ಗ್ರಾಹಕರ ವಿಶ್ವಾಸವನ್ನು ಸುಧಾರಿಸಲು ಈ ಕ್ರಮ -ಘೋಷಣೆ ಸಹಾಯಕವಾಗಿದೆ.

11 ರಾಜ್ಯಗಳ 3,382 ಬ್ಲಾಕ್ ಸಾರ್ವಜನಿಕ ಆರೋಗ್ಯ ಘಟಕಗಳ ಪ್ರತಿ ಜಿಲ್ಲೆಯಲ್ಲಿ 17,000 ಗ್ರಾಮೀಣ ಮತ್ತು 11,000 ನಗರ ಆರೋಗ್ಯ ಮತ್ತು ಆರೋಗ್ಯ ಕೇಂದ್ರಗಳು ಮತ್ತು ಸಮಗ್ರ ಸಾರ್ವಜನಿಕ ಆರೋಗ್ಯ ಲ್ಯಾಬ್ ಗಳನ್ನು ಸ್ಥಾಪಿಸುವ ಪ್ರಸ್ತಾವನೆಯಲ್ಲಿ ಆರೋಗ್ಯ ಆರೈಕೆ ಕ್ಷೇತ್ರಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಯನ್ನು ಹೆಚ್ಚಿಸಲಾಗಿದೆ. ಕಳೆದ ವರ್ಷ ಹಿಂದೆಂದೂ ಕಂಡರಿಯದ ಸಾಂಕ್ರಾಮಿಕ ರೋಗ ವನ್ನು ತಡೆಗಟ್ಟಲು ಅಗತ್ಯವಾಗಿರುವ ಆರೋಗ್ಯ ಆರೈಕೆ ಕ್ಷೇತ್ರಕ್ಕೆ ಮಾನ್ಯ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗಮನ ಹರಿಸಿರುವುದು ಆರೋಗ್ಯ ಆರೈಕೆ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿದಂತಾಗಿದೆ.
ಈ ಘೋಷಣೆಯಿಂದಾಗಿ ಉತ್ತಮ ರೋಗಪತ್ತೆ ಸೇವೆಗಳನ್ನು ಪಡೆಯಲು ಶ್ರೇಣಿ 2 ಮತ್ತು 3 ನಗರಗಳಿಗೆ ಉತ್ತಮ ವೇದಿಕೆಯನ್ನು ಸೃಷ್ಟಿಸಿದಂತಾಗಿದೆ. ಈ ಪ್ರಸ್ತಾಪಗಳು ದೇಶಾದ್ಯಂತ ಆರೋಗ್ಯ ಮೂಲಸೌಕರ್ಯವನ್ನು ಪ್ರಮಾಣೀಕರಿಸುವುದರ ಜೊತೆಗೆ ಗುಣಮಟ್ಟದ ಆರೋಗ್ಯವನ್ನು ಸುಲಭವಾಗಿ ಮತ್ತು ಕೈಗೆಟುಕುವಂತೆ ಮಾಡುತ್ತದೆ ". ಎಂದು ಅವರು ಹೇಳಿದರು.












Click it and Unblock the Notifications