ರಾಜಸ್ಥಾನ ವಿಶ್ವದ ಹಾಟೆಸ್ಟ್‌ ಸಿಟಿ: ಎಲ್ಲೆಲ್ಲಿ ಗರಿಷ್ಠ ಉಷ್ಣಾಂಶ ಎಷ್ಟಿದೆ?

ಜೈಪುರ, ಮೇ 27: ದೇಶಾದ್ಯಂತ ಉರಿ ಬಿಸಿಲು ಹೆಚ್ಚುತ್ತಿದೆ, ರಾಜಸ್ಥಾನದಲ್ಲಿ 50 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದೆ.

ದೇಶದ ಹಲವೆಡೆ ಚಂಡಮಾರುತ ಹಾನಿಯನ್ನುಂಟು ಮಾಡಿದೆ, ಇನ್ನು ಕೆಲವೆಡೆ ಮಳೆಯಾಗುತ್ತಿದೆ. ಆದರೆ ಗರಿಷ್ಠ ಉಷ್ಣಾಂಶವೂ ಏರುತ್ತಿದೆ. ರಾಜಸ್ಥಾನದ ಚುರುವಿನಲ್ಲಿ ಗರಿಷ್ಠ ಉಷ್ಣಾಂಶ ದಾಖಲಾಗಿದೆ.

ಇದು ದೇಶದಲ್ಲಿ ದಾಖಲಾದ ಅತಿ ಗರಿಷ್ಠ ಉಷ್ಣಾಂಶವಾಗಿದೆ ಎಂದು ಕೇಂದ್ರ ಹವಾಮಾನ ಇಲಾಖೆ ವಿಜ್ಞಾನಿ ರವೀಂದ್ರ ಸಿಹಾಗ್ ಹೇಳಿದ್ದಾರೆ. ಕರ್ನಾಟಕದ ಕಲಬುರಗಿಯಲ್ಲಿ 44 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಪಾಕಿಸ್ತಾನದ ಜಾಕೋಬಾಬಾದ್‌ನಲ್ಲಿ ಕೂಡ 50 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶವಿದೆ. ಚುರು ಹಾಗೂ ಜಾಕೋಬಾಬಾದ್ ವಿಶ್ವದ ಹಾಟೆಸ್ಟ್‌ ನಗರಗಳಾಗಿವೆ.

Maximum Temperature Of 50°C Was Recorded In Rajasthan

ಇನ್ನು ಬಿಹಾರದ ಮಜಾಫರ್‌ಪುರ್‌ನಲ್ಲಿ 41.5 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಹಿಮಾಚಲ ಪ್ರದೇಶದಲ್ಲೂ ಕೂಡ ಉಷ್ಣಾಂಶ ಹೆಚ್ಚಾಗುತ್ತಿದೆ.

ಶಿಮ್ಲಾದಲ್ಲಿ 28.4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ ಇದು ಸಾಮಾನ್ಯ ಉಷ್ಣಾಂಶಕ್ಕಿಂತ 3-4 ಡಿಗ್ರಿ ಸೆಲ್ಸಿಯಸ್ ಹೆಚ್ಚಿದೆ. ಊನಾದಲ್ಲಿ 43.2 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿದೆ.

ದೆಹಲಿಯ ಮಯ್ಯೂರ್ ವಿಹಾರ್ ಪ್ರದೇಶದಲ್ಲಿ 47.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಅದರ ಜೊತೆಗೆ ದಖ್ಖನ್ ಪ್ರಸ್ಥಭೂಮಿಯಲ್ಲಿರುವ ನೆರೆಯ ಆಂಧ್ರದ ರಾಯಲಸೀಮಾ, ಯಾಣಂ, ಆಂಧ್ರ, ತೆಲಂಗಾಣ, ಮಹಾರಾಷ್ಟ್ರ, ಛತ್ತೀಸ್‌ಗಢ, ಒಡಿಶಾ, ರಾಜಸ್ಥಾನ, ಪಂಜಾಬ್‌,ಹರಿಯಾಣ, ಚಂಡೀಗಢ, ದೆಹಲಿ, ಉತ್ತರ ಪ್ರದೇಶ, ಮಧ್ಯಪ್ರದೇಶಗಳಲ್ಲಿಯೂ ಬಿಸಿಗಾಳಿ ಬೀಸಲಿದೆ ಎಂದು ಐಎಂಡಿ ಎಚ್ಚರಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+