ಮಥುರಾದಲ್ಲಿ ಸೆಕ್ಷನ್ 144 ಜಾರಿ: ಶಾಹಿ ಮಸೀದಿಗೆ ಬಿಗಿ ಭದ್ರತೆ- ಕಾರಣ ಇಲ್ಲಿದೆ
ಲಕ್ನೋ ಡಿಸೆಂಬರ್ 6: ಶಾಹಿ ಮಸೀದಿ ಈದ್ಗಾದಲ್ಲಿ ಹನುಮಾನ್ ಚಾಲೀಸ್ ಪಠಿಸುವಂತೆ ಅಖಿಲ ಭಾರತ ಹಿಂದೂ ಮಹಾಸಭಾ ಕರೆ ನೀಡಿದ ಬೆನ್ನಲ್ಲೇ ಅಧಿಕಾರಿಗಳು ಮಂಗಳವಾರ ಉತ್ತರ ಪ್ರದೇಶದ ಮಥುರಾದಲ್ಲಿ ಭದ್ರತೆಯನ್ನು ಹೆಚ್ಚಿಸಿದ್ದಾರೆ. ಯಾವುದೇ ಹೊಸ ಸಂಪ್ರದಾಯ ಅಥವಾ ಆಚರಣೆಗೆ ಅವಕಾಶ ನೀಡುವುದಿಲ್ಲ ಎಂದು ಜಿಲ್ಲಾ ಪೊಲೀಸ್ ಮುಖ್ಯಸ್ಥರು ಹೇಳಿದ್ದಾರೆ.
ಇಂದು (ಡಿಸೆಂಬರ್ 6) ಬಾಬ್ರಿ ಮಸೀದಿ ಧ್ವಂಸವಾಗಿ 30 ವರ್ಷ ಪೂರೈಸುತ್ತದೆ. ಇದು ಧರ್ಮ ಸಂಘರ್ಷಕ್ಕೆ ಎಡೆ ಮಾಡಿಕೊಡುವ ಸಾಧ್ಯತೆ ಇದ್ದು ಮುನ್ನೆಚ್ಚರಿಕೆ ಕ್ರಮವಾಗಿ ಸುಮಾರು 1,500 ಪೊಲೀಸರು, ಸಶಸ್ತ್ರ ಪಡೆ ಮತ್ತು ಅರೆಸೇನಾ ಪಡೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಜೊತೆಗೆ ದೇವಾಲಯದ ಪಟ್ಟಣದಲ್ಲಿರುವ ಕೃಷ್ಣ ಜನ್ಮಸ್ಥಾನ ದೇವಸ್ಥಾನ ಮತ್ತು ಶಾಹಿ ಮಸೀದಿ ಈದ್ಗಾ ಬಳಿ ಸಂಚಾರ ನಿರ್ಬಂಧಗಳನ್ನು ಜಾರಿಗೊಳಿಸಲಾಗಿದೆ.
Uttar Pradesh | Police barricading placed at various places in Mathura this morning & vehicle checking being done by them in wake of a call given by Akhil Bharat Hindu Mahasabha to recite Hanuman Chalisa at Shri Krishna Janmabhoomi complex-Shahi Idgah Masjid maidan here today. pic.twitter.com/LvDK1uy8UJ
— ANI UP/Uttarakhand (@ANINewsUP) December 6, 2022
ಶಾಲಾ ವಾಹನಗಳು ಮತ್ತು ಆಂಬ್ಯುಲೆನ್ಸ್‌ಗಳಿಗೆ ಮಾತ್ರ ವಿನಾಯಿತಿ ನೀಡಲಾಗಿದೆ. ಜೊತೆಗೆ "ಯಾವುದೇ ಹೊಸ ಸಂಪ್ರದಾಯ ಅಥವಾ ಆಚರಣೆಗಳನ್ನು ನಡೆಸಲು ಅನುಮತಿಸಲಾಗುವುದಿಲ್ಲ" ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಶೈಲೇಶ್ ಪಾಂಡೆ ಹೇಳಿದ್ದಾರೆ.

ಶಾಹಿ ಮಸೀದಿಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ: ಪ್ರಮುಖ ವಿವರಗಳು-
*ಮಂಗಳವಾರ ಅಧಿಕಾರಿಗಳು ಉತ್ತರ ಪ್ರದೇಶದ ಮಥುರಾದಲ್ಲಿ ಭದ್ರತೆಯನ್ನು ಹೆಚ್ಚಿಸಿದ್ದಾರೆ.
*ಸುಮಾರು 1,500 ಪೊಲೀಸರು, ಸಶಸ್ತ್ರ ಪಡೆ ಮತ್ತು ಅರೆಸೇನಾ ಪಡೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಮತ್ತು ಶ್ರೀ ಕೃಷ್ಣ ಜನ್ಮಸ್ಥಾನ ದೇವಸ್ಥಾನ ಮತ್ತು ಶಾಹಿ ಮಸೀದಿ ಈದ್ಗಾ ಬಳಿ ಸಂಚಾರ ನಿರ್ಬಂಧಗಳನ್ನು ಜಾರಿಗೊಳಿಸಲಾಗಿದೆ.
*ಶಾಲಾ ವಾಹನಗಳು ಮತ್ತು ಆಂಬ್ಯುಲೆನ್ಸ್‌ಗಳಿಗೆ ಮಾತ್ರ ಸಂಚರಿಸಲು ಅವಕಾಶ ನೀಡಲಾಗಿದೆ.
*ಸುಪ್ರೀಂ ಕೋರ್ಟ್‌ನ ಆದೇಶಗಳನ್ನು ಅನುಸರಿಸಲಾಗುವುದು. ಸಿಆರ್‌ಪಿಸಿಯ ಸೆಕ್ಷನ್ 144 ರ ಅಡಿಯಲ್ಲಿ ನಿಷೇಧಾಜ್ಞೆಗಳನ್ನು ಹೇರಲಾಗಿದೆ.
*ಕಾನೂನನ್ನು ತನ್ನ ಕೈಗೆ ತೆಗೆದುಕೊಂಡು ನಗರದ ಶಾಂತಿಯನ್ನು ಹಾಳುಮಾಡಲು ಯಾರಿಗೂ ಅವಕಾಶ ನೀಡುವುದಿಲ್ಲ.

* ಅಖಿಲ ಭಾರತ ಹಿಂದೂ ಮಹಾಸಭಾ
* ಒಂದು ವೇಳೆ ಆಡಳಿತವು ನಮಗೆ ಮುಂದುವರಿಯಲು ಅವಕಾಶ ನೀಡದಿದ್ದರೆ, ನಮ್ಮನ್ನು ನಿಲ್ಲಿಸುವ ಸ್ಥಳದಲ್ಲಿ ನಾವು ಹನುಮಾನ್ ಚಾಲೀಸಾವನ್ನು ಪಠಿಸುತ್ತೇವೆ" ಎಂದು ಅಖಿಲ ಭಾರತ ಹಿಂದೂ ಮಹಾಸಭಾದ ರಾಷ್ಟ್ರೀಯ ಖಜಾಂಚಿ ದಿನೇಶ್ ಕೌಶಿಕ್ ಅವರು ಹೇಳಿದರು.
* ಸಂಘಟನೆಯ ಹಲವು ಕಾರ್ಯಕರ್ತರನ್ನು ಗೃಹಬಂಧನದಲ್ಲಿ ಇರಿಸಲಾಗಿದೆ. ನಮ್ಮನ್ನು ತಡೆದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಅವರು ಹೇಳಿದ್ದಾರೆ.
* ಸಂಘಟನೆಯು ಕಳೆದ ವರ್ಷವೂ ಇದೇ ರೀತಿಯ ಕರೆ ನೀಡಿತ್ತು ಆದರೆ ಅವರ ಯೋಜನೆಯನ್ನು ಜಿಲ್ಲಾಡಳಿತವು ವಿಫಲಗೊಳಿಸಿತು.












Click it and Unblock the Notifications