• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಧಾರ್ಮಿಕ ಮಾರುಕಟ್ಟೆ: ಇದನ್ನು ಯಾರು, ಹೇಗೆ ಮಾಡ್ತಾರೆ?

By ಒನ್ ಇಂಡಿಯಾ ಸಿಬ್ಬಂದಿ
|

ಮಿಶನರಿಗಳು ಆಫ್ರಿಕಾ ದೇಶಕ್ಕೆ ಬಂದಾಗ ಅವರ ಕೈಯಲ್ಲಿ ಬೈಬಲ್ ಇತ್ತು ಮತ್ತು ನಾವು ಭೂಮಿ ಹೊಂದಿದ್ದೆವು. ಅವರು ನಮ್ಮ ಹತ್ತಿರ "ನಾವು ಪ್ರಾರ್ಥಿಸೋಣ" ಎಂದರು. ಆಗ ನಾವು ಕಣ್ಣು ಮುಚ್ಚಿದೆವು. ಕಣ್ಣು ತೆರೆದಾಗ ನಮ್ಮ ಕೈಯಲ್ಲಿ ಬೈಬಲ್ ಇತ್ತು ಮತ್ತು ಅವರು ಭೂಮಿ ಹೊಂದಿದ್ದರು.

ಹೀಗೆ ಹೇಳಿದ್ದು ಕೇಪ್ ಟೌನ್‌ನಲ್ಲಿ ಆರ್ಚ್‌ಬಿಷಪ್ ಆಗಿದ್ದ ಮೊಟ್ಟದ ಮೊದಲ ದಕ್ಷಿಣ ಆಫ್ರಿಕಾ-ಆಂಗ್ಲ ಮೂಲದ ಕಪ್ಪು ಜನಾಂಗೀಯ ವ್ಯಕ್ತಿ ಡೆಸ್ಮಂಡ್ ಪಿಲೊ ಟುಟು.

ಹಾಗಿದ್ದರೆ ಮತಾಂತರದ ನೈಜ ಸಮಸ್ಯೆ ಇರುವುದು ಎಲ್ಲಿ ಮತ್ತು ಧಾರ್ಮಿಕತೆಯು ಮಾರುಕಟ್ಟೆ ಸಾಹಸವಾಗಿ ಬದಲಾಗಿದ್ದು ಹೇಗೆ ಎಂಬುದನ್ನು ತಿಳಿಯಬೇಕಾದರೆ ಭಾರತದಲ್ಲಿ 2000 ರಲ್ಲಿ 2.4 ಕೋಟಿ ಸಂಖ್ಯೆಯಲ್ಲಿದ್ದ ಕ್ರೈಸ್ತರ ಸಂಖ್ಯೆ 2013ರ ಹೊತ್ತಿಗೆ 7.1 ಕೋಟಿಗೆ ಏರಿದ್ದು ಹೇಗೆ ಎಂಬುದನ್ನು ಅರಿಯಬೇಕು. ಮತಾಂತರದ ಹಿಂದೆ ಇನ್ನೂ ಅನೇಕ ವಿಷಯಗಳು ಇವೆ. ಇದೊಂದು ಅತ್ಯಂತ ಆಳಕ್ಕೆ ಬೇರು ಬಿಟ್ಟಿರುವ ಸಮಸ್ಯೆ. [ಲವ್ ಜಿಹಾದ್ ಎಂದರೇನು?]

ಧರ್ಮಗುರು ಅಲ್ಲ, ಮಾರುಕಟ್ಟೆ ಕಾರ್ಯನಿರ್ವಾಹಕರು: ಮತಾಂತರಿಗಳನ್ನು ಧಾರ್ಮಿಕ ಗುರುಗಳು ಎನ್ನುವ ಬದಲು ಒಂದು ಧರ್ಮದ ಮಾರುಕಟ್ಟೆ ಕಾರ್ಯನಿರ್ವಾಹಕರು ಎನ್ನಬಹುದು. ಏಕೆಂದರೆ ಅವರು ಜನರ ಆಹಾರ, ಆಶ್ರಯ ಮತ್ತು ಬಟ್ಟೆಗಳಂತಹ ಮೂಲ ಅಗತ್ಯಗಳನ್ನು ಪೂರೈಸಿ ತಮ್ಮ ನಂಬಿಕೆಯನ್ನು ವಿಸ್ತರಿಸುತ್ತಾರೆ. ಗ್ರಾಮೀಣ ಜನರ ಬಡತನವನ್ನೇ ಉಪಯೋಗಿಸಿಕೊಂಡು ತಮ್ಮ ನಂಬಿಕೆಯನ್ನು ವಿಸ್ತರಿಸಿ, ಸಂಖ್ಯೆ ಹೆಚ್ಚಿಸಲಾಗುತ್ತಿದೆ.

ಡಾ. ಜೇಮ್ಸ್ ಓ ಡೇವಿಸ್ ಅವರು ತಮ್ಮ ಟ್ವಿಟ್ಟರ್ ಸಂದೇಶವೊಂದರಲ್ಲಿ "ಭಾರತದಲ್ಲಿ 6 ಕೋಟಿಯಷ್ಟು ಕ್ರೈಸ್ತರಿದ್ದಾರೆ. ಇದು ಜಗತ್ತಿನಲ್ಲಿಯೇ ಎರಡನೇ ಅತಿದೊಡ್ಡದು. ಶೀಘ್ರದಲ್ಲಿ ಜಗತ್ತಿನಲ್ಲಿಯೇ ದೊಡ್ಡದಾಗಲಿದೆ" ಎಂದಿದ್ದಾರೆ. ಭಾರತದಲ್ಲಿ ಕ್ರೈಸ್ತರ ಸಂಖ್ಯೆ ಹೇಗೆ ಹೆಚ್ಚುತ್ತಿದೆ ಎಂಬುದಕ್ಕೆ ಇದೊಂದು ಉದಾಹರಣೆ ಅಷ್ಟೇ. [ಮತಾಂತರ ಏಕೆ? ಕಾನೂನು ಏನು ಹೇಳುತ್ತದೆ?]

ಡಾ. ಡೇವಿಸ್ ಅವರು ಕಟಿಂಗ್ ಎಡ್ಜ್ ಇಂಟರ್‌ನ್ಯಾಶನಲ್ ಸಂಸ್ಥಾಪಕರು ಮತ್ತು ಬಿಲಿಯನ್ ಸೋಲ್ ನೆಟ್‌ವರ್ಕ್‌ನ ಸಹ ಸಂಸ್ಥಾಪಕರು. ಬಿಲಿಯನ್ ಸೌಲ್ ನೆಟ್‌ವರ್ಕ್ ಎಂಬುದು 2,000 ಕ್ರಿಶ್ಚಿಯನ್ ಸಚಿವರ ಸಂಘಟನೆ. ಇದರ ಉದ್ದೇಶ ಜಗತ್ತಿನಾದ್ಯಂತ 50 ಲಕ್ಷ ಚರ್ಚ್‌ಗಳನ್ನು ನಿರ್ಮಿಸುವುದು. ಕಟಿಂಗ್ ಎಡ್ಜ್ ಇಂಟರ್‌ನ್ಯಾಶನಲ್ ಮತ್ತು ಬಿಲಿಯನ್ ಸೋಲ್ ನೆಟ್‌ವರ್ಕ್‌ನಲ್ಲಿ 4,75,000 ಚರ್ಚ್‌ಗಳಿವೆ ಎಂದರೆ ಇದರ ವ್ಯಾಪ್ತಿ ತಿಲಿಯುತ್ತದೆ.

ಇಂಟೆಲಿಜೆನ್ಸ್ ಬ್ಯೂರೋ ನೀಡಿದ ಅಂಕಿ ಅಂಶಗಳಿಂದ ಗೃಹ ಸಚಿವಾಲಯವು ಸಿದ್ಧಪಡಿಸಿದ ವರದಿಯ ಪ್ರಕಾರ ದೇಶದಲ್ಲಿ ನಿಧಿ ಸಂಗ್ರಹಿಸುವ ಅನೇಕ ಎನ್‌ಜಿಓಗಳಿವೆ. ಅವು ವಾರ್ಷಿಕ 10,500ಕ್ಕೂ ಹೆಚ್ಚು ನಿಧಿಯನ್ನು ಸಂಗ್ರಹಿಸುತ್ತವೆ. ಇಂತಹ ಪ್ರಮುಖ ಎನ್‌ಜಿಓಗಳ ಪಟ್ಟಿಯನ್ನೂ ಐಬಿ ಸಿದ್ಧಪಡಿಸಿದೆ. ಕನ್ಯಾಕುಮಾರಿ ಮೂಲದ ಟುಟಿಕೊರಿನ್ ಡಿಯೋಸೆಸಾನ್ ಅಸೋಸಿಯೇಶನ್ ಮತ್ತು ಟುಟಿಕೋರಿನ್ ಮಲ್ಟಿಪರ್ಪಸ್ ಸೋಶಿಯಲ್ ಸರ್ವೀಸ್ ಸೊಸೈಟಿಗಳು ಪ್ರಮುಖ ಫಲಾನುಭವಿಗಳು. [ದಿಲ್ಶನ್ ಬರಿ ಶೆಹ್ಜಾದ್ ಹೇಳಿದ್ದೇನು?]

ನಂತರದ ಸ್ಥಾನದಲ್ಲಿ ರೂರಲ್ ಅಪ್‌ಲಿಫ್ಟ್ ಸೆಂಟರ್ ಮತ್ತು ಅಸೋಸಿಯೇಶನ್ (ಟಿಡಿಎ) ಆಫ್ ಲ್ಯಾಟಿನ್ ಕ್ಯಾಥೋಲಿಕ್ ಡಿಯೋಸಿಸ್ ಆಫ್ ಟ್ಯುಟಿಕೋರಿನ್ ಬರುತ್ತವೆ. ಇವು ಫ್ರಾನ್ಸ್, ಇಟಲಿ, ಜರ್ಮನಿ ಮತ್ತು ಅಮೆರಿಕದಿಂದ ದೊಡ್ಡ ಪ್ರಮಾಣದಲ್ಲಿ ನಿಧಿ ಸ್ವೀಕರಿಸುತ್ತಿವೆ. ಐಬಿ ಹೇಳುವ ಪ್ರಕಾರ ಹೆಚ್ಚಿನ ನಿಧಿಗಳು ಬಂದಿರುವುದಕ್ಕೆ ಸಾಕ್ಷಿಯೇ ಇಲ್ಲ. ಈ ಕುರಿತು ಐಬಿ ಪ್ರಶ್ನಿಸಿದಾಗ ಹೆಚ್ಚಿನ ನಿಧಿಗಳನ್ನು ಅನಾಥರು, ಲಸಿಕೆ ಶಿಬಿರಗಳು ಮತ್ತು ಫಾದರ್‌ಗಳ ವೇತನಕ್ಕೆ ಬಳಸಲಾಯಿತು ಎಂಬ ಉತ್ತರ ಸಿಕ್ಕಿದೆ.

ಬೆನ್ನಿ ಹಿನ್ ಪ್ರದರ್ಶನ: ಬೆನ್ನಿ ಹಿನ್ ಪ್ರಸಿದ್ಧ ಧರ್ಮ ಬೋಧಕ. ಆತ ಬೆಂಗಳೂರಿಗೆ ಬಂದಿದ್ದೇ ಮತಾಂತರದ ಉದ್ದೇಶದಿಂದ. ಈತನ ಕಾರ್ಯಕ್ರಮ ಆರಂಭವಾದಾಗ ಅಲ್ಲಿ ಸಂಗೀತ ಕಚೇರಿ, ನೃತ್ಯಗಳೂ ಇದ್ದವು. ಬೆನ್ನಿ ಹಿನ್ ವೇದಿಕೆ ಮೇಲೆ ಮೈಕಲ್ ಜಾಕ್ಸನ್‌ ಶೈಲಿಯಲ್ಲಿ ಪ್ರವೇಶಿಸಿದ. ತಕ್ಷಣ ಆತ ಹೇಳಿದ್ದೆಂದರೆ "ಧರ್ಮ ಕಾಯಬಲ್ಲದು. ಮೊದಲು ನಾವು ಈ ಮಹಾ ದೇಶದ ಸುಂದರವಾದ ರಾಷ್ಟ್ರಗೀತೆಯನ್ನು ಗೌರವಿಸೋಣ" ಎಂದಿದ್ದ. ತಾನೋರ್ವ ಮಾರುಕಟ್ಟೆ ನಿಪುಣ ಎಂಬುದನ್ನು ಆತ ಈ ಮೂಲಕ ಸಾಬೀತು ಮಾಡಿ ತೋರಿಸಿದ್ದ. ಧರ್ಮವೇ ಆತನ ಮಾರುಕಟ್ಟೆ ಸರಕಾಗಿತ್ತು.

ಮರುದಿನವೇ ಈ ವೇದಿಕೆ ಮೇಲೆ ಆಸ್ಕರ್ ಫರ್ನಾಂಡಿಸ್ ಮತ್ತು ಮಾರ್ಗರೆಟ್ ಆಳ್ವಾ ಕಾಣಿಸಿಕೊಂಡರು. ಆಗ ಅಲ್ಲಿ ಪವಾಡ ನಡೆಯಿತು. ಅನೇಕರು ಗಾಲಿ ಕುರ್ಚಿಯ ಮೇಲೆ ಬಂದರು ಮತ್ತು ಆತನ ಆಶೀರ್ವಾದದ ನಂತರ ನಿಂತು ಸಂಚರಿಸಿದರು. ಫರ್ನಾಂಡಿಸ್ ಮತ್ತು ಆಳ್ವಾ ನಂತರ ವೇದಿಕೆಗೆ ತೆರಳಿ ಆಗಷ್ಟೇ ಜ್ಞಾನೋದಯವಾದಂತೆ ವರ್ತಿಸಿದರು.

ಧಾರ್ಮಿಕ ಮಾರಕಟ್ಟೆ: ಭಾರತದಲ್ಲಿ ಧಾರ್ಮಿಕ ಮಾರುಕಟ್ಟೆ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಮತಾಂತರವಾಗಲು ಸಿದ್ಧರಿರುವವರಿಗೆ ಮಿಶನರಿಗಳು ಹಣ ಪೂರೈಸುತ್ತಿದ್ದರು. ಇದು ನಂಬರ್ ಗೇಮ್. ಜಗತ್ತಿನಲ್ಲಿ ಕ್ರೈಸ್ತರ ಸಂಖ್ಯೆ ಹೆಚ್ಚಿಸಲು ನಡೆಯುತ್ತಿರುವ ಅತಿದೊಡ್ಡ ಚಳವಳಿ ಇದು. ರೋಗಿಗಳು, ಬಡವರು ಮತ್ತು ದೇವರೆಂದರೆ ಭಯ ಭಕ್ತಿ ಉಳ್ಳವರು ಇವರ ಗುರಿಯಾಗಿದ್ದಾರೆ. ಆಸ್ಪತ್ರೆ ಸೇರಿ, ಚಿಕಿತ್ಸೆ ವೆಚ್ಚ ಭರಿಸಲಾಗದವರ ಮೇಲೆ ಈ ಮಿಶನರಿಗಳು ಪರಿಣಾಮ ಬೀರುತ್ತಿದ್ದರು. [ಕ್ರಿಶ್ಚಿಯನ್ ಮಿಶನರಿಗಳ ಹಣದ ಮೂಲಕ್ಕೆ ಮೌನವೇಕೆ?]

ಫಿಲ್ಪ್ ಗೋಲ್ಡ್‌ಬರ್ಗ್ ಹುಫಿಂಗ್‌ಟನ್ ಪೋಸ್ಟ್‌ನಲ್ಲಿ ಹೀಗೆ ಬರೆದಿದ್ದಾನೆ. "ಭಾರತದಲ್ಲಿ ಮಿಶನರಿಗಳು ಸ್ವಾಮಿಗಳಂತೆ ಕೇಸರಿ ಬಟ್ಟೆ ಧರಿಸಿರುವುದನ್ನು ನಾನು ನೋಡಿದ್ದೇನೆ. ಗುಲ್ಲಿಬಲ್‌ನಂತಹ ಗ್ರಾಮಸ್ಥರಿಗೆ ಹಿಂದೂ ದೇವರು ಕ್ರೈಸ್ತನ ಅವತಾರವೇ ಆಗಿದ್ದಾರೆ. ಮೂಲ ಭಾರತೀಯರು ಕ್ರೈಸ್ತರೇ. ಕತ್ತಲಿನಿಂದ ನಮ್ಮನ್ನು ಬೆಳಕಿನೆಡೆಗೆ ನಡೆಸು" ಎಂದರೆ ಓ ಜೀಸಸ್ ನಮ್ಮನ್ನು ಕಾಪಾಡು ಎಂದರ್ಥ ಎಂದು ಅವರು ಬೋಧಿಸಿದ್ದಾರೆ.

ಮಿಶನ್ ಸೊಸೈಟಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಿಕ್ ಮ್ಯಾಕ್ಲೇನ್ ಹೇಳುವ ಪ್ರಕಾರ ಭಾರತದಲ್ಲಿ ಸುಮಾರು 7.1 ಕೋಟಿ ಕ್ರೈಸ್ತರಿದ್ದಾರೆ. ಕ್ರೈಸ್ತ ಮಿಶನರಿಗಳಿಗೆ ತರಬೇತಿ ನೀಡಿ ಜಗತ್ತಿನೆಲ್ಲೆಡೆಗೆ ಕಳುಹಿಸುವ ಜವಾಬ್ದಾರಿಯನ್ನು ಮಿಶನ್ ಸೊಸೈಟಿ ನಿರ್ವಹಿಸುತ್ತಿದೆ. ತಾವು ಸಮಾಜದ ಕೆಳ ಜಾತಿಯವರನ್ನು ಮೊದಲು ತಲುಪುತ್ತಿದ್ದೇವೆಂದು ಅವರೇ ಹೇಳಿಕೊಳ್ಳುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Read in English: Marketing Religion in India
English summary
As the debate on religious conversions rages on let us take a look at where the exact problem lies and how religion has become such a marketing stunt that the number of conversions in India rose from 24 million in 2000 to 71 million in 2013. When it comes to religious conversions there is more than what meets the eye. It is a deep rooted menace that India has or has not been dealing with. These are not religious preachers. Instead they can be termed as marketing executives of a religion trying to impose their will and faith on people for whom food, shelter and clothing is a basic necessity.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more