NEET Protest: ಹಣ ಪಡೆದು ಫೇಸ್‌ಬುಕ್‌ನಲ್ಲಿ ಕಾನೂನುಬಾಹಿರ ಕಂಟೆಂಟ್ ಬೂಸ್ಟ್: ಕೇಂದ್ರ ಸರ್ಕಾರಕ್ಕೆ ಜುಕರ್‌ಬರ್ಗ್ ಕ್ಷಮೆಯಾಚನೆ

ಅತಿ ದೊಡ್ಡ ಸಾಮಾಜಿಕ ಮಾಧ್ಯಮ ಕಂಪನಿಗಳಲ್ಲೊಂದಾದ ಹಾಗೂ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ವಾಟ್ಸಾಪ್‌ಗಳ ಒಡೆತನ ಹೊಂದಿರುವ 'ಮೆಟಾʼ, ಭಾರತ ಸರ್ಕಾರದ ಮುಂದೆ ತಾನು ಮಾಡಿರುವ ಗಂಭೀರ ಲೋಪಗಳನ್ನ ಒಪ್ಪಿಕೊಂಡಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ವಿಡಿಯೋವನ್ನ ತಾತ್ಕಾಲಿಕವಾಗಿ ಡಿಲೀಟ್ ಮಾಡಿದ್ದು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಕಾನೂನುಬಾಹಿರ ಕಂಟೆಂಟ್‌ಗಳಿಗೆ ಹಣ ಪಡೆದು ಪ್ರಚಾರ ನೀಡಿದ ತಪ್ಪಿಗೆ ಮೆಟಾ ಮುಖ್ಯಸ್ಥ ಮಾರ್ಕ್ ಜುಕರ್‌ಬರ್ಗ್ ಕೇಂದ್ರ ಸರ್ಕಾರದ ಬಳಿ ಕ್ಷಮೆಯಾಚಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

Mark Zuckerberg

ಕಳೆದ ಜುಲೈ 23ರಂದು ಪ್ರಧಾನಿ ನರೇಂದ್ರ ಮೋದಿ ಅವರು ಹಂಚಿಕೊಂಡಿದ್ದ ವಿಡಿಯೋವೊಂದನ್ನ ಮೆಟಾ ಒಡೆತನದ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ಗಳಿಂದ ಏಕಾಏಕಿ ತೆಗೆದುಹಾಕಲಾಗಿತ್ತು. ನಂತರ ಅದನ್ನು ಮತ್ತೆ ಹಾಕಲಾಗಿತ್ತು. ಈ ಕ್ರಮವನ್ನ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ಇದನ್ನಾ ತೀವ್ರವಾಗಿ ಖಂಡಿಸಿತ್ತು.

"ತಾಂತ್ರಿಕ ದೋಷದಿಂದಾಗಿ ವಿಡಿಯೋ ಡಿಲೀಟ್ ಆಗಿತ್ತು" ಎಂದು ಮೆಟಾ ನೀಡಿದ ಸಮಜಾಯಿಷಿ ಸಚಿವಾಲಯಕ್ಕೆ ಸಮಾಧಾನ ತಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಮೆಟಾ ಪ್ರತಿನಿಧಿಗಳಿಗೆ ಸಮನ್ಸ್ ಜಾರಿ ಮಾಡಿ ತರಾಟೆಗೆ ತೆಗೆದುಕೊಂಡಿತ್ತು. ಈ ಗಂಭೀರ ಲೋಪಕ್ಕಾಗಿ ಇದೀಗ ಮಾರ್ಕ್ ಜುಕರ್‌ಬರ್ಗ್ ಕ್ಷಮೆಯಾಚಿಸಿದ್ದಾರೆ.ಕಾನೂನುಬಾಹಿರ ಕಂಟೆಂಟ್ ಬೂಸ್ಟ್

ನವದೆಹಲಿಯಲ್ಲಿ ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್ ಹಾಗೂ ಐಟಿ ಕಾರ್ಯದರ್ಶಿ ಎಸ್. ಕೃಷ್ಣನ್ ಸೇರಿದಂತೆ ಉನ್ನತ ಅಧಿಕಾರಿಗಳನ್ನ ಮೆಟಾದ ಗ್ಲೋಬಲ್ ಅಫೇರ್ಸ್ ಅಧಿಕಾರಿ ಜೋಯಲ್ ಕಪ್ಲಾನ್ ನೇತೃತ್ವದ ಉನ್ನತ ಮಟ್ಟದ ನಿಯೋಗವು ಭೇಟಿಯಾಗಿ ಸುಮಾರು 45 ನಿಮಿಷಗಳ ಕಾಲ ಚರ್ಚೆ ನಡೆಸಿದೆ.

ಈ ಸಭೆಯಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ವಿಷಯಗಳು (CSEAM), ಡೀಪ್‌ಫೇಕ್ ವಿಡಿಯೋಗಳು ಮತ್ತು ಕಾನೂನುಬಾಹಿರ ಕಂಟೆಂಟ್‌ಗಳನ್ನು ಹೆಚ್ಚಿನ ಜನರಿಗೆ ತಲುಪಿಸಲು ಹಣ ಪಡೆದು ಬೂಸ್ಟ್ ಮಾಡಿರುವುದನ್ನಾ ಮೆಟಾ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಮೆಟಾದಲ್ಲಿ ಇಂತಹ ವಿಷಯಗಳ ಪ್ರಚಾರಕ್ಕೆ ಅವಕಾಶ ನೀಡಿದ್ದಕ್ಕಾಗಿ ಕಂಪನಿ ಪಶ್ಚಾತ್ತಾಪ ವ್ಯಕ್ತಪಡಿಸಿದ್ದು, ಈ ಕುರಿತು ಹೆಚ್ಚಿನ ವಿವರಣೆ ನೀಡಲು ಮೆಟಾ ಅಧಿಕಾರಿಗಳನ್ನ ಮತ್ತೆ ಕರೆಸುವ ಸಾಧ್ಯತೆಯಿದೆ.

ಭಾರತದ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಅಡಿಯಲ್ಲಿ ಮೆಟಾ ಕೇವಲ ಒಂದು ಮಧ್ಯವರ್ತಿ ಪ್ಲಾಟ್‌ಫಾರ್ಮ್ ಅಲ್ಲ ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ. ಯಾವ ಬಳಕೆದಾರರಿಗೆ ಯಾವ ರೀತಿಯ ಕಂಟೆಂಟ್ ಕಾಣಿಸಬೇಕು ಎಂಬುದನ್ನು ಸ್ವತಃ ಮೆಟಾ ತನ್ನ ಅಲ್ಗಾರಿದಮ್ ಮೂಲಕ ನಿರ್ಧರಿಸುವುದರಿಂದ, ಐಟಿ ಕಾಯ್ದೆಯ 'ಸೇಫ್ ಹಾರ್ಬರ್' (ಕಾನೂನು ರಕ್ಷಣೆ) ನಿಯಮವು ಈ ಕಂಪನಿಗೆ ಅನ್ವಯಿಸುವುದಿಲ್ಲ ಎಂಬುದನ್ನ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಸಂಸದೀಯ ಸಮಿತಿ ಎಚ್ಚರಿಕೆ

ಬಿಜೆಪಿ ಸಂಸದ ನಿಶಿಕಾಂತ್ ದುಬೆ ನೇತೃತ್ವದ ಮಾಹಿತಿ ತಂತ್ರಜ್ಞಾನದ ಕುರಿತಾದ ಸಂಸದೀಯ ಸ್ಥಾಯಿ ಸಮಿತಿಯು ಕೂಡ ಮಕ್ಕಳ ಮೇಲಿನ ದೌರ್ಜನ್ಯ ಮತ್ತು ಮಹಿಳೆಯರ ವಿರುದ್ಧದ ಅವಹೇಳನಕಾರಿ ಕಂಟೆಂಟ್‌ಗಳನ್ನ ಪ್ರಸಾರ ಮಾಡುವ ಪ್ಲಾಟ್‌ಫಾರ್ಮ್‌ಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿತ್ತು.

ಕೋಟ್ಯಂತರ ಭಾರತೀಯರು ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ವಾಟ್ಸಾಪ್ ಬಳಸುತ್ತಿರುವುದರಿಂದ, ದೇಶದ ಕಾನೂನುಗಳು ಮತ್ತು ಸುರಕ್ಷತಾ ನಿಯಮಗಳನ್ನ ಕಟ್ಟುನಿಟ್ಟಾಗಿ ಪಾಲಿಸಲೇಬೇಕು ಎಂದು ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+