Manipur Exit Polls Results 2022: ಗದ್ದುಗೆಯತ್ತ ಬಿಜೆಪಿ
ಮಣಿಪುರದ ಒಟ್ಟು 60 ವಿಧಾನಸಭೆ ಕ್ಷೇತ್ರಗಳಿಗೆ ಚುನಾವಣೆ ನಡೆಸಲಾಗಿದ್ದು, ಸರ್ಕಾರ ರಚನೆಗೆ 31 ಸ್ಥಾನಗಳ ಅಗತ್ಯವಿರುತ್ತದೆ. ಈ ಹಿನ್ನೆಲೆ ಮಣಿಪುರಕ್ಕೆ ಸಂಬಂಧಿಸಿದಂತೆ ಎಬಿಸಿ ನ್ಯೂಸ್-ಸಿವೋಟರ್, ಇಂಡಿಯಾ ನ್ಯೂಸ್, ಇಂಡಿಯಾ ಟುಡೇ ಆಕ್ಸಿಸ್ ಮೈ ಇಂಡಿಯಾ, ರಿಪಬ್ಲಿಕ್, ಜೀ ನ್ಯೂಸ್ ಸೇರಿದಂತೆ ಹಲವು ಸಂಸ್ಥೆಗಳು ಚುನಾವಣೋತ್ತರ ಸಮೀಕ್ಷೆಯನ್ನು ನಡೆಸಿವೆ. ಈ ಎಲ್ಲ ಸಮೀಕ್ಷೆಗಳ ಒಟ್ಟಾರೆ ಫಲಿತಾಂಶವು ಹೀಗಿದೆ:
ಒಟ್ಟು ಸ್ಥಾನ 60, ಮ್ಯಾಜಿಕ್ ನಂಬರ್ 31
ಸಂಸ್ಥೆ- ಬಿಜೆಪಿ- ಕಾಂಗ್ರೆಸ್ ಪ್ಲಸ್- ಇತರೆ
ಎಬಿಪಿ ಮಳಾ ಸಿ ವೋಟರ್- 23 ರಿಂದ 27; 12 ರಿಂದ 16; 15 ರಿಂದ 27
ಇಂಡಿಯಾ ನ್ಯೂಸ್: 23 ರಿಂದ 28; 10 ರಿಂದ 14; 19 ರಿಂದ 26
ಇಂಡಿಯಾ ಟುಡೇ ಆಕ್ಸಿಸ್ ಮೈ ಇಂಡಿಯಾ: 33 ರಿಂದ 43; 4 ರಿಂದ 8; 10 ರಿಂದ 23
ಇಂಡಿಯಾ ಟಿವಿ ಗ್ರೌಂಡ್ ಜೀರೋ ರಿಸರ್ಚ್: 26 ರಿಂದ 31; 12 ರಿಂದ 17; 11 ರಿಂದ 22
ರಿಪಬ್ಲಿಕ್ ಪಿ ಮಾರ್ಕ್: 27 ರಿಂದ 31; 11 ರಿಂದ 17; 11 ರಿಂದ 23
ಜೀ ನ್ಯೂಸ್-ಡಿಸೈನ್ ಬಾಕ್ಸ್ಡ್: 32 ರಿಂದ 38; 12 ರಿಂದ 17; 7 ರಿಂದ 14
ಮಣಿಪುರ ಒಟ್ಟಾರೆ ಫಲಿತಾಂಶ: poll of EXIT polls
ಬಿಜೆಪಿ - 30
ಕಾಂಗ್ರೆಸ್ - 13
ಇತರೆ - 17

ಉತ್ತರ ಪ್ರದೇಶದ 403 ವಿಧಾನಸಭೆ ಕ್ಷೇತ್ರಗಳಿಗೆ ಏಳು ಹಂತಗಳಲ್ಲಿ ಮತದಾನ ನಡೆಸಲಾಗಿದೆ. ಫೆಬ್ರವರಿ 10, 14, 20, 23 ಮತ್ತು ಮಾರ್ಚ್ 3 ಮತ್ತು 7 ರಂದು ಮತದಾನ ನಡೆಸಲಾಗಿದೆ. ಗೋವಾ ಮತ್ತು ಉತ್ತರಾಖಂಡದಲ್ಲಿ ಫೆಬ್ರವರಿ 14 ರಂದು ಮತದಾನ ನಡೆಯಲಿದೆ. ಪಂಜಾಬ್‌ನ 117 ವಿಧಾನಸಭೆ ಕ್ಷೇತ್ರಗಳಿಗೆ ಫೆಬ್ರವರಿ 20 ರಂದು ಮತದಾನ ನಡೆಯಲಿದೆ. ಮಣಿಪುರದಲ್ಲಿ ಫೆಬ್ರವರಿ 28 ಮತ್ತು ಮಾರ್ಚ್ 5 ರಂದು ಎರಡು ಹಂತಗಳಲ್ಲಿ ಮತದಾನ ನಡೆದಿದ್ದು, ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.












Click it and Unblock the Notifications