ಆತನ ಹೊಟ್ಟೆಯಲ್ಲಿತ್ತು 8 ಚಮಚ, ಚಾಕು, ಸ್ಕ್ರೂಡ್ರೈವರ್, ಟೂತ್ ಬ್ರಶ್ ಇತ್ಯಾದಿ....

ಮನಾಲಿ, ಮೇ 25 : ವ್ಯಕ್ತಿಯೊಬ್ಬರ ದೇಹದಲ್ಲಿ ಎಂಟು ಚಮಚ, ಎರಡು ಟೂತ್ ಬ್ರಷ್, ಒಂದು ಚಾಕು, ಎರಡು ಸ್ಕ್ರೂ ಡ್ರೈವರ್ ಗಳನ್ನು ಶಸ್ತ್ರ ಚಿಕಿತ್ಸೆಯ ಮೂಲಕ ಹೊರತೆಗೆದ ವೈದ್ಯರು ಈ ವಿಲಕ್ಷಣ ಸಂದರ್ಭಕ್ಕೆ ಆಶ್ಚರ್ಯ ಚಕಿತರಾಗಿದ್ದಾರೆ.

ಹಿಮಾಚಲ ಪ್ರದೇಶದ ಮಂಡಿಯ ಸುಂದೆರ್ ನಗರ ನಿವಾಸಿಯೊಬ್ಬರು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು. ಅವರು ಇವುಗಳನ್ನೆಲ್ಲ ಗೊತ್ತಿದ್ದೋ, ಗೊತ್ತಿಲ್ಲದೆಯೋ ನುಂಗಿದ್ದು, ಸ್ಕ್ಯಾನಿಂಗ್ ಸಂದರ್ಭದಲ್ಲಿ ಅವರ ದೇಹದಲ್ಲಿ ಕಂಡ ವಸ್ತುಗಳಿಂದ ವೈದ್ಯರೇ ಹೌಹಾರಿದ್ದಾರೆ.

Manali doctors find spoon, knife, tooth brush in mans stomach

ಹಿಮಾಚಲ ಪ್ರದೇಶದ ಮಂಡಿಯ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಹೊಟ್ಟೆ ನೋವಿನ ಸಮಸ್ಯೆಯಿಂದ ಈ ವ್ಯಕ್ತಿ ದಾಖಲಾಗಿದ್ದರು. ಈ ಸಂದರ್ಭದಲ್ಲಿ ಅವರ ಹೊಟ್ಟೆಯನ್ನು ಸ್ಕ್ಯಾನ್ ಮಾಡಿದಾಗ ಅದರಲ್ಲಿ ಈ ಎಲ್ಲಾ ವಸ್ತುಗಳಿರುವುದು ಪತ್ತೆಯಾಗಿದೆ. ಅವರಿಗೆ ಇದೀಗ ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡಲಾಗಿದ್ದು, ಅವರು ಸದ್ಯಕ್ಕೆ ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಚಾಕುವನ್ನು ನುಂಗಿದ್ದರಿಂದ ಅದರ ತುದಿ ಹೊಟ್ಟೆಯ ಒಳಭಾಗಗಕ್ಕೆ ತಾಕಿ, ಹೊಟ್ಟೆಯ ಒಳಗೂ ಸಣ್ಣ ಪುಟ್ಟ ಗಾಯಗಳಾಗಿದ್ದವು. ಸತತ ನಾಲ್ಕು ಗಂಟೆಗಳ ಶಸ್ತ್ರ ಚಿಕಿತ್ಸೆಯ ನಂತರ ವೈದ್ಯರು ಆತನ ಸ್ಥಿತಿ ಸ್ಥಿರವಾಗಿದೆ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+