Viral Video:ಮಣ್ಣು ತೆಗೆಯುವ ಜೆಸಿಬಿಯಲ್ಲಿ ಬೆನ್ನುಜ್ಜಿಸಿಕೊಂಡ ವ್ಯಕ್ತಿ
ಸಾಮಾನ್ಯವಾಗಿ ಜೆಸಿಬಿಯನ್ನು ಮಣ್ಣು ಅಗೆಯಲು ಅಥವಾ ಕಲ್ಲನ್ನು ನೆಲದಿಂದ ಬೇರ್ಪಡಿಸಿ ಮತ್ತೊಂದು ಕಡೆ ಹಾಕಲು ಬಳಸುತ್ತೇವೆ.
ಆದರೆ ಇಲ್ಲೊಬ್ಬ ವ್ಯಕ್ತಿ ಜೆಸಿಬಿಯ ಬಕೆಟ್‌ನ್ನು ಬೆನ್ನು ಉಜ್ಜಿಸಿಕೊಳ್ಳಲು ಬಳಸಿರುವುದು ದೊಡ್ಡ ಸುದ್ದಿಯಾಗಿದೆ.
ಈ ವಿಚಾರ ನಿಮಗೆ ಅಚ್ಚರಿ ಎನಿಸಿದರೂ ಸತ್ಯ. ಯಾಕೆಂದರೆ ಇದಕ್ಕೆ ಸಾಕ್ಷಿ ಎಂಬಂತೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಕೂಡ ವೈರಲ್ ಆಗುತ್ತಿದೆ.
41 ಸೆಕೆಂಡಿನ ವೀಡಿಯೋವನನ್ನು ಅಬ್ದುಲ್ ನಝಾರ್ ಎಂಬವರು ತಮ್ಮ ಫೇಸ್‍ಬುಕ್ ಖಾತೆಯಿಂದ ಶೇರ್ ಮಾಡಿಕೊಂಡಿದ್ದಾರೆ. ಈ ವೀಡಿಯೋ ನೋಡಿದ ನೆಟ್ಟಿಗರು ನಗೆಗಡಲಲ್ಲಿ ತೇಲಿದ್ದಾರೆ. ಅಲ್ಲದೆ ಸಾಕಷ್ಟು ತಮಾಷೆಯ ಕಾಮೆಂಟ್‍ಗಳು ಬಂದಿವೆ.

ಈ ಎಲ್ಲಾ ದೃಶ್ಯಗಳನ್ನು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದ್ದು, ವ್ಯಕ್ತಿಯ ಈ ಕೆಲಸಕ್ಕೆ ನೆಟ್ಟಿಗರು ಇದೊಂದು ಬೇಜವಾಬ್ದಾರಿತನ ಎಂದು ಕಿಡಿಕಾರಿದ್ದಾರೆ. ವೀಡಿಯೋ ಫೇಸ್‍ಬುಕ್ ನಲ್ಲಿ ಶೇರ್ ಆಗುತ್ತಿದ್ದಂತೆಯೇ ಇದುವರೆಗೆ ಸುಮಾರು 3.4 ಸಾವಿರಕ್ಕೂ ಅಧಿಕ ಬಾರಿ ವೀಕ್ಷಣೆ ಆಗಿದೆ. ಅಲ್ಲದೆ 2.3 ಸಾವಿರಕ್ಕೂ ಹೆಚ್ಚು ಮಂದಿ ಶೇರ್ ಮಾಡಿದ್ದಾರೆ.
ಕಟ್ಟಡ ನಿರ್ಮಾಣ ಪ್ರದೇಶದಲ್ಲಿ ವ್ಯಕ್ತಿ ಮೊದಲು ತನ್ನ ಟವೆಲ್ ನಿಂದ ಬೆನ್ನು ಉಜ್ಜಿಕೊಂಡಿದ್ದಾರೆ. ಆದರೆ ಅದರಿಂದ ಅವರಿಗೆ ತೃಪ್ತಿ ಸಿಕ್ಕಿಲ್ಲ. ಹೀಗಾಗಿ ಜೆಸಿಬಿ ಬಳಿ ಹೋಗಿ ಅದರ ಬಕೆಟ್ ಮುಂದೆ ಬಾಗಿ ನಿಲ್ಲುತ್ತಾರೆ.
ಈ ವೇಳೆ ಜೆಸಿಬಿ ಚಾಲಕ ಅದರ ಬಕೆಟ್‌ನಿಂದ ವ್ಯಕ್ತಿಯ ಬೆನ್ನನ್ನು ಉಜ್ಜುತ್ತಾರೆ. ಇದರಿಂದ ವ್ಯಕ್ತಿಗೆ ಸಮಾಧಾನವಾದಂತೆ ತೋರುತ್ತಿದೆ. ಆದರೆ ಈ ಘಟನೆ ಎಲ್ಲಿ ನಡೆದಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲ.
ಕಳೆದ ಜುಲೈ ತಿಂಗಳಲ್ಲಿ ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಪ್ರಶ್ನೆ ಮಾಡಿದನೆಂದು ಸಿಟ್ಟುಗೊಂಡ ಚಾಲಕನ ಜೆಸಿಬಿ ಬಕೆಟ್ ನಿಂದ ಆತನ ತಲೆಗೆ ಹೊಡೆದ ಘಟನೆಯೊಂದು ನಡೆದಿತ್ತು.












Click it and Unblock the Notifications