Video: 28 ವರ್ಷದ ತಂದೆಗೆ ವ್ಯಕ್ತಿಯಿಂದ ಪಾಯಿಂಟ್-ಬ್ಲಾಂಕ್ ರೇಂಜ್ ನಲ್ಲಿ ಗುಂಡೇಟು
ನವದೆಹಲಿ, ಆಗಸ್ಟ್ 14: ಮಗಳನ್ನು ಹೊತ್ತು ರಸ್ತೆಯಲ್ಲಿ ತೆರಳುತ್ತಿದ್ದ ತಂದೆ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿದ ಹೃದಯ ವಿದ್ರಾವಕ ಘಟನೆಯು ಉತ್ತರ ಪ್ರದೇಶದ ಶಹಾಜಹಾನ್‌ಪುರದಲ್ಲಿ ಭಾನುವಾರ ಸಂಜೆ ನಡೆದಿದೆ ಎಂದು ವರದಿ ಆಗಿದೆ.
ಶೋಯೆಬ್ (28) ಘಟನೆಯಲ್ಲಿ ಗುಂಡೇಟು ತಿಂದ ದುರ್ದೈವಿ. ತನ್ನ ಮಗಳನ್ನು ಸಂಜೆ ಭುಜದ ಮೇಲೆ ಹೊತ್ತುಕೊಂಡು ಶಹಾಜಹಾನ್‌ಪುರದ ರಸ್ತೆಯಲ್ಲಿ ಶೋಯೆಬ್ ತೆರಳುತ್ತಿದ್ದ. ಇದೇ ವೇಳೆ ಶಸ್ತ್ರಸಜ್ಜಿತರಾಗಿ ಬಂದ ದುಷ್ಕರ್ಮಿಯೊಬ್ಬ ಹತ್ತಿರ ಬಂದು ಪಾಯಿಂಟ್-ಬ್ಲಾಂಕ್ ರೇಂಜ್ ನಲ್ಲಿ ಆತನ ತಲೆಗೆ ಗುಂಡಿಕ್ಕಿ ಸಹಚರರ ಬೈಕ್ ಮೂಲಕ ಪರಾರಿಯಾಗಿದ್ದಾನೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣ X ನಲ್ಲಿ ಓಡಾಡುತ್ತಿದೆ.

ಸಿಸಿಟಿವಿ ಸೆರೆಯಾದ ವಿಡಿಯೋದಲ್ಲಿ, ಮಗಳನ್ನು ಸಂಜೆ ಭುಜದ ಮೇಲೆ ಹೊತ್ತುಕೊಂಡು ಶೋಯೆಬ್ ಹೊರಟಿದ್ದ. ಆಗ ಆತನಿಗೆ ಎದುರಾಗಿ ಬಂದ ಬೈಕ್ ಆತನನ್ನು ದಾಟಿ ಮುಂದೆ ಬಂತು ನಿಲ್ಲುತ್ತದೆ. ಆದರೆ ಮೊದಲೇ ಶಸ್ತ್ರಸಜ್ಜಿತ ವ್ಯಕ್ತಿ ದೂರದಲ್ಲೇ ಇಳಿದುಕೊಂಡಿದ್ದ ಅಲ್ಲದೇ ಆತ ಶೊಯೆಬ್ ಬರುವುದನ್ನು ಗಮನಿಸುತ್ತಿದ್ದ.
ಚಿಕ್ಕ ಮಗಳನ್ನು ಭುಜದ ಮೇಲೆ ಹೊತ್ತುಕೊಂಡು ಶೋಯೆಬ್ ಹತ್ತಿರ ಬರುತ್ತಿದ್ದಂತೆ ಪಾಯಿಂಟ್ ಬ್ಲಾಂಕ್ ರೇಂಜಿನಲ್ಲಿ ತಲೆಗೆ ಗುಂಡು ಹಾರಿಸಿದ್ದಾರೆ. ಕೂಡಲೇ ಆತ ನೆಲಕ್ಕಪ್ಪಳಿಸುತ್ತಿದ್ದಂತೆ ದುಷ್ಕರ್ಮಿ ಮುಂದೆ ನಿಂತಿದ್ದ ಇಬ್ಬರು ಸಹಚರರ ಬೈಕ್ ಏರಿಕೆ ಓಡಿದ್ದಾನೆ. ಇನ್ನೂ ಗುಂಡೇಟು ಸದ್ದು ಕೇಳುತ್












Click it and Unblock the Notifications