ಕೊಲ್ಕೊತ್ತಾದಲ್ಲಿ ಭಾಗವತ್ ಕಾರ್ಯಕ್ರಮದ ಆಡಿಟೋರಿಯಂ ಬುಕ್ಕಿಂಗ್ ರದ್ದು

ಕೋಲ್ಕತಾ, ಸೆಪ್ಟೆಂಬರ್ 5: ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಕಾರ್ಯಕ್ರಮಕ್ಕೆ ನಿಗದಿಯಾಗಿದ್ದ ಕೋಲ್ಕತಾದ ಆಡಿಟೋರಿಯಂ ಬುಕ್ಕಿಂಗ್ ನ್ನು ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಸರಕಾರ ರದ್ದುಗೊಳಿಸಿದೆ.

ಆಡಿಟೋರಿಯಂ ನವೀಕರಣ ಕೆಲಸವಿರುವುದರಿಂದ ಮೋಹನ್ ಭಾಗವತ್ ಕಾರ್ಯಕ್ರಮದ ಬುಕ್ಕಿಂಗ್ ರದ್ದುಗೊಳಿಸಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Mamata Banerjee government cancels auditorium booking for Mohan Bhagwat event

ನವೀಕರಣ ಕಾರ್ಯ ನಡೆಯುತ್ತಿರುವ ಸಂದರ್ಭದಲ್ಲಿ ಮೋಹನ್ ಭಾಗವತ್ ಕಾರ್ಯಕ್ರಮಕ್ಕೆ ಭದ್ರತೆ ಒದಗಿಸುವುದು ಕಷ್ಟ ಎಂದು ಸಮಜಾಯಿಷಿ ನೀಡಿದ್ದಾರೆ ಪಶ್ಚಿಮ ಬಂಗಾಳದ ಅಧಿಕಾರಿಗಳು.

ಅಕ್ಟೋಬರ್ 3ರಂದು ಮೋಹನ್ ಭಾಗವತ್ ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡಲಿದ್ದರು. ಇದಕ್ಕಾಗಿ ಕೊಲ್ಕೊತ್ತಾದ ಮಹಾಜಾತಿ ಸದನ ಆಡಿಟೋರಿಯಂನ್ನು ಕಳೆದ ಜೂನ್ ನಲ್ಲೇ ಬುಕ್ ಮಾಡಲಾಗಿತ್ತು. ಆದರೆ, ಅಧಿಕಾರಿಗಳು ಮುಂಗಡ ಕಾಯ್ದಿರಿಸಿದ ಆಡಿಟೋರಿಯಂನ್ನು ದಿಢೀರ್ ರದ್ದು ಮಾಡಿದ್ದಾರೆ.

ಬುಕ್ಕಿಂಗ್ ರದ್ದುಗೊಳಿಸಿರುವುದನ್ನು ಆರೆಸ್ಸೆಸ್ ತೀವ್ರವಾಗಿ ಖಂಡಿಸಿದ್ದು, ಮಮತಾ ಬ್ಯಾನರ್ಜಿ ಸರಕಾರದ ದ್ವೇಷದ ಕ್ರಮ ಎಂದು ಟೀಕಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+