ಮೇಕ್ ಇನ್ ಇಂಡಿಯಾ: ಜಿಯೋಮಿ ಮೊಬೈಲ್ ಮಾರುಕಟ್ಟೆಗೆ
ವಿಶಾಖಪಟ್ಟಣ, ಆಗಸ್ಟ್. 10: ಆಂಧ್ರಪ್ರದೇಶ ಮಖ್ಯಮಂತ್ರಿ ಚಂದ್ರಬಾಬು ನಾಯ್ಡು ಭಾರತದಲ್ಲಿ ತಯಾರಾದ ಮೊದಲ ಜಿಯೋಮಿ ಮೊಬೈಲ್ ನ್ನು ಸೋಮವಾರ ಬಿಡುಡೆ ಮಾಡಿದರು. ಉದ್ಯೋಗವಕಾಶಗಳ ಸೃಷ್ಟಿಯೊಂದಿಗೆ ದೇಶದ ಆರ್ಥಿಕತೆ ಅಭಿವೃದ್ಧಿಗೆ ಇಂಥ ಕಾರ್ಯಕ್ರಮಗಳು ನೆರವಾಗುತ್ತವೆ ಎಂದು ಚಂದ್ರಬಾಬು ನಾಯ್ಡು ತಿಳಿಸಿದರು.
ನರೇಂದ್ರ ಮೋದಿ ಅವರ ಕನಸಿನ ಮೇಕ್ ಇನ್ ಇಂಡಿಯಾ ಯೋಜನೆಗೆ ವಿದೇಶಿ ಕಂಪನಿಗಳು ಅಪಾರ ಪ್ರಮಾಣದ ಬಂಡವಾಳ ಹೂಡಿಕೆಗೆ ಮುಂದಾಗಿವೆ. ಈಗ ಭಾರತದಲ್ಲೇ ತಯಾರಾದ ಮೊಬೈಲ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.[ಮೇಕ್ ಇನ್ ಇಂಡಿಯಾ: ಉತ್ಪಾದನೆ ಆರಂಭಿಸಿದ ತೈವಾನ್ ಕಂಪನಿ]
ಮೇಕ್ ಇನ್ ಇಂಡಿಯಾ ಅಭಿಯಾನದ ಅಡಿ ತಯಾರಾದ ಮೊಟ್ಟ ಮೊದಲ ಇಲೆಕ್ಟ್ರಾನಿಕ್ ವಸ್ತು ಎಂಬಹ ಹೆಗ್ಗಳಿಕೆಯನ್ನಿ ಮೊಬೈಲ್ ಪಡೆದುಕೊಂಡಿತು. ಕಾರ್ಯಕ್ರಮದಲ್ಲಿ ಆಂಧ್ರ ಪ್ರದೇಶದ ಸಚಿವರುಗಳು, ಜಿಯೋಮಿ ಯ ಸಿಇಒ ಮನು ಜೈನ್ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು.(ಪಿಟಿಐ ಚಿತ್ರಗಳು)

ಏನೇನು ವಿಶೇಷತೆಗಳಿವೆ?
ಭಾರತದಲ್ಲಿ ತಯಾರಾದ ಜಿಯೋಮಿ ಸ್ಮಾರ್ಟ್ ಫೋನಿನ ವಿಶೇಷತೆಗಳನ್ನು ತಿಳಿಸಿಕೊಟ್ಟ ಕಂಪನಿಯ ಹುಗೋ ಬರ್ರಾ. ಮೊಬೈಲ್ ಮಾರುಕಟ್ಟೆ ವಿಸ್ತಾರಕ್ಕೆ ಸ್ನ್ಯಾಪ್ ಡೀಲ್ ನೊಂದಿಗೂ ಹೊಂದಾಣಿಕೆ ಮಾತುಕತೆ ನಡೆಯುತ್ತಿದೆ.

ಮೊಬೈಲ್ ಲೋಕಾರ್ಪಣೆ
ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನಮ್ಮ ದೇಶದಲ್ಲಿಯೇ ತಯಾರಾದ ಜಿಯೋಮಿ ಮೊಬೈಲ್ ನ್ನು ವಿಶಾಖಪಟ್ಟಣದಲ್ಲಿ ಸೋಮವಾರ ಲೋಕಾರ್ಪಣೆ ಮಾಡಿದರು.

ನಿಮಗಿದೇ ಸ್ವಾಗತ
ಹುಗೋ ಬರ್ರಾ ಅವರನ್ನು ಹಸ್ತ ಲಾಘವ ನೀಡಿ ಕಾರ್ಯಕ್ರಮಕ್ಕೆ ಸ್ವಾಗತಿಸಿದ ಚಂದ್ರಬಾಬು ನಾಯ್ಡು. ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಮೇಕ್ ಇನ್ ಇಂಡಿಯಾ ಅಭಿಯಾನ ಪ್ರಾರಂಭವಾದ ಕೆಲವೇ ದಿನಗಳಲ್ಲಿ ಘಟಕ ಸ್ಥಾಪನೆ ಮಾಡಲಾಗಿತ್ತು.

ಮೇಕ್ ಇನ್ ಆಂಧ್ರಪ್ರದೇಶ
ನೂತನ ಮೊಬೈಲ್ ಬಿಡುಗಡೆ ನಂತರ ಪ್ರದರ್ಶಿಸಿದ ಚಂದ್ರಬಾಬು ನಾಯ್ಡು. ಚೀನಾದಲ್ಲಿ ತಯಾರಾಗುವ ಮೊಬೈಲ್ ನಲ್ಲಿ ಇರುವ ಎಲ್ಲ ಸೌಲಭ್ಯಗಳನ್ನು ಇಲ್ಲಿ ತಯಾರು ಮಾಡುವ ಮೊಬೈಲ್ ನಲ್ಲೂ ಅಳವಡಿಕೆ ಮಾಡಲಾಗುವುದು. ಭಾರತೀಯರಿಗೆ ಮತ್ತೂ ಕಡಿಮೆ ಬೆಲೆಯಲ್ಲಿ ಮೊಬೈಲ್ ಲಭ್ಯವಾಗುತ್ತದೆ ಎಂದು ಹಿಂದೆ ಹೇಳಲಾಗಿತ್ತು.












Click it and Unblock the Notifications